Jan 23, 2021, 11:48 AM IST
ವಾಷಿಂಗ್‌ಟನ್ (ಜ. 23): ದೇಶದಲ್ಲಿ ನೂರು ದಿನ ಮಾಸ್ಕ್ ಧಾರಣೆ ಕಡ್ಡಾಯ ಸೇರಿ ಹಲವು ನಿಯಮಗಳಿಗೆ ಬೈಡನ್ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಸಹಿ ಮಾಡಿದ್ದಾರೆ. ಆದರೂ, ಕೊರೋನಾದೊಂದಿಗೆ ಇನ್ನಷ್ಟು ತಿಂಗಳ ಕಾಲ ಬದುಕುವುದು ಅನಿವಾರ್ಯ. ರೋಗ ತಡೆಯಲು ಅನ್ಯ ಮಾರ್ಗವೇ ಇಲ್ಲವೆಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಕ್ಕೆ ಅತೀವ ವಿರೋಧ ವ್ಯಕ್ತವಾಗುತ್ತಿದೆ.
ಶಿವಮೊಗ್ಗ ಹುಣಸೋಡು ಸ್ಫೋಟಕ್ಕೆ ಜಿಲೆಟಿನ್ ಕಾರಣವಲ್ಲ, ಹೊರಬಿತ್ತು Exclusive ಮಾಹಿತಿ!
ಸೈನಿಕರ ಕರುಣಾಜನಕ ಸ್ಥಿತಿ ಫೋಟೋವೊಂದು ವೈರಲ್ ಆಗಿದ್ದು, ಅಧಿಕಾರಕ್ಕೆ ಬಂದ ಮೂರೇ ದಿನಗಳಲ್ಲಿ ಡೆಮೋಕ್ರೇಟ್ ಪಕ್ಷದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಸಂಸತ್ತಿನಲ್ಲಿ ಬಿರುಸಿನ ಚರ್ಚೆಯೂ ಆಗಿದೆ. ಇನ್ನು ಅಮೆರಿಕ ಸಂಸತ್ ಮೇಲೆ ದಾಳಿ ನಡೆಸಲು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರೋಕ್ಷವಾಗಿ ಸುಮಾರು 2.7 ದಶಲಕ್ಷ ಡಾಲರ್ ನೀಡಿದ್ದಾರೆಂಬ ಸತ್ಯ ಇದೀಗ ಬಹಿರಂಗಗೊಂಡಿದೆ. ಇನ್ನು ಸೆನೇಟ್‌ನಲ್ಲಿ ಟ್ರಂಪ್ ವಿರುದ್ಧ ಎರಡನೇ ಹಂತದ ವಾಗ್ದಂಡನೆ ವಿಚಾರಣೆ ನಡೆಯಬೇಕಿದ್ದು, ಫೆ.8ಕ್ಕೆ ಆರಂಭವಾಗಲಿದೆ, ಎಂದು ಡೆಮೋಕ್ರೇಟ್ ಲೀಡರ್ ಚಾರ್ಲ್ಸ್ ಶೂಮರ್ ಘೋಷಿಸಿದ್ದಾರೆ.ಇವೆಲ್ಲಾ ಸುದ್ದಿಗಳ ಸಂಕ್ಷಿಪ್ತ ವರದಿ ಟ್ರೆಂಡಿಂಗ್ ನ್ಯೂಸ್‌ನಲ್ಲಿ