ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?

ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?

Published : Sep 05, 2025, 02:25 PM IST

ಚೀನಾದ ಮಿಲಿಟರಿ ಪರೇಡ್‌ನಲ್ಲಿ ಕಿಮ್ ಜಾಂಗ್ ಉನ್ ಅವರ ಮಗಳು ಕಾಣಿಸಿಕೊಂಡಿದ್ದು, ಉತ್ತರ ಕೊರಿಯಾದ ಭವಿಷ್ಯದ ನಾಯಕತ್ವದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಕಿಮ್ ಜಾಂಗ್ ಉನ್ ಅವರ ನಿರಂಕುಶ ಆಡಳಿತದಲ್ಲಿ ಈ ಬೆಳವಣಿಗೆ ಏನನ್ನು ಸೂಚಿಸುತ್ತದೆ. ಉತ್ತರ ಕೊರಿಯಾದ ಮುಂದಿನ ನಾಯಕಿ ಯಾರಾಗಬಹುದು .

ಇಡೀ ಜಗತ್ತು ಚೀನಾದ ಮಿಲಿಟರಿ ಪರೇಡ್ ನೋಡೊಕ್ಕಾಯ್ತಾ ಇತ್ತು.. ಈ ಚೀನಾದ ಹತ್ರ ಅದೇನೇನು ಆಯುಧಗಳಿದಾವೋ, ಅದನ್ ಚೀನಾ ಯಾವಾಗ್ಯಾವಾಗ ತೋರ್ಸುತ್ತೋ ಅನ್ನೋ ಆಸಕ್ತಿ ಇದ್ದವರು, ಡ್ರ್ಯಾಗನ್ ದೇಶದ ಕಡೆ ಕಣ್ಣರಳಿಸಿ ನೋಡ್ತಾ ಇದ್ರು.. ಆದ್ರೆ ಅವರ ಕಣ್ಣನ್ನ ಸೆಳೆದಿದ್ದು, ಚೀನಾದ ಆಯುಧಗಳಲ್ಲ.. ಬದಲಾಗಿ, ಈ ಕಿಮ್ ಜಾಂಗ್ ಉನ್ ಅನ್ನೋ ಸರ್ವಾಧಿಕಾರಿಯ ಹಿಂದಿದ್ದ ಬಾಲಕಿ.. ಯಾರಾಕೆ? ಅವಳ ಮೇಲೇಕೆ ಜಗತ್ತಿನ ಕಣ್ಣು? ಚೀನಾದಲ್ಲಿ ಅನಾವರಣವಾದ ನಿಗೂಢ ರಹಸ್ಯ ಏನು?

ಉತ್ತರ ಕೊರಿಯಾ ಅನ್ನೋದು ನಿಗೂಢಗಳ ಸಾಮ್ರಾಜ್ಯ.. ನಾವು ಈ ತನಕ ಉತ್ತರ ಕೊರಿಯಾದಲ್ಲಿ ನೋಡಿರದು, ಏನಿದ್ಯೋ ಅದನ್ನಲ್ಲ.. ಬದಲಾಗಿ, ಆ ಕಿಮ್ ಜಾಂಗ್ ಉನ್ ಜಗತ್ತಿಗೆ ಏನ್ ತೋರುಸ್ಬೇಕು ಅಂದ್ಕೊಂಡಿದ್ನೋ ಅದನ್ನ ಮಾತ್ರ.. ಆತ ಈ ಸಲ ತನ್ನ ಉತ್ತರಾಧಿಕಾರಿ ಬಗ್ಗೆ ಸುಳಿವು ಕೊಟ್ಟಿದ್ದಾನೆ ಅಂತಿದ್ದಾರೆ.. ಏನಿದರ ಒಳಮರ್ಮ? ಬನ್ನಿ ನೋಡಣ.

ತನ್ನ ಮಗಳನ್ನ ಕಿಮ್ ಜಾಂಗ್ ಉನ್ ಬಹುತೇಕ ಕಾರ್ಯಕ್ರಮಗಳಿಗೆ ಕರ್ಕೊಂಡ್ ಹೋಗ್ತಾ ಇರದುನ್ ನೋಡಿದ್ರೆ, ಈಕೆನಾ ನಾರ್ತ್ ಕೊರಿಯಾದ ಮುಂದಿನ ನಾಯಕಿಯಾಗಿ ಪರಿಚಯಿಸೋ ಪ್ರಯತ್ನ ಅನ್ನೋದು ಗೊತ್ತಾಗಿ ಹೋಗುತ್ತೆ.

ಕಿಮ್ ಜಾಂಗ್ ಉನ್ ಅಪ್ಪಟ ನಿರಂಕುಶ ಆಡಳಿತಗಾರ.. ಆತ ಏನು ಬೇಕಾದ್ರೂ ಮಾಡಬಹುದು. ಆತನ ನಿರ್ಧಾರವನ್ನ ಪ್ರಶ್ನಿಸೋಕೆ ಯಾರಿಗೂ ಅಧಿಕಾರವಿಲ್ಲ.. ಆತನ ಮನಸ್ಸಿನಲ್ಲಿ ಏನಿದೆ ಅನ್ನೋದು ಯಾರಿಗೂ ಗೊತ್ತಿಲ್ಲ.. ಹಾಗಾದ್ರೆ, ಕಿಮ್ ಜು ಎ ಉತ್ತರಾಧಿಕಾರಿಯಾಗ್ತಾಳಾ?

20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
20:37ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ
22:5750 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?
26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
46:03ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳೇ ಉಡೀಸ್; ಇರಾನ್ ಹೊಡೆತಕ್ಕೆ ಪತರಗುಟ್ಟಿದ ವಿಶ್ವದ ದೊಡ್ಡಣ್ಣ
20:26ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ? ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!
20:007 ವರ್ಷದ ಹಗೆತನದ ಕತೆ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಂತ್ಯವೇ ಅಮೆರಿಕದ ಅಂತಿಮ ಗುರಿ
46:01ಇರಾನ್-ಅಮೆರಿಕ ಶತ್ರುಗಳು ಅಲ್ಲ, ಯುರೋಪ್ ಅಥವಾ ನೆರೆಹೊರೆ ರಾಷ್ಟ್ರಗಳ ಮೇಲೆ ದ್ವೇಷವಿಲ್ಲ: ಇರಾನ್ ಅಧ್ಯಕ್ಷ ಪತ್ರ
48:51ಯುದ್ಧ ನಿಲ್ಲಿಸೋಕೆ ಕಾರಣ ಹುಡುಕ್ತಿದ್ದಾರಾ ಡೊನಾಲ್ಡ್ ಟ್ರಂಪ್? ಮಧ್ಯಪ್ರಾಚ್ಯ ಸಂಘರ್ಷ ಸದ್ಯಕ್ಕೆ ಮುಗಿಯೋದಿಲ್ವಾ?
Read more