ಅಫ್ಘಾನ್ ತೊರೆಯಲು ಅಮೆರಿಕಾಗೆ ಡೆಡ್‌ಲೈನ್: ದೊಡ್ಡಣ್ಣನ ಮುಂದಿನ ನಡೆ ಏನು?

Aug 30, 2021, 10:40 AM IST

ಕಾಬೂಲ್‌(ಆ.30): ಕಳೆದ 20 ವರ್ಷಗಳಿಂದ ಅಷ್ಘಾನಿಸ್ತಾನವನ್ನು ಬಹುತೇಕ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದ ಅಮೆರಿಕ ಮತ್ತು ನ್ಯಾಟೋ ಪಡೆಗಳ ಅಧಿಪತ್ಯ ಮಂಗಳವಾರಕ್ಕೆ ಕೊನೆಗೊಳ್ಳಲಿದೆ. ತಾಲಿಬಾನ್‌ ಜೊತೆ ಅಮೆರಿಕ ಮಾಡಿಕೊಂಡ ಒಪ್ಪಂದ ಅನ್ವಯ, ಆ.31ರೊಳಗೆ ಎಲ್ಲಾ ವಿದೇಶಿ ಪಡೆಗಳು ದೇಶ ತೊರೆಯಬೇಕಿದೆ.

ಈ ಒಪ್ಪಂದಕ್ಕೆ ಬದ್ಧ ಎಂದು ಅಮೆರಿಕ ಕೂಡಾ ಈಗಾಗಲೇ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ, ಕೆಲ ವರ್ಷಗಳ ಹಿಂದಿನವರೆಗೂ 40 ದೇಶಗಳ ಸೈನಿಕರ ಹೋರಾಟದ ನೆಲೆಯಾಗಿದ್ದ ಅಷ್ಘಾನಿಸ್ತಾನ ಪೂರ್ಣವಾಗಿ ವಿದೇಶಿ ಸೇನೆಯಿಂದ ಮುಕ್ತವಾಗಲಿದೆ. ಇದರರ್ಥ, ದೇಶ ಪೂರ್ಣವಾಗಿ ಮತ್ತೆ ತಾಲಿಬಾನಿ ಉಗ್ರರ ತೆಕ್ಕೆಗೆ ಬರಲಿದೆ.

ಈಗಾಗಲೇ ಬಹುತೇಕ ದೇಶಗಳು ಅಷ್ಘಾನಿಸ್ತಾನದಿಂದ ಜಾಗ ಖಾಲಿ ಮಾಡಿದ್ದು, ಅಮೆರಿಕದ 4800 ಸೈನಿಕರು ಮತ್ತು ಅಂದಾಜು 1000 ನಾಗರಿಕರು ಇದ್ದಾರೆ. ಅವರನ್ನು ಸೋಮವಾರ ಅಥವಾ ಮಂಗಳವಾರದೊಳಗೆ ಖಾಲಿ ಮಾಡುವ ಮೂಲಕ ಅಮೆರಿಕ ಪಡೆಗಳು ಕಡೆಯದಾಗಿ ಅಷ್ಘಾನಿಸ್ತಾನಕ್ಕೆ ವಿದಾಯ ಹೇಳಲಿವೆ.