- ತಾಲಿಬಾನ್ ಸರ್ಕಾರದಲ್ಲಿ ಪಾಕ್ ಐಎಸ್‌ಐ ‘ಕೈವಾಡ’!
- ಕಾಬೂಲ್‌ಗೆ ತಲುಪಿದ ಐಎಸ್‌ಐ ಮುಖ್ಯಸ್ಥ
- ಪಾಕಿಸ್ತಾನದ ಹಕ್ಕಾನಿ ಉಗ್ರರ ಪರ ಲಾಬಿ?
ಕಾಬೂಲ್ (ಸೆ. 06): ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಕುರಿತು ತಾಲಿಬಾನ್‌ನ ಹಕ್ಕಾನಿ ಹಾಗೂ ಬರಾದರ್ ಬಣಗಳ ನಡುವೆ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದೆ. ಅದನ್ನು ಪರಿಹರಿಸಲು ಹಾಗೂ ನಿಸ್ತೇಜಗೊಂಡಿರುವ ಅಷ್ಘಾನಿಸ್ತಾನ ಸೇನೆಯ ಮೇಲೆ ಹಿಡಿತ ಸಾಧಿಸಲು ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ಮುಖ್ಯಸ್ಥ ಜನರಲ್ ಫಯಾಜ್ ಹಮೀದ್ ಹಮೀದ್ ಆಗಮಿಸಿದ್ದಾರೆ ಎನ್ನಲಾಗುತ್ತಿದೆ.
ಈ ಮೂಲಕ, ‘ತಾಲಿಬಾನ್ ಸೇರಿದಂತೆ ಯಾವುದೇ ಉಗ್ರ ಸಂಘಟನೆಗೂ ತಾನು ಆಶ್ರಯ ನೀಡಿಲ್ಲ’ ಎಂದೇ ವಾದಿಸಿಕೊಂಡು ಬಂದಿದ್ದ ಪಾಕಿಸ್ತಾನದ ನಿಜಬಣ್ಣ ಐಎಸ್‌ಐ ಮುಖ್ಯಸ್ಥನ ಕಾಬೂಲ್ ಭೇಟಿಯೊಂದಿಗೆ ಮತ್ತೊಮ್ಮೆ ಬಯಲಾಗಿದೆ. ಆಫ್ಘನ್ ವಿದ್ಯಮಾನದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿರುವುದು ರುಜುವಾತಾಗಿದೆ. ಹಮೀದ್ ಭೇಟಿಯನ್ನು ಪಾಕಿಸ್ತಾನದ ಅಧಿಕಾರಿಗಳೇ ಖಚಿತಪಡಿಸಿದ್ದಾರೆ. ಈ ಬೆಳವಣಿಗೆಯನ್ನು ಭಾರತ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.