- ಕೊರೊನಾ ವೈರಸ್ ಮೂಲ ಚೀನಾ ಎನ್ನುವುದಕ್ಕೆ ಸಿಕ್ತು ಸಾಕ್ಷ್ಯ
- ಅಮೆರಿಕದ ಗುಪ್ತಚರ ಮಾಹಿತಿಗಳನ್ನು ಆಧರಿಸಿ ‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ವರದಿ
ಆ ಬಗ್ಗೆ ವಿಶಾಲ ತನಿಖೆಯಾಗಬೇಕು ಎಂಬ ಕೂಗು ಎದ್ದಿದೆ
ನವದೆಹಲಿ (ಮೇ. 28): ವಿಶ್ವವನ್ನೇ ನಡುಗಿಸಿರುವ ನ ಮೂಲ ಚೀನಾದ ವುಹಾನ್‌ನಲ್ಲಿರುವ ವೈರಾಣು ಸಂಸ್ಥೆ ಎಂಬ ವಿವಿಧ ದೇಶಗಳ ಆರೋಪಕ್ಕೆ ಮತ್ತಷ್ಟು ಶಕ್ತಿ ಬಂದಿದೆ.
ತನ್ನ ದೇಶದಲ್ಲಿ ಕೊರೋನಾ ಕಾಣಿಸಿಕೊಂಡಿದೆ ಎಂದು ಅಧಿಕೃತವಾಗಿ ಘೋಷಿಸುವುದಕ್ಕೆ ಕೆಲ ತಿಂಗಳು ಮುನ್ನ ವುಹಾನ್ ವೈರಾಣು ಸಂಸ್ಥೆಯ ಮೂವರು ಸಂಶೋಧಕರು ತಮ್ಮನ್ನು ಆಸ್ಪತ್ರೆಗೆ ದಾಖಲಿಸುವಂತೆ ಕೋರಿಕೊಂಡಿದ್ದರು ಎಂದು ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದೆ. ಇದು ಸಂಚಲನಕ್ಕೆ ಕಾರಣವಾಗಿದೆ. ಈವರೆಗೂ ಬಹಿರಂಗವಾಗದೆ ಇದ್ದ ಅಮೆರಿಕದ ಗುಪ್ತಚರ ಮಾಹಿತಿಗಳನ್ನು ಆಧರಿಸಿ ‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ವರದಿ ಪ್ರಕಟಿಸಿದೆ.