ಕೊರೊನಾ ವಿರುದ್ಧ ಮೋದಿ - ಟ್ರಂಪ್ ಆಯುರ್ವೇದ ಯುದ್ಧ

Jul 11, 2020, 1:42 PM IST

ಬೆಂಗಳೂರು (ಜು. 11): ಭಾರತದ ಅತ್ಯಂತ ಪುರಾತನ ಔಷಧೀಯ ಪದ್ಧತಿಯಾಗಿರುವ ಆಯುರ್ವೇದವನ್ನು ಕೊರೊನಾ ಚಿಕಿತ್ಸೆಗೆ ಬಳಸಿಕೊಳ್ಳುವ ಪ್ರಯತ್ನವನ್ನು ಜಂಟಿಯಾಗಿ ನಡೆಸಲು ಅಮೆರಿಕಾ ಹಾಗೂ ಭಾರತ ಮುಂದಾಗಿವೆ. ಕೊರೊನಾ ರೋಗಿಗಳಿಗೆ ಆಯುರ್ವೇದ ಔಷಧಗಳನ್ನು ನೀಡಿ ಕ್ಲಿನಿಕಲ್ ತಯಾರಿ ನಡೆಸುವ  ಸಂಬಂಧ ಭಾರತ ಹಾಗೂ ಅಮೆರಿಕಾದ ಆಯುರ್ವೇದ ವೈದ್ಯರು ಹಾಗೂ ಸಂಶೋಧಕರು ಸಜ್ಜಾಗಿದ್ದಾರೆ. 

ಕೊರೋನಾಗೆ ಅಮೆರಿಕದಲ್ಲೂ ಆಯುರ್ವೇದ ಪ್ರಯೋಗ!

ಬೆಂಗಳೂರು ಸೇರಿದಂತೆ ಕೆಲವೆಡೆ ಕೊರೊನಾ ರೋಗಿಗಳಿಗೆ ಆಯುರ್ವೇದ ಔಷಧಿಯನ್ನು ಹೆಚ್ಚುವರಿ ಚಿಕಿತ್ಸೆ ರೂಪದಲ್ಲಿ ನೀಡಿದ ಹಾಗೂ ಅದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ವರದಿಗಳಿವೆ. ಇದೇ ಇದೇ ಚಿಕಿತ್ಸೆಯನ್ನು ಅಮೆರಿಕಾ ಕೂಡಾ ಪರೀಕ್ಷೆಗೆ ಒಳಪಡಿಸಲು ಹೊರಟಿರುವುದು ಮಹತ್ವ ಪಡೆದುಕೊಂಡಿದೆ.