ರಷ್ಯಾ ಮೇಲೆ ಅಮೆರಿಕ ಮೂಲದ ಕಂಪನಿಗಳ ನಿಷೇಧ ಮುಂದುವರೆದಿದ್ದು, ಇದೀಗ ಒಟಿಟಿ ಸೇವೆ ನೀಡುವ ನೆಟ್‌ಫ್ಲಿಕ್ಸ್ ಮತ್ತು ಅಮೆರಿಕನ್ ಎಕ್ಸ್‌ಪ್ರೆಸ್ ಕಾರ್ಡ್‌ಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿರುವುದಾಗಿ ಪ್ರಕಟಿಸಿವೆ.
ರಷ್ಯಾ ಮೇಲೆ ಅಮೆರಿಕ ಮೂಲದ ಕಂಪನಿಗಳ ನಿಷೇಧ ಮುಂದುವರೆದಿದ್ದು, ಇದೀಗ ಒಟಿಟಿ ಸೇವೆ ನೀಡುವ ನೆಟ್‌ಫ್ಲಿಕ್ಸ್ ಮತ್ತು ಅಮೆರಿಕನ್ ಎಕ್ಸ್‌ಪ್ರೆಸ್ ಕಾರ್ಡ್‌ಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿರುವುದಾಗಿ ಪ್ರಕಟಿಸಿವೆ. ಜೊತೆಗೆ ಹಣಕಾಸು ಸೇವೆ ನೀಡುವ ಕೆಪಿಎಂಜಿ ಮತ್ತು ಪಿಡಬ್ಲುಸಿ ಕೂಡಾ ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಾಗಿ ಹೇಳಿವೆ. ಈಗಾಗಲೇ ಅಮೆರಿಕದ ಮಾಸ್ಟರ್‌ಕಾರ್ಡ್, ವೀಸಾ ಕಾರ್ಡ್ ಕೂಡಾ ಇದೇ ನಿಲುವು ಪ್ರಕಟಿಸಿವೆ. ಮೆಕ್ ಡೊನಾಲ್ಡ್ ಬರ್ಗರ್, ಕೊಕ್, ಪೆಪ್ಸಿ, ಸೋಷಿಯಲ್ ಮೀಡಿಯಾ ಎಲ್ಲವೂ ಸ್ಥಗಿತವಾಗಿವೆ. ಕೆಎಫ್‌ಸಿ ಆಹಾರವೂ ಸಿಗ್ತಾ ಇಲ್ಲ.
ಶೆಲ್ ಕಂಪನಿಯು ರಷ್ಯಾದ ತೈಲ ಹಾಗೂ ನೈಸರ್ಗಿಕ ಅನಿಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಶೆಲ್ ಕಂಪನಿಯ ಒಟ್ಟು ಆಮದಿನಲ್ಲಿ ಶೇ.8 ರಷ್ಟುಕಚ್ಚಾತೈಲವನ್ನು ರಷ್ಯಾ ಒಂದೇ ಪೂರೈಕೆ ಮಾಡುತ್ತಿತ್ತು. ಇದು ರಷ್ಯಾದ ಆರ್ಥಿಕತೆಗೆ ಭಾರೀ ಪೆಟ್ಟು ನೀಡಲಿದೆ.