ಇರಾನ್‌ನಲ್ಲಿ ಖಮೇನಿ ಆಡಳಿತ ಅಂತ್ಯಕ್ಕೆ ಸ್ಕೆಚ್ ಹಾಕಿದ ಅಮೇರಿಕಾ-ಇಸ್ರೇಲ್ ದೋಸ್ತಿ ಪಡೆ!

ಇರಾನ್‌ನಲ್ಲಿ ಖಮೇನಿ ಆಡಳಿತ ಅಂತ್ಯಕ್ಕೆ ಸ್ಕೆಚ್ ಹಾಕಿದ ಅಮೇರಿಕಾ-ಇಸ್ರೇಲ್ ದೋಸ್ತಿ ಪಡೆ!

Published : Jun 24, 2025, 05:45 PM IST
ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಉತ್ತರಾಧಿಕಾರಿ ಹುಡುಕಾಟ ತೀವ್ರಗೊಂಡಿದೆ. ಖಮೇನಿ ನಂತರ ಯಾರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಚರ್ಚೆಗಳು ಹೆಚ್ಚಾಗಿವೆ. ಇದು ಮಧ್ಯಪ್ರಾಚ್ಯದ ರಾಜಕೀಯ ಭೂಪಟವನ್ನೇ ಬದಲಿಸಬಹುದು.

ತಹ್ರಾನ್/ಟೆಲಿವಿವ್/ವಾಷಿಂಗ್ಟನ್ (ಜೂ. 24): ಮಧ್ಯಪ್ರಾಚ್ಯ ಪುನಃ ರಾಜಕೀಯ ಭೂಕಂಪದ ಸಂಕೇತ ನೀಡುತ್ತಿದೆ. ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಆರೋಗ್ಯ ಕುಗ್ಗಿದ್ದು, ಉತ್ತರಾಧಿಕಾರಿ ಹುಡುಕಾಟ ತೀವ್ರಗೊಂಡಿದೆ. ನಾಲ್ಕು ದಶಕಗಳಿಂದ ಇರಾನ್‌ನ ಆಡಳಿತದ ಸೂತ್ರಗಳನ್ನು ಬಲವಾಗಿ ಹಿಡಿದಿದ್ದ ಖಮೇನಿ, ಈಗ ಮೃತ್ಯು ಸಿಂಹಾಸನದ ನೆಲೆಯಲ್ಲಿ ಕೂತಿದ್ದಾರೆ ಎನ್ನೋದು ರಾಜಕೀಯ ವಲಯದ ಚರ್ಚೆಯಾಗಿದೆ.

ಈ ಹಿಂದಿನ ಅಯತೊಲ್ಲಾ ಖೋಮೇನಿಯ ನಂತರ ಅಧಿಕಾರಕ್ಕೆ ಬಂದ ಖಮೇನಿ, ಇಸ್ಲಾಮಿಕ್ ಕ್ರಾಂತಿಯ ನಂತರ ರಾಜಕೀಯ, ಸೈನಿಕ, ಧಾರ್ಮಿಕ ಅಧಿಕಾರಗಳನ್ನು ಒಂದೇ ಕೈಯಲ್ಲಿ ಕೇಂದ್ರೀಕರಿಸಿ ನಿರಂಕುಶ ಆಡಳಿತದ ಗುರುತಾಗಿ ಪರಿಣಮಿಸಿದ್ದರು. ಆದರೆ ಈಗ, ಅವರ ನಂತರ ಯಾರಿಗೆ ಅಧಿಕಾರ ಹಸ್ತಾಂತರವಾಗಲಿದೆ ಎಂಬುದರ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ. ಈ ಬಗ್ಗೆ ಅಂತರ್ಜಾಲದಲ್ಲಿಯೂ ಭಾರೀ ಚರ್ಚೆ ಶುರುವಾಗಿದೆ. ಹಲವಾರು ಹೆಸರುಗಳು ಇತ್ತೀಚೆಗೆ ಹೊರಬರುತ್ತಿದ್ದರೂ, ಇಬ್ಬರು ಪ್ರಮುಖ ಹೆಸರುಗಳು ಹೆಚ್ಚು ಸದ್ದು ಮಾಡುತ್ತಿವೆ. ಖಮೇನಿಯ ಪುತ್ರ ಮೋಜ್ತಬಾ ಖಮೇನಿ ಮತ್ತು ಇಸ್ಲಾಮಿಕ್ ರೆವೊಲ್ಯೂಶನರಿ ಗಾರ್ಡ್ಸ್‌ನ (IRGC) ಮಾಜಿ ನಾಯಕ ಹುಸೇನ್ ಸಲೀಮಿ. ಇವರ ಹಿನ್ನಲೆ, ಧಾರ್ಮಿಕ ಪ್ರಭಾವ, ಹಾಗೂ ರಾಜಕೀಯ ಬೆಂಬಲದ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿವೆ.

ಅಮೆರಿಕಾ-ಇಸ್ರೇಲ್ ಲೆಕ್ಕಾಚಾರ ಏನು..?
ಇರಾನ್‌ನಲ್ಲಿ ಶಕ್ತಿ ಬದಲಾವಣೆ ಸಾಧ್ಯತೆಯ ನಡುವೆ, ಇಸ್ರೇಲ್ ಹಾಗೂ ಅಮೆರಿಕಾ ಅತ್ಯಂತ ಚುರುಕಾಗಿ ಕಣ್ಣಿಟ್ಟಿವೆ. ಇರಾನ್‌ನ ಅಣ್ವಸ್ತ್ರ ಯೋಜನೆ, ಇಸ್ರೇಲ್ ವಿರುದ್ಧ ಹಮಾಸ್-ಹಿಜ್ಬುಲ್ಲಾ ಮಾಧ್ಯಮಗಳ ಬೆಂಬಲ, ಸಿರಿಯಾದಲ್ಲಿ ಶಿಯಾ ಮೀನುಗಾರಿಕೆ ಈ ಎಲ್ಲಾ ಅಂಶಗಳು ಟೆಲ್ ಅವೀವ್ ಮತ್ತು ವಾಷಿಂಗ್ಟನ್ ಟೆಹ್ರಾನ್ ಅನ್ನು ದೀರ್ಘಕಾಲದ ಎದುರಾಳಿಯಾಗಿ ನೋಡುವಂತೆ ಮಾಡಿವೆ. ಇರಾನ್‌ನಿಂದ ಶತ್ರುತ್ವಕ್ಕೆ ಮುಕ್ತಿ ಪಡೆಯೋದು ಇಂದಿನ ಇಸ್ರೇಲ್‌ಮ ಗುರಿ. ಆ ಗುರಿಗೆ ಹೋಗೋ ಮೊದಲ ಮೆಟ್ಟಿಲು, ಖಮೇನಿ ಆಡಳಿತದ ಅಂತ್ಯ! ಎಂದು ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಮಧ್ಯಪ್ರಾಚ ಭವಿಷ್ಯದಲ್ಲಿ ಏನು..?
ಇರಾನ್‌ನಲ್ಲಿ ರಾಜಕೀಯ ಬದಲಾವಣೆ ಮಾತ್ರವಲ್ಲ, ಶಿಯಾ ಪ್ರಭುತ್ವದ ಮಾದರಿಯೇ ಕುಸಿಯಬಹುದೆಂಬ ಆತಂಕವೂ ಉಂಟಾಗಿದೆ. ಯೆಮೆನ್, ಸಿರಿಯಾ, ಲೆಬನಾನ್ ಮುಂತಾದ ದೇಶಗಳಲ್ಲಿ ಇರಾನ್‌ನ ಆರ್ಥಿಕ, ಸೈನಿಕ ಪ್ರಭಾವ ಕುಂದಿದರೆ, ಮುಸ್ಲಿಂ ಸಮುದಾಯದ ಇಡೀ ಶಿಯಾ ಧರ್ಮೀಯ ಬಲಾಢ್ಯತೆ ಬಲಹೀನಗೊಳ್ಳುವ ಸಾಧ್ಯತೆ ಇದೆ ಎಂಬ ಚರ್ಚೆಯೂ ಮುನ್ನೆಲೆಗೆ ಬಂದಿದೆ.

22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
20:30ತ್ರಿಮೂರ್ತಿಗಳ ಶಕ್ತಿ ಪ್ರದರ್ಶನ! ಅಮೆರಿಕಾ ತಲ್ಲಣ! 3 ರಾಷ್ಟ್ರಗಳು ಒಟ್ಟಾದರೆ ಟ್ರಂಪ್ ಹುಚ್ಚಾಟ ದಿ ಎಂಡ್!
Read more