ಟರ್ಕಿಯ ಎಜೆಯನ್ ಸಮುದ್ರ ತೀರ ಹಾಗೂ ಗ್ರೀಕ್ ದ್ವೀಪ ಸಮೋಸ್ ನಡುವೆ ಭೀಕರ ಸುನಾಮಿ ಅಪ್ಪಳಿಸಿದೆ. ಇದುವರೆಗೂ ಸಿಕ್ಕ ಮಾಹಿತಿ ಪ್ರಕಾರ 14 ಮಂದಿ ಸಾವನ್ನಪ್ಪಿದ್ದು, 400 ಮಂದಿ ಗಾಯಗೊಂಡಿದ್ದಾರೆ.
ಅಂಕಾರಾ (ಅ. 31): ಟರ್ಕಿಯ ಎಜೆಯನ್ ಸಮುದ್ರ ತೀರ ಹಾಗೂ ಗ್ರೀಕ್ ದ್ವೀಪ ಸಮೋಸ್ ನಡುವೆ ಭೀಕರ ಸುನಾಮಿ ಅಪ್ಪಳಿಸಿದೆ. ಇದುವರೆಗೂ ಸಿಕ್ಕ ಮಾಹಿತಿ ಪ್ರಕಾರ 14 ಮಂದಿ ಸಾವನ್ನಪ್ಪಿದ್ದು, 400 ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.0 ಮ್ಯಾಗ್ನಿಟ್ಯೂಡ್ ದಾಖಲಾಗಿದ್ದು, ಹತ್ತಾರು ಕಟ್ಟಡಗಳು ಕುಸಿದಿವೆ.
ಅಮೆರಿಕಾದಲ್ಲಿ ಕೋವಿಡ್ 3 ಅಲೆ ಶುರುವಾಗಿದೆ. 41 ಸಾವಿರ ಆಸುಪಾಸಿನಲ್ಲಿ ಸೋಂಕಿತರ ಸಂಖ್ಯೆ ನಿನ್ನೆ 91 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ. ಹೀಗಿರುವಾಗ ಜನರು ಅಧ್ಯಕ್ಷೀಯ ಚುನಾವಣಾ ಹಿನ್ನಲೆಯಲ್ಲಿ ನಡೆಯುವ ಭಾಷಣದಲ್ಲಿ ಕಿಕ್ಕಿರಿದು ಸೇರುತ್ತಿದ್ದಾರೆ.
ರಷ್ಯಾದಲ್ಲಿ ಕೋವಿಡ್ ಲಸಿಕೆಗಳ ಕೊರತೆ ಕಾಣಿಸಿಕೊಂಡಿದ್ದು, ಮೂರನೇ ಹಂತದ ಪ್ರಯೋಗಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ರಾಯ್ಟರ್ ವರದಿ ಮಾಡಿದೆ. ನವೆಂಬರ್ 10ರ ಬಳಿಕ ವ್ಯಾಕ್ಸಿನ್ ಪರೀಕ್ಷೆಗಳನ್ನು ಮತ್ತೆ ಪುನಾರಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.