ಬಾಂಗ್ಲಾ ಹಿಂದೂಗಳ ಮೇಲೆ ತಾಲಿಬಾನ್ ಟಾರ್ಗೆಟ್, ಹೆಚ್ಚಾಗ್ತಿದೆ ದಾಳಿ, ಆತಂಕದ ವಾತಾವರಣ

ಬಾಂಗ್ಲಾ ಹಿಂದೂಗಳ ಮೇಲೆ ತಾಲಿಬಾನ್ ಟಾರ್ಗೆಟ್, ಹೆಚ್ಚಾಗ್ತಿದೆ ದಾಳಿ, ಆತಂಕದ ವಾತಾವರಣ

Published : Oct 18, 2021, 05:59 PM ISTUpdated : Oct 18, 2021, 06:31 PM IST

ಬಾಂಗ್ಲಾದೇಶದಲ್ಲಿ ಹಿಂದೂ ದೇಗುಲಗಳು ಮತ್ತು ಹಿಂದೂಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿ ಪ್ರಕರಣಗಳು ಮತ್ತಷ್ಟು ವ್ಯಾಪಕವಾಗುತ್ತಿದೆ. 

ಡಾಕಾ (ಅ. 18): ಬಾಂಗ್ಲಾದೇಶದಲ್ಲಿ ಹಿಂದೂ ದೇಗುಲಗಳು ಮತ್ತು ಹಿಂದೂಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿ ಪ್ರಕರಣಗಳು ಮತ್ತಷ್ಟು ವ್ಯಾಪಕವಾಗುತ್ತಿದೆ. ವಿಜಯದಶಮಿ ಹಿನ್ನೆಲೆ ಹಿಂದೂಗಳು ದೇಗುಲದಲ್ಲಿ ಕಾಳಿಮಾತೆಯ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಮುಸ್ಲಿಂ ಧಾರ್ಮಿಕ ಮುಖಂಡ ಇಮಾಮ್‌ನ ಪ್ರಚೋದನೆಯಿಂದ ದೇಗುಲಕ್ಕೆ ನುಗ್ಗಿದ ಆರೋಪಿಗಳು, ಅರ್ಚಕರು ಸೇರಿದಂತೆ ಭಕ್ತರ ಮೇಲೆ ಹಲ್ಲೆ ನಡೆಸಿ, ಐದು ಮೂರ್ತಿಗಳನ್ನು ಭಗ್ನಗೊಳಿಸಿ ದೇಗುಲವನ್ನು ಧ್ವಂಸಗೊಳಿಸಿದ್ದಾರೆ. ನಾಲ್ವರು ಹಿಂದೂಗಳನ್ನು ಹತ್ಯೆಗೈದಿದ್ದಾರೆ. 

ಬಾಂಗ್ಲಾದ 8 ಆಡಳಿತಾತ್ಮಕ ವಿಭಾಗಗಳ 64 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಕಳೆದ ಬುಧವಾರದಿಂದೀಚೆಗೆ ಹಿಂಸಾಚಾರ ನಡೆದಿದ್ದು, ಒಂದು ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ದೊಂಬಿ, ಗಲಭೆ ತಡೆಗೆ ಬಾಂಗ್ಲಾ ಸರ್ಕಾರ 22 ಜಿಲ್ಲೆಗಳಲ್ಲಿ ಅರೆಸೇನಾ ಪಡೆ ನಿಯೋಜಿಸಿದೆ. ಅದರ ಹೊರತಾಗಿಯೂ, ಹಿಂಸೆ ನಿಯಂತ್ರಣಕ್ಕೆ ಬರುವ ಯಾವುದೇ ಸುಳಿವು ಕಂಡುಬರುತ್ತಿಲ್ಲ. ಇದು ಸ್ಥಳೀಯ ಅಲ್ಪಸಂಖ್ಯಾತ ಹಿಂದೂ ಸಮುದಾಯದಲ್ಲಿ ಭಾರೀ ಆತಂಕ ಹುಟ್ಟುಹಾಕಿದೆ.

20:18ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್
21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್