Jul 6, 2020, 12:15 PM IST
ಬೆಂಗಳೂರು (ಜು. 06): ಕೊರೊನಾ ಈ ಮಟ್ಟಿಗೆ ಹರಡಲು ಕಾರಣ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. ವಿಜ್ಞಾನಿಗಳೇ ಹೇಳಿದ ಸತ್ಯವಿದು. ಕೊರೊನಾ ಕೆಮ್ಮಿದ್ರೆ, ಸೀನಿದ್ರೆ ಮಾತ್ರ ಹರಡುತ್ತಿಲ್ಲ, ಗಾಳಿಯ ಮೂಲಕವೂ ಡೆಡ್ಲಿ ವೈರಸ್ ಹರಡುತ್ತಿದೆ. ಸಾಕ್ಷಿ ಸಮೇತ ವಿಜ್ಷಾನಿಗಳ ತಂಡ ವಿಶ್ವಸಂಸ್ಥೆಗೆ ಪತ್ರ ಬರೆದಿದೆ. 32 ದೇಶದ 239 ವಿಜ್ಞಾನಿಗಳು ಇದನ್ನು ಒಪ್ಪಿಕೊಂಡಿದ್ದಾರೆ. ಗಾಳಿಯ ಸಣ್ಣ ಕಣಗಳಲ್ಲೂ ವೈರಸ್ ವ್ಯಾಪಿಸುತ್ತಿದೆ. ಗಾಳಿಯಾಡದ ಪ್ರದೇಶ, ಜನಸಂದಣಿ ಪ್ರದೇಶಗಳಲ್ಲೂ ಹರಡಬಹುದಂತೆ ಈ ವೈರಸ್. ಏಸಿ ಇರುವ ಕಛೇರಿ, ಹೊಟೇಲ್‌ಗಳಲ್ಲಿ ಅಂತರ ಕಾಯ್ದುಕೊಳ್ಳುವುದರಿಂದಲೂ ಪ್ರಯೋಜನವಾಗುತ್ತಿಲ್ಲ. ನಿಜಕ್ಕೂ ಈ ವರದಿ ಭಯವನ್ನು ಇನ್ನಷ್ಟು ಹೆಚ್ಚು ಮಾಡುತ್ತಿದೆ.
ಆಸ್ಪತ್ರೆ ಇದೆ, ಐಸಿಯು ಇದೆ, ವೆಂಟಿಲೇಟರ್ ಇದೆ ಆದರೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ..!