ಗಲ್ವಾನ್ ನದಿ ತಿರುಗಿಸಲು ಚೀನಾ ಯತ್ನ: ಗ್ರಾಫ್ ಮೂಲಕ ತಿಳಿಸುವ ಪ್ರಯತ್ನವಿದು..!

ಗಲ್ವಾನ್ ನದಿ ತಿರುಗಿಸಲು ಚೀನಾ ಯತ್ನ: ಗ್ರಾಫ್ ಮೂಲಕ ತಿಳಿಸುವ ಪ್ರಯತ್ನವಿದು..!

Published : Jun 19, 2020, 02:13 PM ISTUpdated : Jun 19, 2020, 02:49 PM IST

20 ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾ-ಭಾರತ ಯೋಧರ ಸಂಘರ್ಷದ ಬೆನ್ನಲ್ಲೇ, ಈಶಾನ್ಯ ಲಡಾಖ್‌ನ ಗಲ್ವಾನ್‌ ನದಿಯ ಹರಿವನ್ನು ತಿರುಗಿಸಲು ಚೀನಾ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಕೆಲವು ಉಪಗ್ರಹ ಚಿತ್ರಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಹರಿವನ್ನು ತಡೆಯಲು ಬಳಕೆಯಾಗುತ್ತಿತ್ತು ಎನ್ನಲಾದ ಬುಲ್ಡೋಜರ್‌ ಕಾಣಿಸಿದೆ.

ನವದೆಹಲಿ (ಜೂ. 19): 20 ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾ-ಭಾರತ ಯೋಧರ ಸಂಘರ್ಷದ ಬೆನ್ನಲ್ಲೇ, ಈಶಾನ್ಯ ಲಡಾಖ್‌ನ ಗಲ್ವಾನ್‌ ನದಿಯ ಹರಿವನ್ನು ತಿರುಗಿಸಲು ಚೀನಾ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಕೆಲವು ಉಪಗ್ರಹ ಚಿತ್ರಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಹರಿವನ್ನು ತಡೆಯಲು ಬಳಕೆಯಾಗುತ್ತಿತ್ತು ಎನ್ನಲಾದ ಬುಲ್ಡೋಜರ್‌ ಕಾಣಿಸಿದೆ.

ಸಂಘರ್ಷ ನಡೆದ ಸ್ಥಳದಿಂದ 1 ಕಿ.ಮೀ. ದೂರದಲ್ಲಿ ಚೀನಾದ ಬುಲ್ಡೋಜರ್‌ಗಳು ಉಪಗ್ರಹ ಚಿತ್ರದಲ್ಲಿ ಪತ್ತೆಯಾಗಿವೆ. ಈ ಸ್ಥಳದಲ್ಲಿ ನದಿಯು ಪದೇ ಪದೇ ತಿರುವು ಬದಲಿಸುತ್ತಿರುವುದು ಕಾಣಿಸಿದೆ. ವಿವಾದಿತ ಅಕ್ಸಾಯ್‌ ಚಿನ್‌ನಿಂದ ಲಡಾಖ್‌ನತ್ತ ಈ ನದಿ ಹರಿಯುತ್ತದೆ. ಚೀನಾದಲ್ಲಿ ನೀಲಿ ಬಣ್ಣದಲ್ಲಿ ಶುಷ್ಕವಾಗಿದ್ದ ನೀರು, ವಾಸ್ತವ ಗಡಿ ರೇಖೆ ದಾಟಿ ಭಾರತಕ್ಕೆ ಹರಿವು ಆರಂಭಿಸುತ್ತಿದ್ದಂತೆಯೇ ಮಣ್ಣು ಮಿಶ್ರಿತ ನೀರಾಗಿ ಹಾಗೂ ಕಾಣಲು ಆಗದಷ್ಟುಚಿಕ್ಕದಾಗಿ ಪರಿವರ್ತಿತವಾಗಿದೆ. ಇದೇ ವೇಳೆ, ಭಾರತದ ಸೇನಾ ಟ್ರಕ್‌ಗಳು ಗಡಿಯಿಂದ ಈಚೆ 2 ಕಿ.ಮೀ. ದೂರದಲ್ಲಿ ಒಣಗಿದ ಗಲ್ವಾನ್‌ ನದಿ ತೀರದಲ್ಲಿ ನಿಂತಿದ್ದು ಕಂಡುಬರುತ್ತದೆ. ಇದನ್ನು ಗ್ರಾಫ್ ಮೂಲಕ ಹೇಳಿದರೆ ಇನ್ನೂ ಸುಲಭವಾಗಿ ಅರ್ಥ ಆಗುತ್ತದೆ. ಇಲ್ಲಿದೆ ನೋಡಿ..! 

22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
20:30ತ್ರಿಮೂರ್ತಿಗಳ ಶಕ್ತಿ ಪ್ರದರ್ಶನ! ಅಮೆರಿಕಾ ತಲ್ಲಣ! 3 ರಾಷ್ಟ್ರಗಳು ಒಟ್ಟಾದರೆ ಟ್ರಂಪ್ ಹುಚ್ಚಾಟ ದಿ ಎಂಡ್!