Jun 2, 2020, 11:52 AM IST
ಬೆಂಗಳೂರು (ಜೂ. 02): ಭಾರತ-ಚೀನಾ ನಡುವೆ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ತ್ವೇಷಮಯ ಸ್ಥಿತಿ ಸೃಷ್ಟಿಯಾಗಿರುವ ನಡುವೆಯೇ ಚೀನಾದ ಯುದ್ಧವಿಮಾನಗಳು ಪೂರ್ವ ಲಡಾಖ್ ಗಡಿಯಿಂದ 30 ಕಿ.ಮೀ. ದೂರದಲ್ಲಿ ಹಾರಾಟ ನಡೆಸಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಲಡಾಖ್ ಗಡಿಯಲ್ಲಿ ಭಾರತ ತೀವ್ರ ನಿಗಾ ಇರಿಸಿದೆ.
ಪೂರ್ವ ಲಡಾಖ್ ಸಮೀಪ ಚೀನಾ ವಾಯುಪಡೆಯು ಹೋಟನ್ ಹಾಗೂ ಗರ್ಗುನ್ಸಾ ಎಂಬಲ್ಲಿ 2 ವಾಯುನೆಲೆ ಹೊಂದಿದೆ. ಈ ವಾಯುನೆಲೆಯಲ್ಲಿ 10-12 ಯುದ್ಧವಿಮಾನಗಳನ್ನು ಚೀನಾ ನಿಯೋಜಿಸಿದೆ. ಇವು ಪೂರ್ವ ಲಡಾಖ್ ಗಡಿಯಿಂದ 30 ಕಿ.ಮೀ. ದೂರದಲ್ಲಿ ಹಾರಾಟ ನಡೆಸಿರುವುದು ಕಂಡುಬಂದಿದೆ.
ಚೀನಾ ಗಡಿ ತಂಟೆಗೆ ಭಾರತ ಸಡ್ಡು: ತತ್ತರಿಸಿದ ಡ್ರ್ಯಾಗನ್!
‘ಗಡಿಯಿಂದ ವಿಮಾನಗಳು ಹಾರಿದ ದೂರವನ್ನು ಗಮನಿಸಿದರೆ ಆತಂಕವೇನೂ ಇಲ್ಲ. ಆದರೂ ಭಾರತವು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಏಕೆಂದರೆ ಕೆಲವೇ ನಿಮಿಷಗಳಲ್ಲಿ ಈ ಯುದ್ಧ ವಿಮಾನಗಳು ನಮ್ಮ ಗಡಿವರೆಗೆ ಆಗಮಿಸಬಹುದು’ ಎಂದು ಭಾರತದ ಭದ್ರತಾ ಪಡೆ ಮೂಲಗಳು ತಿಳಸಿವೆ.