ಕೊರೋನಾ ಬಳಿಕ ಮಾರಣಾಂತಿಕ ವೈರಸ್ ಅಭಿವೃದ್ದಿ ಪಡಿಸುತ್ತಿದೆ ಚೀನಾ..!

Jul 25, 2020, 1:53 PM IST

ನವದೆಹಲಿ(ಜು.25): ಜಾಗತಿಕ ಪಿಡುಗಾದ ಕೊರೋನಾ ಹೆಮ್ಮಾರಿಯ ಜನಕ ಕುತಂತ್ರಿ ಚೀನಾದಿಂದ ಇದೀಗ ಮತ್ತೊಂದು ಮಾರಣಾಂತಿಕ ವೈರಸ್ ತಯಾರು ಮಾಡಲಾಗುತ್ತಿದೆ ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. 

ಭಾರತ ಹಾಗೂ ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಗುರಿಯಾಗಿಟ್ಟುಕೊಂಡು ಜೈವಿಕ ಯುದ್ಧದ ಸಾಮರ್ಥ್ಯ ಹೆಚ್ಚಳಕ್ಕೆ ಚೀನಾ ಮುಂದಾಗಿದೆ. ಭಾರತದ ಮೇಲೆ ಜೈವಿಕಾಸ್ತ್ರ ಬಳಸಲು ಚೀನಾ ಪ್ಲಾನ್ ಮಾಡುತ್ತಿದ್ದು, ತನ್ನ ಮಿತ್ರರಾಷ್ಟ್ರವಾದ ಪಾಕಿಸ್ತಾನದ ಜತೆ ಚೀನಾ ಕೈ ಜೋಡಿಸಿದೆ.

ಕೋವಿಡ್‌ ಮಟ್ಟ ಹಾಕಲು ಬಂದಿದೆ ಒಂದೆರಡಲ್ಲ, ನಾಲ್ಕು ಔಷಧಗಳು..!

ಹೌದು, ಈ ಉದ್ದೇಶದಿಂದ ಪಾಕ್-ಚೀನಾ ನಡುವೆ 3 ವರ್ಷಗಳ ರಹಸ್ಯ ಒಪ್ಪಂದ ಏರ್ಪಟ್ಟಿದೆ. ಮಾರಣಾಂತಿಕವಾದ ಆಂಥ್ರಾಕ್ಸ್ ಮಾದರಿ ವೈರಸ್ ಅಭಿಪಡಿಸಲು ಚೀನಾ ಮುಂದಾಗಿದೆ. ಎಬೋಮಾ ಮಾದರಿಯ ಮತ್ತೊಂದು ಸೋಂಕು ಅಭಿವೃದ್ದಿ ಪಡಿಸಲು ನರಿಬುದ್ದಿಯ ಚೀನಾ ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.