ಜ.20ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಜೋ ಬೈಡೆನ್ ಅವರ ಸರ್ಕಾರದಲ್ಲಿ ಇಬ್ಬರು ಕನ್ನಡಿಗರು ಸೇರಿ ಭಾರತೀಯ ಮೂಲದ 20 ಮಂದಿ ಸ್ಥಾನ ಪಡೆಯಲಿದ್ದಾರೆ. ಅವರ ಪೈಕಿ 17 ಮಂದಿಗೆ ಉನ್ನತ ಹುದ್ದೆ ದೊರೆಯಲಿದೆ.
ಬೆಂಗಳೂರು (ಜ. 18): ಜ.20 ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಜೋ ಬೈಡೆನ್ ಅವರ ಸರ್ಕಾರದಲ್ಲಿ ಇಬ್ಬರು ಕನ್ನಡಿಗರು ಸೇರಿ ಭಾರತೀಯ ಮೂಲದ 20 ಮಂದಿ ಸ್ಥಾನ ಪಡೆಯಲಿದ್ದಾರೆ. ಅವರ ಪೈಕಿ 17 ಮಂದಿಗೆ ಉನ್ನತ ಹುದ್ದೆ ದೊರೆಯಲಿದೆ. ಅಮೆರಿಕದ ಸರ್ಜನ್ ಜನರಲ್ ಹುದ್ದೆಗೆ ಮಂಡ್ಯದವರಾದ ವಿವೇಕ್ ಮೂರ್ತಿ ಹಾಗೂ ಪ್ರಥಮ ಮಹಿಳೆ ಆಗಲಿರುವ ಜಿಲ್ ಬೈಡೆನ್ ಅವರಿಗೆ ಯೋಜನೆ ನಿರ್ದೇಶಕರಾಗಿ ಆಯ್ಕೆ ಆಗಿರುವ ಉಡುಪಿ ಮೂಲದ ಕಮಲಾ ಅಡಿಗ, ಸರ್ಕಾರದಲ್ಲಿ ಸ್ಥಾನ ಪಡೆದ ಕನ್ನಡಿಗರಾಗಿದ್ದಾರೆ.
ಶ್ವೇತ ಭವನದ ಕಚೇರಿ ನಿರ್ವಹಣೆ ಹಾಗೂ ಬಜೆಟ್‌ನ ನಿರ್ದೇಶಕರಾಗಿ ನೀರಾ ಟಂಡನ್, ಸಹಾಯಕ ಅಟಾರ್ನಿ ಜನರಲ್ ಆಗಿ ವಿನುತಾ ಗುಪ್ತಾ ನಾಮನಿರ್ದೇನಗೊಂಡಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿಗೆ ಕಾಶ್ಮೀರ ಮೂಲದ ಇಬ್ಬರು ವ್ಯಕ್ತಿಗಳು ಬೈಡೆನ್ ಸರ್ಕಾರದಲ್ಲಿ ಸ್ಥಾನ ಪಡೆದಿದ್ದಾರೆ.