ಸಮರಪೀಡಿತ ಉಕ್ರೇನ್‌ನ ಸುಮಿ ನಗರದಲ್ಲಿ ಸಿಲುಕಿ ಪರದಾಡುತ್ತಿದ್ದ ಎಲ್ಲ ಭಾರತೀಯರನ್ನು ರಕ್ಷಿಸಲಾಗಿದೆ. ಸುಮಿಯಲ್ಲಿದ್ದ ಎಲ್ಲ 694 ಭಾರತೀಯ ವಿದ್ಯಾರ್ಥಿಗಳನ್ನು ಹಾಗೂ ಇತರರನ್ನು ರಕ್ಷಿಸಿ ಕರೆತರಲಾಗಿದೆ.
ಸಮರಪೀಡಿತ ಉಕ್ರೇನ್‌ನ ಸುಮಿ ನಗರದಲ್ಲಿ ಸಿಲುಕಿ ಪರದಾಡುತ್ತಿದ್ದ ಎಲ್ಲ ಭಾರತೀಯರನ್ನು ರಕ್ಷಿಸಲಾಗಿದೆ. ಸುಮಿಯಲ್ಲಿದ್ದ ಎಲ್ಲ 694 ಭಾರತೀಯ ವಿದ್ಯಾರ್ಥಿಗಳನ್ನು ಹಾಗೂ ಇತರರನ್ನು ರಕ್ಷಿಸಿ ಕರೆತರಲಾಗಿದೆ. ಇದರೊಂದಿಗೆ ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ ಭಾರತೀಯರ ತೆರವಿಗೆ ಆರಂಭಿಸಲಾಗಿದ್ದ ಆಪರೇಷನ್ ಗಂಗಾ ಬಹುತೇಕ ಅಂತ್ಯದತ್ತ ಸಾಗಿದಂತಾಗಿದೆ. ಆಪರೇಶನ್ ಗಂಗಾ ಯೋಜನೆಯಡಿ ಭಾರತ ಈವರೆಗೆ 87 ವಿಮಾನಗಳಲ್ಲಿ 17,600ಕ್ಕೂ ಹೆಚ್ಚು ಭಾರತೀಯರನ್ನು ಸ್ವದೇಶಕ್ಕೆ ಕರೆತಂದಿದೆ.