ಶಿಕ್ಷಕರು ಮಕ್ಕಳಿಗೆ ದಾರಿ ತೋರುವ ಗುರುಗಳು. ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳುವ ಶಿಕ್ಷಕರು ಮಕ್ಕಳ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರ ಇಲ್ಲೊಂದು ಕಡೆ ಶಿಕ್ಷಕರೇ ಖರ್ಚಿಗಾಗಿ ಕಿತ್ತಾಡಿದ್ದಾರೆ. ಮಧ್ಯಪ್ರದೇಶ ಸಾತ್ನಾ ಜಿಲ್ಲೆಯ ಚಿತ್ರಕೂಟದ ಶಾಲೆಯೊಂದರಲ್ಲಿ ಈ ಅವಮಾನಕಾರಿ ಘಟನೆ ನಡೆದಿದೆ. ಒಂದು ಕುರ್ಚಿಗಾಗಿ ಇಬ್ಬರು ಮಹಿಳಾ ಶಿಕ್ಷಕರು ಕಿತ್ತಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಕ್ಕಳಿಗೆ ಬುದ್ದಿ ಹೇಳಬೇಕಾದ ಶಿಕ್ಷಕರೇ ಹೀಗೆ ಮಕ್ಕಳಿಗಿಂತ ಕಡೆಯಾಗಿ ಒಂದು ಕುರ್ಚಿಗಾಗಿ ಕಿತ್ತಾಡಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.