Jan 6, 2025, 4:03 PM IST
ಊರವರಿಗೆ ಬಾಡೂಟ ಹಾಕಿಸುತ್ತಿದ್ದ ಪರೋಪಕಾರಿ ಹೆಸರು ಅಭಿಜಿತ್. ತಿಂಗಳಲ್ಲಿ ಎಷ್ಟೇ ಆದಾಯ ಪಡೆದರೂ ಅದರಲ್ಲಿ 90 ಪರ್ಸೆಂಟ್ ಊರವರಿಗೆ ಖರ್ಚು ಮಾಡುತ್ತಿದ್ದ. ಬಾಡೂಟ ಹಾಕ್ಸಿ ಜಾತ್ರೆ ಮಾಡುತ್ತಿದ್ದ. ಹೀಗಾಗಿ ಈತ ಊರಲ್ಲಿ ಹೀರೋ ಆಗಿದ್ದ. ಸ್ಥಳೀಯ ರಾಜಕಾರಣಿಗಿಂತ ಅಭಿಜಿತ್ ಎಲ್ಲರ ಅಚ್ಚುಮೆಚ್ಚಾಗಿದ್ದ. ಆದರೆ ಈತನ ಬಾಡೂಟದ ಅಸಲಿ ವಿಚಾರ ಬಹಿರಂಗವಾದಾಗ ಇದೀಗ ಊರವರಿಗೆ ತಿಂದ ಬಡೂಟ ವಾಂತಿಯಾಗುವಂತೆ ಆಗುತ್ತಿದೆ. ಇದೀಗ ಪರೋಪಕಾರಿ ಅಭಿಜಿತ್ ಜೈಲು ಸೇರಿದ್ದಾನೆ.