
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದುಗುಳಿಯ ಕಾನನದೊಳಗೆ ನೆಲೆನಿಂತಿರುವ ಘಂಟೆ ಗಣಪತಿ ಕ್ಷೇತ್ರವು ಮಹಿಮೆಯಿಂದ ಪ್ರಸಿದ್ಧವಾಗಿದೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದುಗುಳಿಯ ಕಾನನದೊಳಗೆ ನೆಲೆನಿಂತಿರುವ ಘಂಟೆ ಗಣಪತಿ ಕ್ಷೇತ್ರವು ಮಹಿಮೆಯಿಂದ ಪ್ರಸಿದ್ಧವಾಗಿದೆ. ವಿನಾಯಕ ಚತುರ್ಥಿಯ ದಿನ ಈ ಸುಕ್ಷೇತ್ರದಲ್ಲಿ ದರ್ಶನ ಮಾಡುವುದು ಅತ್ಯಂತ ಶುಭಕರವಾಗಿದೆ. ಇಲ್ಲಿ ಗಣೇಶನ ದರ್ಶನ ಮಾಡುವಾಗ ಘಂಟಾ ಶ್ರವಣದಿಂದಲೇ ಫಲಸಿದ್ಧಿ ಸಾಧ್ಯವಾಗುತ್ತದೆ. ಈ ಕ್ಷೇತ್ರದಲ್ಲಿ ಘಂಟೆ ಸಮರ್ಪಣೆ ಮಾಡಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ. ನೊಂದ ಮನಸ್ಸುಗಳಿಗೆ ಶಾಂತಿ ಮತ್ತು ಸಮಾಧಾನವನ್ನು ತರುವ ಪವಿತ್ರ ಸ್ಥಳವೆಂದು ಭಕ್ತರು ನಂಬುತ್ತಾರೆ. ಜೀವನದ ಸಮಸ್ಯೆಗಳಿಗೆ ಹೂವಿನ ಪ್ರಸಾದ ಕೇಳುವ ಪರಂಪರೆ ಈ ಕ್ಷೇತ್ರದಲ್ಲಿ ಪ್ರಸಿದ್ಧವಾಗಿದೆ. ಗಣೇಶನು ಹೂವಿನ ಪ್ರಸಾದ ರೂಪದಲ್ಲಿ ಭಕ್ತರಿಗೆ ವರವನ್ನು ನೀಡುತ್ತಾನೆ ಎಂದು ವಿಶ್ವಾಸವಿದೆ.