
ಕಾಮಿಡಿ ಕಿಲಾಡಿ ಮಡೆನೂರು ಮನುನ ಚಿತ್ರರಂಗ ಮತ್ತು ಕಿರುತೆರೆಯಿಂದ ಬ್ಯಾನ್ ಮಾಡಲಾಗಿದೆ. ಸ್ಟಾರ್ ನಟರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಮನುಗೆ ಇನ್ಮುಂದೆ ಯಾರೂ ಸಹಕಾರ ಕೊಡಬಾರದು ಅಂತ ಫಿಲ್ಮ್ ಚೇಂಬರ್ ನಿರ್ಧಾರ ಮಾಡಿದೆ. ಅಲ್ಲಿಗೆ ಮನು ಪಾಲಿಗೆ ಮೊದಲ ಚಿತ್ರವೇ ಕೊನೆ ಚಿತ್ರವಾಗಿದೆ.
ಮಡೆನೂರು ಮನುವನ್ನ ಕೊನೆಗೂ ಚಿತ್ರರಂಗ ಮತ್ತು ಕಿರುತೆರೆಯಿಂದ ಬ್ಯಾನ್ ಮಾಡಲಾಗಿದೆ. ಒಂದು ಕಡೆಗೆ ಸಹನಟಿಯನ್ನ ಅ*ತ್ಯಾಚಾರ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದ ಮನುವಿನದ್ದು ಒಂದು ಆಡಿಯೋ ವೈರಲ್ ಆಗಿತ್ತು. ಆ ಆಡಿಯೋದಲ್ಲಿ ಶಿವರಾಜ್ಕುಮಾರ್, ದರ್ಶನ್ ಮತ್ತು ಧ್ರುವ ಸರ್ಜಾರನ್ನ ಮನು ಹೀನಾಯವಾಗಿ ನಿಂದಿಸಿದ್ದ. ಈ ಆಡಿಯೋ ಕೇಳಿ ಗರಂ ಆಗಿದ್ದ ಈ ನಟರುಗಳ ಫ್ಯಾನ್ಸ್ ಫಿಲ್ಮ್ ಚೇಂಬರ್ಗೆ ದೂರು ಕೊಟ್ಟಿದ್ರು. ಇವತ್ತು ಸಭೆ ನಡೆಸಿರೋ ಚಲನಚಿತ್ರ ವಾಣಿಜ್ಯ ಮಂಡಳಿ, ಚಿತ್ರರಂಗ ಮತ್ತು ಕಿರುತೆರೆಯ ಯಾರು ಕೂಡ ಮನುಗೆ ಸಹಕಾರ ಕೊಡಬಾರದು ನಿರ್ಧಾರ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಮನು ವಿರುದ್ದ ವಾಣಿಜ್ಯ ಮಂಡಳಿಯಿಂದಲೇ ದೂರು ದಾಖಲಿಸಲಿದ್ದಾರೆ.