
ಈ ಸಾರಿ ಬಿಗ್ಬಾಸ್ ನಲ್ಲಿ ತನ್ನ ಕಾಮಿಡಿ ಟೈಮಿಂಗ್ ನಿಂದ ಎಲ್ಲರ ಮನಸು ಗೆದ್ದಿರೋದು ಗಿಲ್ಲಿ ನಟ. ಬರೀ ಕಾಮಿಡಿ ಮಾತ್ರ ಅಲ್ಲ ಗಿಲ್ಲಿಯ ಲವ್ ಟ್ರ್ಯಾಕ್ ಕೂಡ ಬಿಗ್ಬಾಸ್ ನೋಡುಗರಿಗೆ ಸಖತ್ ಮನರಂಜನೆ ಕೊಡ್ತಾ ಇವೆ. ಈ ಸಾರಿ ಬಿಗ್ಬಾಸ್ ಸೀಸನ್ ಯಶಸ್ವಿಯಾಗಿ ನಡೆದುಕೊಂಡು ಹೋಗ್ತಾ ಇದೆಯಂದ್ರೆ ಅದ್ರಲ್ಲಿ ಗಿಲ್ಲಿ ಪಾಲು ದೊಡ್ಡದಿದೆ. ಸಹ ನಿರ್ದೇಶಕ ಆಗೋಕೆ ಬಂದು ಕಾಮಿಡಿ ಕಿಲಾಡಿಯಾಗಿ ಹೆಸರು ಮಾಡಿದ ಈ ಹಳ್ಳಿ ಹೈದ ಈಗ ಬಿಗ್ಬಾಸ್ ಮನೆಯಲ್ಲಿ ತನ್ನ ಕಾಮಿಡಿ ಟೈಮಿಂಗ್ನಿಂದ ಎಲ್ಲರನ್ನೂ ನಕ್ಕುನಗಿಸ್ತಾ ಇದ್ದಾನೆ.ಬರೀ ಜಗಳ, ಕಿರಿಕ್ ನಡುವೆ ಗಿಲ್ಲಿಯ ಕಾಮಿಡಿ ಪ್ರೇಕ್ಷಕರಿಗೆ ರುಚಿಸ್ತಾ ಇದೆ.
ಇನ್ನೂ ಕಾಮಿಡಿ ಜೊತೆ ಜೊತೆಗೆ ಗಿಲ್ಲಿಯ ಲವರ್ಬಾಯ್ ಅವತಾರವೂ ನೋಡುಗರಿಗೆ ಇಷ್ಟವಾಗ್ತಾ ಇದೆ. ಜಂಟಿ ಟಾಸ್ಕ್ನಲ್ಲಿ ಜೊತೆಯಾದ ಕಾವ್ಯಳ ಜೊತೆಗಿನ ಗಿಲ್ಲಿ ಲವ್ ಟ್ರಾಕ್ ಇನ್ನೂ ಮುಂದುವರೆದಿದೆ.ಇತ್ತೀಚಿಗೆ ಕಾವ್ಯ ಹೇಳಿದಳು ಅಂತ ಗಡ್ಡಕ್ಕೆ ಕತ್ತರಿ ಹಾಕಿರೋ ಗಿಲ್ಲಿ, ಕೆಂಪೇಗೌಡರ ಅವತಾರ ತಳೆದಿದ್ದಾನೆ. ಈ ಎಪಿಸೋಡ್ ಪ್ರೇಕ್ಷಕರಿಗೆ ಸಖತ್ ಕಾಮಿಡಿ ಕಿಕ್ ಕೊಟ್ಟಿದೆ.ತನ್ನ ಕಾಮಿಡಿ ಟ್ರ್ಯಾಕ್ ಜೊತೆ ಲವ್ ಟ್ರ್ಯಾಕ್ ನಿಂದಾನೂ ಬಿಗ್ ಬಾಸ್ನ ನೋಡುವಂತೆ ಮಾಡ್ತಿದ್ದಾನೆ ಗಿಲ್ಲಿ ನಟ. ಸೋ ಈ ಸಾರಿಯ ಬಿಗ್ ಬಾಸ್ ವಿನ್ನಿಂಗ್ ರೇಸ್ನಲ್ಲಿ ಖಂಡಿತ ಗಿಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿದ್ದಾನೆ ಅಂದ್ರೆ ತಪ್ಪಾಗಲ್ಲ.