ಪರಪ್ಪನ ಅಗ್ರಹಾರ ಜೈಲುಕಂಬಿ ಎಣಿಸಿದ ದರ್ಶನ್ ಫ್ಯಾನ್ಸ್ ರಜತ್, ವಿನಯ್‌ಗೌಡಗೂ ಸಿಕ್ತು ಜೈಲೂಟದ ರುಚಿ!

ಪರಪ್ಪನ ಅಗ್ರಹಾರ ಜೈಲುಕಂಬಿ ಎಣಿಸಿದ ದರ್ಶನ್ ಫ್ಯಾನ್ಸ್ ರಜತ್, ವಿನಯ್‌ಗೌಡಗೂ ಸಿಕ್ತು ಜೈಲೂಟದ ರುಚಿ!

Published : Mar 26, 2025, 12:01 PM ISTUpdated : Mar 26, 2025, 12:09 PM IST

ಬಿಗ್​ ಬಾಸ್​ ಖ್ಯಾತಿಯ ರಜತ್​ ಮತ್ತು ವಿನಯ್​ ಗೌಡ ರೀಲ್ಸ್​ ಮಾಡುವ ಭರದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ. ಮಚ್ಚು ಹಿಡಿದು ರೌಡಿಸಂ ಶೈಲಿಯಲ್ಲಿ ವಿಡಿಯೋ ಮಾಡಿದ್ದಕ್ಕೆ ಇಬ್ಬರೂ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜ್ಯದಲ್ಲಿ ಇವರಿಬ್ಬರೂ ಬಿಗ್​​ ಬಾಸ್​​​ ಮೂಲಕ ಫೇಮಸ್​​ ಆದವರು... ಬಿಗ್​​ಬಿಗ್​​ ಬಾಸ್​​​​​ ಮನೆಯಲ್ಲಿದ್ದಾಗ ಕೇವಲ ಗಲಾಟೆಗಳಿಂದಲೇ ಹೆಸರು ಮಾಡಿದ್ದವರು ಈಗ ಹೊರಗೆ ಬಂದ ಮೇಲೂ ಮಾಡಬಾರದನ್ನ ಮಾಡಿ ಸುದ್ದಿಯಾಗ್ತಿದ್ದರು. ನಾವು ಹೇಳ್ತಿರೋದು ರಜತ್​​ ಕಿಶನ್​ ಮತ್ತಯ ವಿನಯ್ ಗೌಡ​​ ಬಗ್ಗೆ. ರಿಯಾಲಿಟಿ ಶೋವೊಂದರಲ್ಲಿ ಪಾಲ್ಗೊಂಡಿದ್ದಾಗ ಒಂದು ರೀಲ್​ ಮಾಡಿ ಇವತ್ತು ಪೊಲೀಸರ ಅತಿಥಿಯಾಗಿದ್ದಾರೆ. ಕೈಯಲ್ಲಿ ಮಚ್ಚು, ರೌಡಿಸಂ ಬಾಡಿ ಲಾಂಗ್ವೇಜ್‌​​​​​ನಲ್ಲಿ ರೀಲ್ಸ್​​ ಮಾಡಿದ್ದ ಈ ಬ್ಯಾಡ್​​ ಬಾಯ್ಸ್‌ಗೆ ಇವತ್ತು ಖಾಕಿ ಗ್ರಿಲ್​ ಮಾಡ್ತಿದೆ. ಪುಡಿ ರೌಡಿಗಳಂತೆ ಹವಾ ಮೇಂಟೇನ್​ ಮಾಡಲು ಹೋಗಿ ತಗ್ಲಾಕಿಕೊಂಡ ಸೀರಿಯಲ್​​​ ದುನಿಯಾದ ಬ್ಯಾಡ್​​ ಬಾಯ್ಸ್​ ಕಥೆಯೇ ಇವತ್ತಿನ ಎಫ್​​.ಐ.ಆರ್​​.

ಆವತ್ತು ರಾತ್ರಿ ಯುದ್ಧವನ್ನೇ ಜಯಿಸಿದ ರೀತಿ ರಜತ್​ ಮತ್ತು ವಿನಯ್​ ಕಾರ್​​ ಗ್ಲಾಸ್​​ ಏರಿಸಿಕೊಂಡು ಹೊರಟೇ ಬಿಟ್ಟರು.. ಆದರೆ ಬೆಳಗ್ಗೆದ್ದು ನೋಡಿದ್ರೆ ಸೀನ್​ ಕಂಪ್ಲೀಟ್​​ ಚೇಂಜ್​​​​. ಮಧ್ಯಾಹ್ನ ಆಗುವಷ್ಟರಲ್ಲೇ ಇಬ್ಬರೂ ಮತ್ತೆ ಪೊಲೀಸರ ಮುಂದೆ ಕೈಕಟ್ಟಿ ಕೂತಿದ್ದರು. ಹಾಗಾದ್ರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಏನೇನಾಯ್ತು.? ಬಿಟ್ಟು ಕಳಿಸಿದ್ದ ಪೊಲೀಸರು ಮತ್ತೆ ಅರೆಸ್ಟ್​​ ಮಾಡಿದ್ದು ಯಾಕೆ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..

ಇದನ್ನೂ ಓದಿ: Breaking: ಮಚ್ಚು ಹಿಡಿದು ರೀಲ್ಸ್‌, ಪರಪ್ಪನ ಅಗ್ರಹಾರಕ್ಕೆ ಬಿಗ್‌ಬಾಸ್‌ ಬ್ಯಾಡ್‌ ಬಾಯ್ಸ್‌!

ಮೊದಲ ದಿನ ಕಾಲರ್​​ ಮೇಲಕ್ಕೇರಿಸಿಕೊಂಡು ಠಾಣೆಯಿಂದ ಹೋಗಿದ್ದ ಬ್ಯಾಡ್​ ಬಾಯ್ಸ್​​ ಅದೇ ರೀತಿ ಇವತ್ತು ಮತ್ತೆ ವಿಚಾರಣೆಗೆ ಬಂದಿದ್ದರು. ಆದ್ರೆ ಈ ಸಲ ಪೊಲೀಸರು ಅವರನ್ನ ಸರಿಯಾಗೇ ಲಾಕ್​ ಮಾಡಿದ್ದರು.. ಹಿಂದಿನ ರಾತ್ರಿ ನಾವು ಬಳಸಿದ್ದು ಇದೇ ಮಚ್ಚು ಅಂತ ಹೋದ ಮೇಲೆ, ಆ ಮಚ್ಚನ್ನ ಪರಿಶೀಲಿಸಿದಾಗ.. ಆ ಮಚ್ಚು ಇದಲ್ಲ ಅನ್ನೋದು ಪೊಲೀಸರಿಗೆ ಅನುಮಾನ ಬಂದಿತ್ತು. ಇತ್ತ ಕಡೆಯಿಂದ ಪೊಲೀಸರ ವಿಚಾರಣೆಯೇ ಮೇಲೆಯೇ ಅನುಮಾನ ಶುರುವಾಯ್ತು. ಇದೆಲ್ಲವನ್ನ ಗಮನಿಸಿದ ಪೊಲೀಸರು ಅವರನ್ನ ಮತ್ತೆ ಬನ್ನಿ ಅಂತ ಕರೆಸಿಕೊಂಡು ಲಾಕ್​ ಮಾಡಿಕೊಂಡಿದ್ದಾರೆ.

ನಾನೇ ಪುಡಾಂಗು.. ನಾವೇ ಬಾಸು ಅಂತ ಮೆರೆಯೋದಕ್ಕೆ ಹೋದ್ರೆ ಏನಾಗುತ್ತೆ ಅನ್ನೋದಕ್ಕೆ ಈ ಪ್ರಕರಣವೂ ಕೂಡ ಒಂದು ಎಕ್ಸಾಂಪಲ್​. ಇನ್ನೂ ಇವರನ್ನ ನೋಡಿ ನೀವೂ ಈ ರೀತಿಯ ಹುಚ್ಚಾಟದ ವಿಡಿಯೋಗಳನ್ನ ಮಾಡಬೇಡಿ ಅಂತ ಹೇಳ್ತಾ ಇವತ್ತಿನ ಎಪಿಸೋಡ್​​ ಮುಗಿಸುತ್ತಿದ್ದೇನೆ.

04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:12BBK 12: ಅಂಥಂಥ ಮಾತಾಡಿ ಅಶ್ವಿನಿ ಗೌಡಗೆ ಕ್ಯಾಪ್ಟನ್ಸಿ ಸಿಗದಂತೆ ಮಾಡಿದ ಗಿಲ್ಲಿ ನಟ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:04ಬಿಗ್​ಬಾಸ್ ಅಗ್ನಿ ಪರೀಕ್ಷೆ, ಬಿಗ್​ ಬಾಸ್ ಮನೆಯಲ್ಲಿ ಗಿಲ್ಲಿಯ ಪ್ರೇಮಕಾವ್ಯ..!
06:01ಗಿಲ್ಲಿ ಮೇಲೆ ಹಲ್ಲೆ ಮಾಡಿಯೂ ಬಚಾವ್ ಆದ್ರಾ ರಿಷಾ ಗೌಡ? ಕಿಚ್ಚ ಸುದೀಪ್ ಎದುರೇ ಕಿಕ್​ ಔಟ್?
Read more