ಭಟ್ಕಳ-ಮಾಜಾಳಿ ಕಡಲಿನಲ್ಲಿ ಅಲೆಗಳ ಅಬ್ಬರ: ಪ್ರವಾಸಿಗರ ಹುಚ್ಚಾಟ

ಭಟ್ಕಳ-ಮಾಜಾಳಿ ಕಡಲಿನಲ್ಲಿ ಅಲೆಗಳ ಅಬ್ಬರ: ಪ್ರವಾಸಿಗರ ಹುಚ್ಚಾಟ

Published : Jun 14, 2023, 03:53 PM IST

ಅರಬ್ಬಿ ಸಮುದ್ರಕ್ಕೆ (Arabian Sea) ಬಿಪರ್‌ಜಾಯ್ ಚಂಡಮಾರುತ ಅಪ್ಪಳಿಸಿದ್ದು, ಭಟ್ಕಳದಿಂದ ಮಾಜಾಳಿಯವರೆಗಿನ‌ ಕಡಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ.

ಬಿಪರ್‌ಜಾಯ್ ಚಂಡ ಮಾರುತದ ಎಫೆಕ್ಟ್'ನಿಂದ ಕಡಲಿನ ಅಬ್ಬರ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ರಾತ್ರಿ ವೇಳೆಯಂತೂ ತೀರ ಪ್ರದೇಶಗಳಿಗೆ ಅಲೆಗಳು ನುಗ್ಗುತ್ತಿವೆ.ಕಡಲಿನ ಅಬ್ಬರ ಹೆಚ್ಚಾಗಿದ್ರೂ ಪ್ರವಾಸಿಗರ ಹುಚ್ಚಾಟ ತಪ್ಪಿಲ್ಲ. ಪ್ರವಾಸಿಗರಾದ ಸಂತೋಷ್ ಹಾಗೂ ಪವನ್ ನಾಯ್ಕ್ ಎಂಬ ಯುವಕರು ಮೃತರಾದ್ರೂ ಜನರಿಗೆ ಬುದ್ಧಿ ಬಂದಿಲ್ಲ. ಹೋಂ ಗಾರ್ಡ್ಸ್, ಸೆಕ್ಯೂರಿಟಿ ಗಾರ್ಡ್ಸ್ ದೂರ ಹೋದಂತೆ ಮತ್ತೆ ಮತ್ತೆ ಕಡಲಿನತ್ತ ಪ್ರವಾಸಿಗರು ಓಡುತ್ತಿದ್ದಾರೆ. ಬೀಚ್‌ಗಳಲ್ಲಿ ನೀರಿನಲ್ಲಿ ಕಪಲ್‌ಗಳ ಆಟ, ಕಾಲೇಜು ವಿದ್ಯಾರ್ಥಿಗಳಿಂದ ಸೆಲ್ಫಿ ಜೋರಾಗಿದ್ದು, ಜಿಲ್ಲಾಡಳಿತ ವಾರ್ನಿಂಗ್ ನೀಡಿದ್ರೂ ಪ್ರವಾಸಿಗರ ನಿರ್ಲಕ್ಷ್ಯ  ಮುಂದುವರಿದೆ.