ಸರ್ಕಾರ ಹಲಾಲ್ ಖರೀದಿಸಬೇಡಿ ಎಂದು ಹೇಳಿಲ್ಲ, ಎರಡೂ ಸಮುದಾಯಕ್ಕೂ ಬುದ್ದಿ ಹೇಳಬೇಕು

ಸರ್ಕಾರ ಹಲಾಲ್ ಖರೀದಿಸಬೇಡಿ ಎಂದು ಹೇಳಿಲ್ಲ, ಎರಡೂ ಸಮುದಾಯಕ್ಕೂ ಬುದ್ದಿ ಹೇಳಬೇಕು

Published : Mar 30, 2022, 05:59 PM IST

ರಾಜ್ಯದಲ್ಲಿ ವಿವಾದದ ರೂಪ ತಾಳಿದ ಹಲಾಲ್

ಹಲಾಲ್ ಮಾಂಸ ಖರೀದಿಸಬೇಡಿ ಎಂದು ಸರ್ಕಾರ ಹೇಳಿಲ್ಲ

ಎರಡೂ ಸಮುದಾಯಕ್ಕೂ ಬುದ್ದಿ ಹೇಳುವ ಕೆಲಸವಾಗಬೇಕು

ಬೆಂಗಳೂರು (ಮಾ.30):  ಹಲಾಲ್ ಮಾಡಿ ಕತ್ತರಿಸಿದ ಮಾಂಸ (Halal Meat) ಬಹಿಷ್ಕಾರಿಸಲು ಹಿಂದು ಸಂಘಟನೆಗಳು ಕರೆ ಕೊಟ್ಟಿದೆ. ಈ ವಿಚಾರದ ಬಗ್ಗೆ ಈಗ ಎಲ್ಲೆಡೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಪರ ವಿರೋಧ ಅಭಿಪ್ರಾಯಗಳು ಕೇಳಿ ಬಂದಿದೆ. ಈ ನಡುವೆ ಕಲಾಪದಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್ (revenue minister R Ashoka), ಸರ್ಕಾರ ಹಲಾಲ್ ಮಾಂಸ ಖರೀದಿಸಬೇಡಿ ಎಂದು ಎಲ್ಲೂ ಹೇಳಿಲ್ಲ. ಎರಡೂ ಸಮುದಾಯಕ್ಕೆ ಬುದ್ದಿ ಹೇಳುವ ಕೆಲಸವಾಗಬೇಕು ಎಂದು ಹೇಳಿದ್ದಾರೆ.

ಬುಧವಾರ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (H D Kumaraswamy) ಈ ವಿಚಾರ ಪ್ರಸ್ತಾಪ ಮಾಡಿದ ಬೆನ್ನಲ್ಲಿಯೇ ಮಧ್ಯಪ್ರವೇಶಿಸಿ ಮಾತನಾಡಿದ ಅಶೋಕ್, "ಯಾರು ಎಲ್ಲಿ ಖರೀದಿಸಬೇಕು ಅನ್ನೋದು ಅವರ ಹಕ್ಕು. ಇಲ್ಲೇ ತೆಗೆದುಕೊಳ್ಳಿ, ಅಲ್ಲೇ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡುವುದು ತಪ್ಪು. ಹಲಾಲ್ ಖರೀದಿಸಬೇಡಿ ಎಂದು ಸರ್ಕಾರ ಎಲ್ಲೂ ಹೇಳಿಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದಲ್ಲಿ ಹಲಾಲ್ ವಿರೋಧಿ ಅಭಿಯಾನ: ಸಿಎಂ ಬೊಮ್ಮಾಯಿ ಕೊಟ್ಟ ಉತ್ತರವೇನು?

ಎರಡೂ ಸಮುದಾಯಕ್ಕೂ ಬುದ್ಧಿವಾದ ಹೇಳುವ ಕೆಲಸವಾಗಬೇಕು. ಈ ವಿಚಾರದಲ್ಲಿ ಸರ್ಕಾರ ಯಾರದೋ ಒಬ್ಬರ ಪರವಾಗಿ ಮಾತನಾಡುವುದಿಲ್ಲ ಎಂದು ಅಶೋಕ್ ಹೇಳಿದ್ದಾರೆ. ಕುರಿತಾಗಿ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕೂಡ, ಎಲ್ಲಾ ಸಂಘಟನೆಗಳು ಹಲವಾರು ವಿಚಾರದಲ್ಲಿ ಬ್ಯಾನ್ ಮಾಡುತ್ತಲೇ ಇರುತ್ತವೆ. ಆದರೆ ಇದಕ್ಕೆಲ್ಲಾ ಸರ್ಕಾರ ತನ್ನ ನಿಲುವನ್ನು ಹೇಳುತ್ತಾ ಇರಲು ಆಗಲ್ಲ, ಯಾವಾಗ ಏನು ಹೇಳಬೇಕೋ ಆಗ ಹೇಳಲಿದ್ದೇವೆ. ಯಾವಾಗ ನಿಲುವು ವ್ಯಕ್ತಪಡಿಸಬೇಕೋ ಆಗ ವ್ಯಕ್ತಪಡಿಸಲಿದ್ದೇವೆ ಎಂದು ಹೇಳುವ ಮೂಲಕ ತಮ್ಮ ನಿಲವನ್ನು ಸ್ಪಷ್ಟಪಡಿಸಿದ್ದಾರೆ.

18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
Read more