ಪ್ರಧಾನಿ ಮೋದಿ ಜನ ಕಾಳಜಿ ಇರೋ‌ ನಾಯಕ: ಜಯನಗರದಲ್ಲಿ 100ನೇ ಜನೌಷಧ ಕೇಂದ್ರ ಉದ್ಘಾಟಿಸಿ ಸಿಎಂ ಮಾತು

ಪ್ರಧಾನಿ ಮೋದಿ ಜನ ಕಾಳಜಿ ಇರೋ‌ ನಾಯಕ: ಜಯನಗರದಲ್ಲಿ 100ನೇ ಜನೌಷಧ ಕೇಂದ್ರ ಉದ್ಘಾಟಿಸಿ ಸಿಎಂ ಮಾತು

Published : Mar 07, 2023, 07:02 PM IST

ಜಯನಗರದಲ್ಲಿ 100ನೇ ಜನೌಷಧಿ ಕೇಂದ್ರ ಉದ್ಘಾಟನೆ 
ಅತ್ಯಂತ  ಕಡಿಮೆ ದರದಲ್ಲಿ ಔಷಧಗಳನ್ನು ನೀಡುವ ಕಾರ್ಯಕ್ರಮ
ಬೆಂಗಳೂರಿಗೆ ಆರೋಗ್ಯಕ್ಕಾಗಿ ವಿಶೇಷ ವ್ಯವಸ್ಥೆ ರೂಪಿಸಲಾಗುತ್ತಿದೆ

ಬೆಂಗಳೂರು (ಮಾ.07): ಬೆಂಗಳೂರಿನ ನಾಗರಿಕರ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಅತಿ ಹೆಚ್ಚಿನ ಗಮನವನ್ನು ನೀಡಲಾಗಿದ್ದು, ಬೆಂಗಳೂರಿಗೆ ಆರೋಗ್ಯಕ್ಕಾಗಿ ವಿಶೇಷ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ  ವತಿಯಿಂದ ಜಯನಗರದಲ್ಲಿ ಆಯೋಜಿಸಿದ್ದ  ಜನೌಷಧಿ ದಿವಸ್ ಆಚರಣೆ-2023 ಮತ್ತು 100 ನೇ ಜನೌಷಧಿ ಕೇಂದ್ರವನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ ಮಾತನಾಡಿದರು.

ಕಾಫಿ, ತಿಂಡಿಗೆ ಸಿದ್ದರಾಮಯ್ಯ ಸರ್ಕಾರ ₹200 ಕೋಟಿ ಖರ್ಚು: ಬಿಜೆಪಿ 

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿ ಮತ್ತು ಬಡವರ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ.  ಅವರು ಪ್ರಧಾನಿಯಾಗುವ ಮುನ್ನ ಅತ್ಯಂತ  ಕಡಿಮೆ ದರದಲ್ಲಿ ಔಷಧಗಳನ್ನು ನೀಡುವ ಕಾರ್ಯಕ್ರಮ ಇರಲಿಲ್ಲ. ಆಡಳಿತಗಾರರಿಗೆ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳ ಬಗ್ಗೆ ಕಳಕಳಿ ಇರಬೇಕು. ಬಡತನವನ್ನು ಅನುಭವಿಸಿದಾಗ, ಹತ್ತಿರದಿಂದ ನೋಡಿ ಬಡವರ ಸಂಕಷ್ಟವನ್ನು ತಿಳಿದುಕೊಂಡಾಗ ಮಾತ್ರ ಬರುತ್ತದೆ. ನರೇಂದ್ರ ಮೋದಿಯವರಿಗೆ ಬಡತನ ಎಂದರೇನು ಎಂದು ತಿಳಿದಿದೆ. ನೂರು ರೂ.ಗಳೂ ಸಹ ಇಲ್ಲದ ಸ್ಥಿತಿಯಲ್ಲಿರುತ್ತಾರೆ, ಒಔಷಧಿ ಕಂಪನಿಗಳ ದರ ದಕ್ಕೆ ಹತ್ತುಪಟ್ಟು ಮಾಡಿರುತ್ತಾರೆ. ಬಡವರ ಕಷ್ಟವನ್ನು ಅರ್ಥ ಮಾಡಿಕೊಂಡಿರುವ ಪ್ರಧಾನಿಗಳು ಬಡವರಿಗಾಗಿ ಸುಲಭ ಮತ್ತು ಕಡಿಮೆ ದರದಲ್ಲಿ ದೊರೆಯಬೇಕೆಂದು. ಗುಣಮುಖರಾಗಿ ಆರೋಗ್ಯವಂತರಾಗಬೇಕು.  ಭಾರತ ಸಶಕ್ತವಾಗಬೇಕಾದರೆ , ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ತಲುಪಬೇಕೆಂದು ಇಂಥ ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.

ಬದ್ಧತೆಯ ನಾಯಕತ್ವ : ಆರೋಗ್ಯಕ್ಕೆ ಮೊದಲು ಅಗತ್ಯವಿರುವುದು ಶುದ್ಧವಾದ ನೀರು,  ದೇಶದ ಗ್ರಾಮಗಳಲ್ಲಿರುವ ಎಲ್ಲರ ಮನೆಗೆ ಮುಂದಿನ 5 ವರ್ಷಗಳಲ್ಲಿ ನೀರು ಕೊಡುವುದಾಗಿ ಘೋಷಿಸಿದ್ದ ಪ್ರಧಾನಿಗಳು,  ನಾಯಕನಿಗೆ ಬದ್ಧತೆ, ಛಲ,ಬುದ್ಧಿವಂತಿಕೆ ಹಾಗೂ ಬುದ್ದಿವಂತಿಕೆಗೆ ಹಣ ಕೊಡುವ ಹೃದಯ ವೈಶಾಲ್ಯವಿದ್ದರೆ ಅದು ಸಾಧ್ಯವಿದೆ. ಜಲ್ ಜೀವನ್ ಮಿಷನ್ ಅಡಿಯಲ್ಲಿ ಅಸಾಧ್ಯವಾದುದನ್ನು ಸಾಧ್ಯ ಮಾಡಲಾಗುತ್ತಿದೆ.  ಅಸಾಧ್ಯವಾದುದನ್ನು ಸಾಧ್ಯ ಮಾಡುವುದೇ ನಿಜವಾದ ನಾಯಕತ್ವ.  10 ಕೋಟಿಗಳಿಂತ ಹೆಚ್ಚು ಮನೆಗಳಿಗೆ  ಮೋದಿಯವರು ಶುದ್ಧವಾದ ಕುಡಿಯುವ ನೀರನ್ನು ಕೊಡುತ್ತಿದ್ದಾರೆ.  ಕರ್ನಾಟಕ  ಒಂದರಲ್ಲಿಯೇ 72 ವರ್ಷ ಕೇವಲ 25 ಲಕ್ಷ ಮನೆಗಳಿಗೆ ನೀರು ಕೊಡಲಾಗಿತ್ತು. ಕಳೆದ ಮೂರು ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಲಾಗಿದೆ.  ಇದು ಬದ್ಧತೆಯ ನಾಯಕತ್ವ, ಹಾಗೂ ಬದ್ಧತೆಯಾಗಿದೆ ಎಂದರು.

ಬ್ರಾಹ್ಮಣರ ನಿಗಮಕ್ಕೆ ₹10 ಕೋಟಿ ಅನುದಾನ ಬಿಡುಗಡೆ: ಸಿಎಂ ಅಂಕಿತ

100ನೇ ಜನೌಷಧ ಕೇಂದ್ರ ದಾಖಲೆ: 
ಸಂಸದ ತೇಜಸ್ವಿ ಸೂರ್ಯ ಅವರ ಕ್ಷೇತ್ರದಲ್ಲಿ ನೂರನೇ ಜನೌಷಧಿ ಕೇಂದ್ರ ಉದ್ಘಾಟನೆಗೊಂಡಿದ್ದು, ಇಡೀ ದೇಶದಲ್ಲಿ  ಸಂಸದರೊಬ್ಬರ ಕ್ಷೇತ್ರದಲ್ಲಿ ಇರುವುದು ಒಂದು ದಾಖಲೆ. ಇದು ಜನಪರ ಕಾಳಜಿಯನ್ನು ತೋರಿಸುತ್ತದೆ. ಇಲ್ಲಿ ವಾಸವಿ ಚಾರಿಟಬಲ್ ಆಸ್ಪತ್ರೆಗೆ ಅಭಿನಂದನೆಗಳನ್ನು ಸಲ್ಲಿಸಿದ ಅವರು  ಕೆ.ಎಸ್.ಆರ್.ಟಿ.ಸಿ ಯಲ್ಲಿ ಆಸ್ಪತ್ರೆಯಾಗಿ ಪರಿವರ್ತನೆ ಮಾಡಿರುವುದನ್ನು ದತ್ತು ಪಡೆದು ಡಯಾಲಿಸ್ ಕೇಂದ್ರ ತೆರೆದು ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
 

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!