News Hour ನಾನ್ಯಾಕೆ ರಾಜೀನಾಮೆ ಕೊಡ್ಲಿ ಎಂದ ಈಶ್ವರಪ್ಪ, ಪಟ್ಟು ಬಿಡದ ಕಾಂಗ್ರೆಸ್!

News Hour ನಾನ್ಯಾಕೆ ರಾಜೀನಾಮೆ ಕೊಡ್ಲಿ ಎಂದ ಈಶ್ವರಪ್ಪ, ಪಟ್ಟು ಬಿಡದ ಕಾಂಗ್ರೆಸ್!

Published : Apr 13, 2022, 11:52 PM ISTUpdated : Apr 13, 2022, 11:53 PM IST

ಬುಧವಾರ ಇಡೀ ದಿನ ರಾಜ್ಯ ರಾಜಕಾರಣದಲ್ಲಿ ಕ್ಲಾಸ್ 1 ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ, ಅದಕ್ಕಾಗಿ ಸಚಿವ ಕೆಎಸ್ ಈಶ್ವರಪ್ಪ ರಾಜೀನಾಮೆ ವಿಚಾರಗಳೇ ಸುದ್ದಿಯಾದವು. ಈಶ್ವರಪ್ಪ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡೋದಿಲ್ಲ ಎಂದು ಹೇಳಿದ್ದರೆ, ಕಾಂಗ್ರೆಸ್ ಮಾತ್ರ ರಾಜೀನಾಮೆಗಾಗಿ ಪಟ್ಟು ಹಿಡಿದು ಕುಳಿತಿದೆ.
 

ಬೆಂಗಳೂರು (ಏ.13): ತಮ್ಮ ಮೇಲಿನ 40% ಕಮೀಷನ್ ಆರೋಪದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ(KS Eshwarappa) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುವ ಊಹಾಪೋಹಗಳ ನಡುವೆಯೇ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪ ನಾನ್ಯಾಕೆ ರಾಜೀನಾಮೆ ನೀಡಲಿ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನೊಂದೆಡೆ ಕ್ಲಾಸ್ 1 ಗುತ್ತಿಗೆದಾರ ಸಂತೋಷ್ ಪಾಟೀಲ್ (Contractor Santosh Patil) ಆತ್ಮಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಕೆಎಸ್ ಈಶ್ವರಪ್ಪ ಅವರ ರಾಜೀನಾಮೆ ಪಡೆಯಬೇಕು ಎಂದು ವಿರೋಧ ಪಕ್ಷ ಕಾಂಗ್ರೆಸ್ (Congress)ಒತ್ತಾಯ ಮಾಡಿದೆ. ಅದರಂತೆ ಇಂದು ದೆಹಲಿ ಹಾಗೂ ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ವತಿಯಿಂದ ದೊಡ್ಡ ಮಟ್ಟದ ಪ್ರತಿಭಟನೆಯಾಗಿದ್ದು, ಈಶ್ವರಪ್ಪ ಅವರ ಮನೆಯ ಮುಂದೆ ಅಹೋರಾತ್ರಿ ಧರಣಿ ಮಾಡುವುದಾಗಿ ಕಾಂಗ್ರೆಸ್ ಹೇಳಿದೆ.

Suicide Case: ಈಶ್ವರಪ್ಪ ಅಂಥವರಲ್ಲ.. ಅಂಥವರಲ್ಲ..: ಮಖಣಾಪೂರ ಸ್ವಾಮೀಜಿ

ಇನ್ನೊಂದೆಡೆ, ಕಾಂಗ್ರೆಸ್ ಮುಖಂಡರೆಲ್ಲ ಬೆಳಗಾವಿಗೆ ತೆರಳಿ ಸಂತೋಷ್ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಪಕ್ಷದ ವತಿಯಿಂದ 11 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಲಾಗಿದೆ.  ಈ ನಡಯವೆ ಕಮೀಷನ್ ವಿಚಾರದಲ್ಲಿ ಸಿಲುಕಿಕೊಂಡಿರುವ ಸಚಿವ ಕೆಎಸ್ ಈಶ್ವರಪ್ಪ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಅವಸರ ತೋರುತ್ತಿಲ್ಲ. ಹಾಗೇನಾದರೂ ರಾಜೀನಾಮೆ ಪಡೆದಲ್ಲಿ ಈಶ್ವರಪ್ಪ ಮೇಲಿನ ಭ್ರಷ್ಟಾಚಾರವನ್ನು ಒಪ್ಪಿಕೊಂಡಂತಾಗಲಿದೆ ಎನ್ನುವ ಎಚ್ಚರಿಕೆಯನ್ನು ಹೈಕಮಾಂಡ್ ತೋರಿದೆ. ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ವೇಳೆಗೆ ದೊಡ್ಡ ಅಸ್ತ್ರ ಸಿಕ್ಕಂತಾಗಲಿದೆ ಎನ್ನುವ ಅಭಿಪ್ರಾಯ ಹೊಂದಿದೆ.

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
26:49ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ: ಸಿಲಿಂಡರ್​​ ಬಾಂಬ್!
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
Read more