ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?

ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?

Published : Feb 04, 2026, 05:29 PM IST

ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಶತಮಾನಗಳಷ್ಟು ಹಳೆಯದಾದ ನಿಗೂಢ ಸುರಂಗ ಮಾರ್ಗಗಳಿವೆ. ರಾಜರ ಕಾಲದಿಂದ ಬ್ರಿಟಿಷರವರೆಗೆ ಇಲ್ಲಿ ಚಿನ್ನದ ಗಣಿಗಾರಿಕೆ ನಡೆದಿದೆ ಎಂದು ಸ್ಥಳೀಯರು ಬಲವಾಗಿ ನಂಬಿದ್ದರೂ, ಅಧಿಕೃತ ದಾಖಲೆಗಳಲ್ಲಿ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. 

ಇವತ್ತು ನಿಮಗೊಂದು ಸಿನಿಮಿಯಾ ಸ್ಟೋರಿಯೊಂದನ್ನು ಹೇಳುತ್ತಿದ್ದೇವೆ. ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಪ್ರದೇಶದಲ್ಲಿ ನಿಗೂಢ ಹಾಗೂ ದುರ್ಗಮವಾದ ಸುರಂಗ ಮಾರ್ಗಗಳು ಶತಮಾನಗಳ ಕಾಲದಿಂದಲೂ ಇವೆ. ಏಕಿವೆ ಅನ್ನೋದನ್ನ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಹೌದು, ರಾಜ ಮಹರಾಜರುಗಳ ಕಾಲದಿಂದಲೂ ಇಲ್ಲಿ ಚಿನ್ನದ ಗಣಿಗಾರಿಕೆ ನಡೆದಿದೆ. ಬ್ರಿಟಿಷರು ಕೂಡ ಇಲ್ಲಿ ಸಾಕಷ್ಟು ಚಿನ್ನವನ್ನು ಕೆರೆದುಕೊಂಡು ಹೋಗಿದ್ದಾರೆ. ಆದ್ರೆ, ನಮ್ಮ ಅಧಿಕೃತ ದಾಖಲೆಗಳಲ್ಲಿ ಮಾತ್ರ ಇಲ್ಲೊಂದು ಗಣಿಗಾರಿಕೆ ನಡೆದಿತ್ತು. ಚಿನ್ನದ ನಿಕ್ಷೇಪವಿತ್ತು ಅನ್ನೋ ಮಾಹಿತಿ ಇಲ್ಲ. ಆದ್ರೆ, ಸುವರ್ಣ ನ್ಯೂಸ್​​​ ಆ ದುರ್ಗಮ ಸುರಂಗವನ್ನು ಹೊಕ್ಕು ಅದ್ರೊಳಗೆ ಏನಿದೆ ಅನ್ನೋದನ್ನ ಪತ್ತೆ ಮಾಡಿದೆ. ಆ ಡೀಟೈಲ್​​ ಇಲ್ಲಿದೆ ನೋಡಿ

ಕಪ್ಪತಗುಡ್ಡ ಅರಣ್ಯ ಪ್ರದೇಶ ಸೇರಿದಂತೆ ಇಲ್ಲಿನ ಸುತ್ತಮೂತ್ತಲೂ ಸಾಕಷ್ಟು ಕಡೆಗಳಲ್ಲಿ ಚಿನ್ನದ ನಿಕ್ಷೇಪಗಳು ಇವೆಯಂತೆ. ಕಣಿವೆಹೊಸೂರಿನಲ್ಲಿಯೂ ಚಿನ್ನದ ಗಣಿಗಾರಿಕೆ ನಡೆಯುತ್ತಿತ್ತು ಅಂತ ಇಲ್ಲಿನ ಜನ್ರು ಹೇಳ್ತಾರೆ. ಯಾರೋ ಒಬ್ರು ಇಬ್ರು ಹೇಳಿದ್ರೆ, ಈ ಮಾತನ್ನು ಅಲ್ಲಗಳೆಯ ಬಹುದಿತ್ತು. ಆದ್ರೆ, ಇಲ್ಲಿನ ಮನೆಮನೆಯಲ್ಲೂ ಹಿರಿಯರು ಇದೇ ಮಾತುಗಳನ್ನು ಇಲ್ಲಿನ ಜನ್ರಿಗೆ ಹೇಳಿಕೊಂಡು ಬಂದಿದ್ದಾರೆ. ಹೀಗಾಗಿ ಇಲ್ಲಿನ ಜನ್ರು ಈ ವಿಷ್ಯವನ್ನು ಪ್ರಬಲವಾಗಿ ನಂಬ್ಕೊಂಡು ಬಂದಿದ್ದಾರೆ.
 

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
Read more