ನಾನು ಯಾರ ಜೊತೆ ವ್ಯವಹಾರ ಮಾಡ್ಬೇಕು ಗೊತ್ತಿದೆ; ಖಾದರ್ ಗೆ ಶಾಸಕ ಕಾಮತ್ ತಿರುಗೇಟು

ನಾನು ಯಾರ ಜೊತೆ ವ್ಯವಹಾರ ಮಾಡ್ಬೇಕು ಗೊತ್ತಿದೆ; ಖಾದರ್ ಗೆ ಶಾಸಕ ಕಾಮತ್ ತಿರುಗೇಟು

Published : Mar 27, 2022, 11:39 AM IST

ಮಂಗಳೂರಿನ (Mangaluru) ಬಿಜೆಪಿ ಶಾಸಕರುಗಳ ಗುತ್ತಿಗೆದಾರರೆಲ್ಲಾ ಮುಸ್ಲಿಮರೇ. ಆದರೆ ರಾಜಕೀಯಕ್ಕಾಗಿ ಮುಸ್ಲಿಮರನ್ನ ವಿರೋಧಿಸ್ತಾರೆ ಅಂದಿದ್ದ ವಿಧಾನಸಭೆ ವಿಪಕ್ಷ ನಾಯಕ ಯು.ಟಿ.ಖಾದರ್ (YT Khadar) ಆರೋಪಕ್ಕೆ ‌ಮಂಗಳೂರು ದಕ್ಷಿಣದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ (Vedavyasa Kamat) ತಿರುಗೇಟು ಕೊಟ್ಟಿದ್ದಾರೆ.

ಮಂಗಳೂರು (ಮಾ. 27): ಮಂಗಳೂರಿನ (Mangaluru) ಬಿಜೆಪಿ ಶಾಸಕರುಗಳ ಗುತ್ತಿಗೆದಾರರೆಲ್ಲಾ ಮುಸ್ಲಿಮರೇ. ಆದರೆ ರಾಜಕೀಯಕ್ಕಾಗಿ ಮುಸ್ಲಿಮರನ್ನ ವಿರೋಧಿಸ್ತಾರೆ ಅಂದಿದ್ದ ವಿಧಾನಸಭೆ ವಿಪಕ್ಷ ನಾಯಕ ಯು.ಟಿ.ಖಾದರ್ (YT Khadar) ಆರೋಪಕ್ಕೆ ‌ಮಂಗಳೂರು ದಕ್ಷಿಣದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ (Vedavyasa Kamat) ತಿರುಗೇಟು ಕೊಟ್ಟಿದ್ದಾರೆ. ಮಂತ್ರಿಯಾಗಿ ಕೆಲಸ ಮಾಡಿದ ಖಾದರ್ ಗೆ ಸಾಮಾನ್ಯ ಜ್ಞಾನ ಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದದ್ದಾರೆ.

ಸರ್ಕಾರದ ಕೆಲಸ, ಗುತ್ತಿಗೆಗಳನ್ನ ನೀಡಲು ಅದರದ್ದೇ ಆದ ಕಾನೂನುಗಳಿವೆ. ಮಂತ್ರಿಯಾಗಿ ಕೆಲಸ ಮಾಡಿದ ಖಾದರ್ ಗೆ ಸಾಮಾನ್ಯ ಜ್ಞಾನ ಬೇಕು.‌ ಮಂಗಳೂರು ಪಾಲಿಕೆಯಲ್ಲಿ 5 ಲಕ್ಷ ಮೇಲ್ಪಟ್ಟ ಎಲ್ಲಾ ಕಾಮಗಾರಿ ಇ-ಟೆಂಡರ್ ಮುಖಾಂತರ ಆಗುತ್ತದೆ.‌ ಮೂಡಾ ಮತ್ತು ಪಿಡಬ್ಲ್ಯುಡಿ ಎಲ್ಲಾ ಕಾಮಗಾರಿ ಇ-ಟೆಂಡರ್ ಆಗುತ್ತದೆ. ಇದರಲ್ಲಿ ಅರ್ಹತೆ ಇದ್ದವರಿಗೆ ಈ ಕಾಮಗಾರಿ ಗುತ್ತಿಗೆ ಅವರಿಗೆ ಸಿಗುತ್ತದೆ ಎಂದು ಖಾದರ್ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. 

ನಾನು‌ ಆರೇಳು ವರ್ಷದ ಹಿಂದೆ ವಿದೇಶ ಪ್ರವಾಸ ಮಾಡಿದಾಗ ನನಗೆ ಶುಭ ಕೋರಿ ಮುಸ್ಲಿಂ ಉದ್ಯಮಿ ಸ್ನೇಹಿತರು ಜಾಹೀರಾತು ಹಾಕಿದ್ದರು. ದುಬೈ ದೇಶದ ಎಲ್ಲಾ ಕಂಪೆನಿ ಯಾರದ್ದು? ಅಲ್ಲಿಗೆ ಉದ್ಯಮಕ್ಕೆ ನಾನು ಹೋಗಬೇಕು. ಒಬ್ಬ ರಫ್ತುಧಾರನಾಗಿ ಅಲ್ಲಿಗೆ ಹೋಗುವಾಗ ಅಲ್ಲಿನ ವ್ಯವಸ್ಥೆ ನನಗೆ ಅಗತ್ಯ. 40-50 ದೇಶಗಳಿಗೆ ರಫ್ತು ಮತ್ತು ಆಮದು ಮಾಡುವಾಗ ಅಲ್ಲಿನ ವ್ಯವಹಾರಿಕ ವ್ಯವಸ್ಥೆಯನ್ನು ನಾನು ಅನುಸರಿಸಬೇಕು. ನಾನು ಯಾರ ಜೊತೆ ವ್ಯವಹಾರ ಮಾಡಬೇಕು ಅಂತ ಗೊತ್ತಿದೆ ಎಂದಿದ್ದಾರೆ. 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more