ಜೈಲಿಗೂ ಆವರಿಸಿದ ಕರೋನಾ ಭೀತಿ/ ಪರಪ್ಪನ ಅಗ್ರಹಾರಕ್ಕೆ ನಿರ್ಬಂಧ/ ಪ್ರವೇಶಕ್ಕೆ ಅವಕಾಶ ಇಲ್ಲ/ ಕರೋನಾ ಶಾಂತವಾಗುವವರೆಗೂ ಕ್ರಮ ಜಾರಿಯಲ್ಲಿರುತ್ತದೆ
ಬೆಂಗಳೂರು(ಮಾ. 16) ಕರೋನಾ ಕಾಟ ಜೈಲಿಗೂ ತಟ್ಟಿದೆ. ಇಸ್ರೇಲಿನಲ್ಲಿ ಜೈಲಿನಲ್ಲಿದ್ದವರಿಗೂ ಕರೋನಾ ಸೋಂಕು ತಗುಲಿರುವ ಕಾರಣ ಪರಪ್ಪನ ಅಗ್ರಹಾರದಲ್ಲಿಯೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ.
ಜೈಲಿಗೆ ಭೇಟಿ ನೀಡುವವರ ಮೇಲೆ ನಿರ್ಬಂಧ ಹೇರಲಾಗಿದ್ದು ಪ್ರವೇಶಕ್ಕೆ ಅವಕಾಶ ಇಲ್ಲ. ಹೊಸ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದು ಆತಂಕ ಹೆಚ್ಚಿಸುತ್ತಲೇ ಇವೆ."