ಪಂಚರಾಜ್ಯದ ಚುನಾವಣೆಯ ಫಲಿತಾಂಶದಲ್ಲಿ 4 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಮುಂದಿನ ದಿನಗಳಲ್ಲಿ ಬಿಜೆಪಿ ಮುಖಾಂತರ ಒಳ್ಳೆಯ ಆಡಳಿತ ಸಿಗಲಿದೆ ಎಂದು ಧಾರವಾಡದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಹೇಳಿದರು.
ಬೆಂಗಳೂರು (ಮ. 10): ಪಂಚರಾಜ್ಯದ ಚುಣಾವಣೆಯ ಫಲಿತಾಂಶದಲ್ಲಿ 4 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಮುಂದಿನ ದಿನಗಳಲ್ಲಿ ಬಿಜೆಪಿ ಮುಖಾಂತರ ಒಳ್ಳೆಯ ಆಡಳಿತ ಸಿಗಲಿದೆ ಎಂದು ಧಾರವಾಡದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಹೇಳಿದರು.
ರಾಜ್ಯಲ್ಲಿ ಮುಂಬರುವ ಚುಣಾವಣೆಯಲ್ಲಿ ಕಾಂಗ್ರೆಸ್ ತನ್ನ ಸ್ವರೂಪ ಕಳೆದುಕೊಂಡಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಂಜಾಬ್ ನಲ್ಲಿ ಆಮ್ ಆದ್ಮಿ ಅಧಿಕಾರಕ್ಕೆ ಬರುವುದಾಗಿ ಎಕ್ಸಿಟ್ ಪೋಲ್ ಹೇಳುತ್ತಿವೆ. ಆಮ್ ಆದ್ಮಿ ಅಂತ ಪಕ್ಷ ಪಂಜಾಬ್ ನಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ. ಇದೆ ಮೊದಲು ಇದೆ ಕೊನೆಯಾಗಲಿದೆ. ಆಮ್ ಆದ್ಮಿ ಅಂತ ಪಕ್ಷಗಳಿಗೆ ಭವಿಷ್ಯವಿಲ್ಲ. ಆಮ್ ಆದ್ಮಿ ಅಂತ ಪಕ್ಷಗಳು ಬರುತ್ತವೆ, ಹೋಗುತ್ತವೆ. ಯಾವ ಐಡಿಯಾಜಿ ಇಲ್ಲ, ಯಾವ ಭವಿಷ್ಯ ಇಲ್ಲ. ಬದಲಾವಣೆ ಗಾಳಿಯಲ್ಲಿ ಪಂಜಾಬ್ ನಲ್ಲಿ ಆಮ್ ಆದ್ಮಿ ಅಧಿಕಾರಕ್ಕೆ ಬಂದಿದೆ ಅಷ್ಟೇ ಎಂದು ಅಶ್ವತ್ಥ್ ನಾರಾಯಣ ಹೇಳಿದರು.