ಬೆಳಗಾದ್ರೆ ಟೀ ಅಂಗಡಿಯಲ್ಲಿ ಕೆಲ್ಸ, ರಾತ್ರಿ ಆದ್ರೆ ಓದು.. ಆದ್ರೆ ಆತ ಗೆದ್ದಿದ್ದು ಬರೋಬ್ಬರಿ 50 ಲಕ್ಷ!

ಬೆಳಗಾದ್ರೆ ಟೀ ಅಂಗಡಿಯಲ್ಲಿ ಕೆಲ್ಸ, ರಾತ್ರಿ ಆದ್ರೆ ಓದು.. ಆದ್ರೆ ಆತ ಗೆದ್ದಿದ್ದು ಬರೋಬ್ಬರಿ 50 ಲಕ್ಷ!

Published : Jan 16, 2025, 04:14 PM IST

ನಾನು ಎರಡ್ಮೂರು ಸಲ ಪ್ರಯತ್ನಿಸಿ ನಂತರ ಯಶಸ್ಸು ಕಂಡಿದ್ದೇನೆ. ಬಹಳ ಕಷ್ಟವೆನಿಸಿತ್ತು. ಅಡಿಯನ್ಸ್ ಬೆಂಬಲದಿಂದ ಎಲ್ಲ ಸಾಧ್ಯವಾಗಿದೆ. ಯಾರು ಶ್ರಮಪಡ್ತಾರೆ, ರಮಜಾನ್ ಆಗಿ ನನ್ನ ಮುಂದೆ ಕೂರುತ್ತಾರೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ದಕ್ಕೆ ಖುಷಿಯಾಯ್ತು.

ಬಾಗಲಕೋಟೆ (ಜ.16): ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಬರೋಬ್ಬರಿ 50 ಲಕ್ಷ ರೂಪಾಯಿ ಗೆದ್ದಿದ್ದಾನೆ ಬಾಗಲಕೋಟೆಯ ಯುವಕ. ನಟ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ರಮಜಾನ್ ಅನ್ನೋ ಯುವಕ ಬರೋಬ್ಬರಿ 50 ಲಕ್ಷ ಹಣ ಗೆದ್ದುಕೊಂಡಿದ್ದಾನೆ. ಬೆಳಗಾದ್ರೆ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಇಂದು ಬರೋಬ್ಬರಿ 50 ಲಕ್ಷ ಹಣ ಗೆದ್ದುಕೊಂಡಿದ್ದಾನೆ. ಬೆಳಗಾದ್ರೆ ಟೀ ಅಂಗಡಿಯಲ್ಲಿ ಕೆಲ್ಸ, ರಾತ್ರಿಯಾದ್ರೆ ಓದುತ್ತಿದ್ದ ಯುವಕ ಬಡತನದ ಮಧ್ಯೆ ಜೀವನ ಸಾಗಿಸುತ್ತಿದ್ದ. ಹೋದಲ್ಲಿ, ಬಂದಲ್ಲಿ ಅಮಿತಾ ಬಚನ್ ಅಂತ ಟಿಂಗಲ್ ಮಾಡಿದವರಿಗೆ ಇಂದು ಅದೇ ಅಮಿತಾ ಬಚನ್​ ನಡೆಸಿಕೊಡುವ ಶೋನಲ್ಲಿ 50 ಲಕ್ಷ ಹಣ ಗೆದ್ದು ಸಾಧಿಸಿ ತೋರಿಸಿದ್ದಾನೆ ಈ ರಮಜಾನ್. 

ನಾನು ಎರಡ್ಮೂರು ಸಲ ಪ್ರಯತ್ನಿಸಿ ನಂತರ ಯಶಸ್ಸು ಕಂಡಿದ್ದೇನೆ. ಬಹಳ ಕಷ್ಟವೆನಿಸಿತ್ತು. ಅಡಿಯನ್ಸ್ ಬೆಂಬಲದಿಂದ ಎಲ್ಲ ಸಾಧ್ಯವಾಗಿದೆ. ಯಾರು ಶ್ರಮಪಡ್ತಾರೆ, ರಮಜಾನ್ ಆಗಿ ನನ್ನ ಮುಂದೆ ಕೂರುತ್ತಾರೆ ಎಂದು ಅಮಿತಾ ಬಚನ್ ಹೇಳಿದ್ದಕ್ಕೆ ಖುಷಿಯಾಯ್ತು. ಮನೆಯ ಆರ್ಥಿಕ ಸ್ಥಿತಿ ಬದಲಾವಣೆ ಮಾಡಬೇಕು ನನ್ನ ಹಾಗೂ ಸಹೋದರ ಸಹೋದರಿ ಓದಿಗೆ ಹಣ ಬಳಸಬೇಕು. ಜನ್ರ ಮಾತು ಕೇಳದೇ ಮುನ್ನುಗ್ಗಿ ಸಾಧಿಸಿ ಎಂದು ಏಷಿಯಾನೆಟ್ ಸುವರ್ಣನ್ಯೂಸ್ ಜೊತೆ ರಮಜಾನ್ ಮನವಿ ಮಾಡಿದ್ದಾನೆ. 

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
Read more