ಐದು ಸಚಿವರಿಗೆ ಕೋವಿಡ್ ಹೊಣೆ, ಉಸ್ತುವಾರಿ ಸಚಿವರು ತಕ್ಷಣ ತಮ್ಮ ಜಿಲ್ಲೆಗೆ ತೆರಳಲು ಸೂಚನೆ

May 5, 2021, 11:05 AM IST

ಬೆಂಗಳೂರು (ಮೇ. 05): ಹದಗೆಡುತ್ತಿರುವ ಕೋವಿಡ್ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಿಎಂ ಮಹತ್ವದ ಕ್ರಮ ಕೈಗೊಂಡಿದ್ದಾರೆ.  ಆಮ್ಲಜನಕ ಪೂರೈಕೆ, ರೆಮ್‌ಡೆಸಿವಿರ್‌, ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿನ ಹಾಸಿಗೆ ಲಭ್ಯತೆ ಮತ್ತು ವಾರ್‌ ರೂಂ ಗಳೆಂಬ ನಾಲ್ಕು ವಿಭಾಗಗಳನ್ನು ರಚಿಸಿಸಲಾಗಿದ್ದು, ಇವುಗಳಿಗೆ ಐವರು ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ಕೊರೊನಾ ಸೋಂಕಿತರಿಗೆ ಕಾಂಗ್ರೆಸ್‌ನಿಂದ ಆಕ್ಸಿಜನ್, ಆಂಬುಲೆನ್ಸ್ ಸೇವೆ

ಅಲ್ಲದೆ, ಹೊಣೆಗಾರಿಕೆ ನೀಡಿರುವ ಜಿಲ್ಲೆಗಳಿಗೆ ತೆರಳದೆ ಬೆಂಗಳೂರು ಅಥವಾ ತವರು ಜಿಲ್ಲೆಯಲ್ಲಿ ನೆಲೆಸಿರುವ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗರಂ ಆಗಿದ್ದು, ತಮಗೆ ವಹಿಸಿರುವ ಉಸ್ತುವಾರಿ ಜಿಲ್ಲೆಗಳಿಗೆ ಬುಧವಾರವೇ ತೆರಳಿ ಕೋವಿಡ್‌ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಖಡಕ್‌ ಸೂಚನೆ ನೀಡಿದ್ದಾರೆ. ಯಾವ್ಯಾವ ಸಚಿವರಿಗೆ ಹೊಣೆ.? ಇಲ್ಲಿದೆ ಡಿಟೇಲ್ಸ್.