11 ವರ್ಷದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ: ಮೋದಿ ಸರ್ಕಾರ ಮಾಡಿದ್ದೇನು?

11 ವರ್ಷದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ: ಮೋದಿ ಸರ್ಕಾರ ಮಾಡಿದ್ದೇನು?

Published : Sep 18, 2025, 05:44 PM IST

ಕಳೆದ ಹನ್ನೊಂದು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕ್ರೀಡಾ ಬಜೆಟ್ ಅನ್ನು ₹1643 ಕೋಟಿಯಿಂದ ₹3794 ಕೋಟಿಗೆ ಹೆಚ್ಚಿಸಿದೆ. 2036ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಭಾರತ ಸಿದ್ಧತೆ ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಕಳೆದ ಹನ್ನೊಂದು ವರ್ಷದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಕ್ರೀಡಾಕ್ಷೇತ್ರಕ್ಕೆ ಸಾಕಷ್ಟು ಒತ್ತು ನೀಡಿದೆ. ಕ್ರೀಡಾ ಇಲಾಖೆಗೆ ನೀಡುತ್ತಿದ್ದ ಬಜೆಟ್‌ ಅನ್ನು ಮೋದಿ ನೇ ಕೇಂದ್ರ ಸರ್ಕಾರ, 1643 ಕೋಟಿ ರುಪಾಯಿಗಳಿಂದ 3794 ಕೋಟಿ ರುಪಾಯಿಗೆ ಹೆಚ್ಚಿಸಲಾಗಿದೆ. ಇದರ ಜತೆಗೆ ದೇಶದಲ್ಲಿ ಖೇಲೋ ಇಂಡಿಯಾ ಕ್ರೀಡಾ ನೀತಿಯನ್ನು ಜಾರಿ ಮಾಡಿದ್ದು, ಭಾರತದಾದ್ಯಂತ ಕ್ರೀಡಾ ಮೂಲಸೌಕರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

2020 ಓಲಿಂಪಿಕ್‌ನಲ್ಲಿ 7, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆರು ಪದಕ ಗೆದ್ದಿದೆ. ಇನ್ನು 2036ರ ಒಲಿಂಪಿಕ್ಸ್‌ಗೆ ಭಾರತ ಆತಿಥ್ಯ ವಹಿಸಲು ಸಿದ್ದತೆ ಮಾಡಿಕೊಳ್ತಿದೆ ಅಂತ ಸ್ವತಃ ಮೋದಿ ಹೇಳಿದ್ದಾರೆ. ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಕ್ರೀಡಾ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದೆ. ಅದು ಯಾವುವು ಎನ್ನುವುದನ್ನು ನೋಡೋಣ ಬನ್ನಿ

 

Read more