ಚಂದ್ರಯಾನ-3 ಆರಂಭ ಮಾತ್ರ, ಇಸ್ರೋದ ಮುಂದಿನ ಪ್ರಾಜೆಕ್ಟ್‌ಗಳನ್ನು ಕಂಡು ಅಚ್ಚರಿ ಪಟ್ಟ ವಿಶ್ವ!

Aug 24, 2023, 11:02 PM IST

ಬೆಂಗಳೂರು (ಆ.24): ಚಂದ್ರಯಾನ -3 ಯಶಸ್ಸು ಕೇವಲ ಆರಂಭ ಎಂದು ಇಸ್ರೋ ತಿಳಿಸಿದೆ. ಇಸ್ರೋದ ಮುಂದಿನ ಪ್ರಾಜೆಕ್ಟ್‌ಗಳನ್ನು ನೋಡಿದರೆ, ಚಂದ್ರಯಾನ-3 ಎನ್ನುವುದು ಕೇವಲ ಆರಂಭ ಎನ್ನುವುದು ಇಡೀ ವಿಶ್ವಕ್ಕೂ ಗೊತ್ತಾಗಿದೆ. ಬಾಹ್ಯಾಕಾಶದಲ್ಲಿ ಸಾರ್ವಭೌಮತ್ವ ಸಾಧಿಸುವ ನಿಟ್ಟಿನಲ್ಲಿ ಇಸ್ರೋ ಸಿದ್ಧತೆ ನಡೆಸಿದೆ.

ಖಗೋಳ ಲೋಕದ ರಹಸ್ಯ ಭೇದಿಸಲು ಇಸ್ರೋ ಮುಂದಾಗಿದೆ. ಚಂದ್ರನ ಬಳಿಕ ಸೂರ್ಯನತ್ತ ಇಸ್ರೋ ದೃಷ್ಟಿ ನೆಟ್ಟಿದೆ. ಸೆಪ್ಟೆಂಬರ್‌ ಆರಂಭದಲ್ಲಿ ಸೂರ್ಯನತ್ತ ಆದಿತ್ಯ ಎಲ್‌ 1 ನೌಕೆಯನ್ನು ಇಸ್ರೋ ಉಡಾವಣೆ ಮಾಡಲಿದೆ. ಆ ಬಳಿಕ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ ನಡೆಯಲಿದೆ. ನಂತರ ಮಂಗಳನ ಮೇಲೂ ರೋವರ್ ಇಳಿಸಲು ಇಸ್ರೋ ಪ್ಲ್ಯಾನ್ ಮಾಡಿಕೊಂಡಿದೆ.

ಯೂಟ್ಯೂಬ್‌ ಇತಿಹಾಸದಲ್ಲಿಯೇ ಗರಿಷ್ಠ ವೀಕ್ಷಣೆ ಕಂಡ Top-10 ಲೈವ್‌ ಸ್ಟ್ರೀಮ್‌, ಇಲ್ಲಿಯೂ ಇಸ್ರೋ ದಾಖಲೆ!

ಅದರೊಂದಿಗೆ ಇಸ್ರೋದಿಂದ ಮೊದಲ ಬಾರಿಗೆ ಸೋಲಾರ್ ಮಿಷನ್ ಆರಂಭವಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಇದು ಉಡಾವಣೆ ಆಗಲಿದೆ. ಪಿಎಸ್ಎಲ್ವಿ ರಾಕೆಟ್ ಮೂಲಕ ನೌಕೆ ಉಡಾವಣೆಗೊಳ್ಳಲಿದೆ. ಸೌರಮಂಡಲದಲ್ಲಿ ಈ ನೌಕೆ 1.5 ಮಿಲಿಯನ್‌ ಕಿಲೋಮೀಟರ್‌ ದೂರ ಸಾಗಲಿದೆ.