
ಭಾನುವಾರ ರಣರಣ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತಿದೆ. ಬಾನಂಗಳದಲ್ಲಿ ಕೌತುಕ ಮೂಡುತ್ತಿದ್ರು ಹಲವರಿಗೆ ಸಂಕಷ್ಟ ಗ್ಯಾರಂಟಿ ಎನ್ನಲಾಗ್ತಿದೆ. ಭಾರತದಲ್ಲಿ ಗ್ರಹಣ ಗೋಚರವಾಗ್ತಿದ್ದು. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ದೇವಸ್ಥಾನಗಳು ಬಂದ್ ಆಗಲಿವೆ. ನಾಳೆ ಬಾನಂಗಳದಲ್ಲಿ ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣಕ್ಕೆ ನಾವೆಲ್ಲಾ ಸಾಕ್ಷಿಯಾಗಲಿದ್ದೇವೆ. 2025ರ ಕೊನೆಯ ಗ್ರಹಣ ಯಾರಿಗೆ ಶುಭ, ಯಾರಿಗೆ ಅಶುಭ ಅನ್ನೋದರ ಲೆಕ್ಕಾಚಾರ ಜೋರಾಗಿದೆ. ಬ್ಲಡ್ ಮೂನ್‌ನಿಂದಲೇ ಸಾಲು ಸಾಲು ಅಪಾಯದ ಸರಮಾಲೆ ಸೃಷ್ಟಿಯಾಗಲಿದೆ ಅನ್ನೋ ಮುನ್ಸೂಚನೆ ಸಿಕ್ತಿದೆ. ಭಾನುವಾರ ರಾತ್ರಿ 9.27ಕ್ಕೆ ಗ್ರಹಣ ಪ್ರಾರಂಭವಾಗಲಿದೆ. ಗ್ರಹಣಕ್ಕೂ ಮುನ್ನವೇ ಪೂಜೆ ಪುನಸ್ಕಾರ ನಡೆಯಲಿದೆ.
ಭಾರತದಲ್ಲಿ ಈ ಗ್ರಹಣ ಗೋಚರಿಸಲಿದೆ. ಇದರ ಜೊತೆ ಏಷ್ಯಾ, ಆಸ್ಟ್ರೇಲಿಯಾ, ಮತ್ತು ಯುರೋಪಿನ ಹೆಚ್ಚಿನ ಭಾಗಗಳಲ್ಲಿ ಗೋಚರವಾಗಲಿದೆ. ಇನ್ನು ಉತ್ತರ ಅಮೆರಿಕಾದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ಆದರೆ ಅಲಾಸ್ಕಾ ಮತ್ತು ಪೆಸಿಫಿಕ್‌ನ ಕೆಲವು ಭಾಗಗಳಲ್ಲಿ ಭಾಗಶಃ ಕಾಣಿಸಲಿದೆ.
ರಾಹುಗ್ರಸ್ತ ಚಂದ್ರಗಹಣ ಕಾರಣ ಬೆಂಗಳೂರು ಸೇರಿದಂತೆ ಹಲವು ಕಡೆ ದೇಗುಲಗಳು ಬಂದ್ ಆಗಲಿವೆ. ನಾಳೆ ಸಂಜೆ ಗ್ರಜಹಣಕ್ಕೂ ಮುಂಚೆ ಪೂಜೆ ನಡೆಯಲಿದೆ. ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಸೋಮವಾರ ಬೆಳಗಿನ ಜಾವ ಜಾವದಿಂದಲೇ ಶುದ್ಧೀಕರಣ ಪ್ರಾರಂಭವಾಗಲಿದೆ. ನಂತರ ವಿಶೇಷ ಪೂಜೆ ಆಯೋಜಿಸಲಾಗಿದೆ.
ಈ ಗ್ರಹಣದಿಂದ ರಾಜಕೀಯ ವಿಪ್ಲವ ಮತ್ತು ಪ್ರಾಕೃತಿಕ ಅವಘಡಗಳು ಸಂಭವಿಸುವ ಸಾಧ್ಯತೆ ದಟ್ಟವಾಗಿದೆ.ಈಗಾಗಲೇ ಚಂದ್ರಗ್ರಹಣಕ್ಕೂ ಮುನ್ನವೇ ದೇಶದ ಹಲವೆಡೆ ಪ್ರಕೃತಿ ಮುನಿಸು ಬೀರಿದೆ.ಹಲವು ಕಡೆಗಳಲ್ಲಿ ಅಲ್ಲೋಲ..ಕಲ್ಲೋಲವೇ ಸೃಷ್ಟಿಯಾಗಿದೆ. ಭೀಕರ ಮಳೆ..ಬೆಲೆ ನಾಶ.ಅಷ್ಟೇ ಅಲ್ಲ ಪ್ರವಾದಿಂದ ಜನರ ಬದುಕೇ ದುಸ್ಥಿತಿಗೆ ಬಂದಿದೆ. ಉತ್ತರ ಭಾರದಲ್ಲಿ ಮೇಘಸ್ಫೋಟಕ್ಕೆ ಜೀವಗಳೇ ಬಲಿಯಾದ್ರೆ. ಮನೆಗಳು ಕೊಚ್ಚಿ ಹೋಗ್ತಿವೆ.. ಇದರ ಜೊತೆಗೆ ದೆಹಲಿಯಲ್ಲೂ ಹಲವು ಕಡೆ ಪ್ರವಾಹ ಸಂಕಷ್ಟಕ್ಕೆ ಜನ ತತ್ತರಿಸಿದ್ದಾರೆ. ಇನ್ನು ತಾಲಿಬಾನ್‌ನಲ್ಲಿ ಭೂಮಿ ನಡುಗಿ ಒಂದೂವರೆ ಸಾವಿರ ಮಂದಿ ಬಲಿಯಾಗಿದ್ದು ಮತ್ತಷ್ಟು ಪ್ರಳಯಗಳು ಸೃಷ್ಟಿಯಾಗೋದು ಗ್ಯಾರಂಟಿ.. ಭಯ ಪಡೋದು ಬೇಡ ಅಂತಿರೋ ಜೋತಿಷಿಗಳು ಎಚ್ಚರಿಕೆ ಅಗತ್ಯ ಅನ್ನೋ ಸಂದೇಶ ನೀಡ್ತಿದ್ದಾರೆ.