ಇಸ್ರೋದಿಂದ ಮತ್ತೊಂದು ಇತಿಹಾಸ, ಎಸ್ಸೆಸ್ಸೆಲ್ವಿ ಚಿಕ್ಕ ರಾಕೆಟ್‌ ಬಳಸಿ ಉಪಗ್ರಹ ಉಡಾವಣೆ

Aug 7, 2022, 3:18 PM IST

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಮತ್ತೊಂದು ಇತಿಹಾಸ ರಚನೆಯತ್ತ ಹೆಜ್ಜೆ ಹಾಕಿದೆ. ಇದೇ ಮೊದಲ ಬಾರಿಗೆ ತಾನು ಅಭಿವೃದ್ಧಿಪಡಿಸಿರುವ ಎಸ್‌ಎಸ್‌ಎಲ್‌ವಿ (ಸ್ಮಾಲ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌) ರಾಕೆಟ್‌ ಅನ್ನು ಉಡ್ಡಯನ ಮಾಡಿದೆ. 

ವೀಲ್ ಚೇರ್‌ನಲ್ಲಿ ಕುಳಿತು UPSC ಪರೀಕ್ಷೆಯಲ್ಲಿ ಸಾಧನೆ ಮಾಡಿದ ಇಸ್ರೋ ವಿಜ್ಞಾನಿ!

ಈ ರಾಕೆಟ್‌ ಇಸ್ರೋ ಅಭಿವೃದ್ಧಿಪಡಿಸಿರುವ 1 ಭೂ ಪರಿವೀಕ್ಷಣಾ ಉಪಗ್ರಹ ಮತ್ತು ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷ ಆಗುತ್ತಿರುವ ನಿಮಿತ್ತ ದೇಶದ ಗ್ರಾಮೀಣ ಭಾಗದ 75 ಸರ್ಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ ತಯಾರಿಸಿರುವ 8 ಕೇಜಿ ತೂಕದ ‘ಆಜಾದಿ ಸ್ಯಾಟ್‌’ ಉಪಗ್ರಹವನ್ನು ಕಕ್ಷೆಗೆ ಕೊಂಡೊಯ್ಯಲಿದೆ. ಈ ವಾಹಕವು ತ್ರಿವರ್ಣ ಧ್ವಜವನ್ನೂ ನಭಕ್ಕೆ ಹೊತ್ತೊಯ್ಯಲಿರುವುದೂ ವಿಶೇಷ.

 ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಉಡ್ಡಯನ ಕೇಂದ್ರದಿಂದ ಉಪಗ್ರಹ ಉಡ್ಡಯನವಾಗಿದೆ. ಎಸ್‌ಎಸ್‌ಎಲ್‌ವಿ ರಾಕೆಟ್‌, ಪಿಎಸ್‌ಎಲ್‌ವಿಗಿಂತ 10 ಮೀ. ಚಿಕ್ಕದಾಗಿದ್ದು, 34 ಮೀ. ಉದ್ದ ಹಾಗೂ 2 ಮೀ. ವ್ಯಾಸವನ್ನು ಹೊಂದಿದೆ. ಈ ರಾಕೆಟ್‌ ಒಟ್ಟು 120 ಟನ್‌ ತೂಕವಿದ್ದು, ಸುಮಾರು 500 ಕೇಜಿ ಪೇಲೋಡ್‌ ಅನ್ನು 500 ಕಿ.ಮೀ. ದೂರದಲ್ಲಿರುವ ಕಕ್ಷೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ.