ನಿಜವಾಗಿ ಬಿಡುತ್ತಾ ಸಂಶೋಧನೆ ಹೇಳಿದ ವಿನಾಶ ಭವಿಷ್ಯ: ಕರಗುತ್ತಿದೆ ಹಿಮಾಲಯ.. ಕಾಡುತ್ತಿದೆ ಜೀವ ಭಯ!

ನಿಜವಾಗಿ ಬಿಡುತ್ತಾ ಸಂಶೋಧನೆ ಹೇಳಿದ ವಿನಾಶ ಭವಿಷ್ಯ: ಕರಗುತ್ತಿದೆ ಹಿಮಾಲಯ.. ಕಾಡುತ್ತಿದೆ ಜೀವ ಭಯ!

Published : Jul 04, 2025, 07:48 AM ISTUpdated : Jul 04, 2025, 07:50 AM IST

ಮುಂಗಾರು ಇನ್ನೂ ದೇಶದೊಳಗೆ ಬಲಗಾಲನ್ನ ಕಂಪ್ಲೀಟ್ ಆಗಿ ಇಟ್ಟೂ ಇಲ್ಲ, ಅಷ್ಟ್ರಲ್ಲೇ ಸಾಲು ಸಾಲು ದುರಂತಗಳು ಎದುರಾಗ್ತಾ ಇದಾವೆ. ಈ ಮುಂಗಾರಿನ ಆರ್ಭಟಕ್ಕೆ ಅಷ್ಟೇನಾ? ಇಲ್ಲ.. ಅದನ್ನೂ ಮೀರಿದ ಗಂಡಾಂತರ ಎದುರಾಗೋ ಸಾಧ್ಯತೆ ಇದೆ.. ಇದರ ಬಗ್ಗೆ ನಾವಲ್ಲ ವಿಜ್ಞಾನಿಗಳು ಮಾತಾಡ್ತಾ ಇದಾರೆ..

ನಿಜಕ್ಕೂ ದೇಶಕ್ಕೆ ಹಿಮಗಂಡಾಂತರವೇ ಎದುರಾಗಿದೆ.. ಮುಂಗಾರು ಇನ್ನೂ ದೇಶದೊಳಗೆ ಬಲಗಾಲನ್ನ ಕಂಪ್ಲೀಟ್ ಆಗಿ ಇಟ್ಟೂ ಇಲ್ಲ, ಅಷ್ಟ್ರಲ್ಲೇ ಸಾಲು ಸಾಲು ದುರಂತಗಳು ಎದುರಾಗ್ತಾ ಇದಾವೆ.. ಕಂಟಕಗಳು ಕಾಡ್ತಾ ಇದಾವೆ.. ಅಂದ ಹಾಗೆ ಇದೆಲ್ಲಾ ನಡೀತಿರೋದು ಈ ಮುಂಗಾರಿನ ಆರ್ಭಟಕ್ಕೆ ಅಷ್ಟೇನಾ? ಇಲ್ಲ.. ಅದನ್ನೂ ಮೀರಿದ ಗಂಡಾಂತರ ಎದುರಾಗೋ ಸಾಧ್ಯತೆ ಇದೆ.. ಇದರ ಬಗ್ಗೆ ನಾವಲ್ಲ ವಿಜ್ಞಾನಿಗಳು ಮಾತಾಡ್ತಾ ಇದಾರೆ.. ಅದೇನು ಅನ್ನೋದರ ಇನ್ ಡೆಪ್ತ್ ಡೀಟೇಲ್ಸ್, ಇಲ್ಲಿದೆ ನೋಡಿ..

ವೀಕ್ಷಕರೇ, ಈ ಪ್ರವಾಹದ ಕತೆ ಹೇಳೋಕೆ ಹೊರಟರೆ ಅದೇನು ಸದ್ಯಕ್ಕೆ ಮುಗಿಯುವಂಥದ್ದಲ್ಲ.. ಯಾಕಂದ್ರೆ ಪರಿಸ್ಥಿತಿ ನಾವೀಗ ನೋಡಿದ್ದಕ್ಕಿಂತಾ ಅತ್ಯಂತ ದಾರುಣವಾಗಿದ್ದಾವೆ.. ಅದರ ಬಗ್ಗೆ ಮತ್ತೆ ಮಾತಾಡಣ.. ಆದ್ರೆ ನಾವೀಗ ಅದಕ್ಕಿಂತಲೂ ಮುಖ್ಯವಾದ, ಭಯಾನಕವಾದ, ಭವಿಷ್ಯವನ್ನ ನೆನಪಿಸಿಕೊಂಡರೂ ಭಯ ಹುಟ್ಟಿಸಬಲ್ಲ ಸಂಗತಿ ಬಗ್ಗೆ ಮಾತಾಡ್ಬೇಕು.. ಅಂದ ಹಾಗೆ, ಅಂಥದ್ದೊಂದು ಭಯ ಹುಟ್ಟಿಸಿರೋ ಸಂಗತಿ ಯಾವುದು ಗೊತ್ತಾ? ಹಿಮಾಲಯ..

ಈ ವರದಿಗಳ ಬಗ್ಗೆ ಕೇಳ್ತಾ ಇದ್ರೆ, ನಿಜಕ್ಕೂ ಆಶ್ಚರ್ಯವೂ ಆಗುತ್ತೆ.. ಅದರ ಜೊತೆಗೆ ಆಘಾತವೂ ಆಗುತ್ತೆ.. ಹಿಮಾಲಯದಂಥಾ ಹಿಮಾಲಯ ಕರಗೋದೂ ಅಂದ್ರೇನು? ಅದರಿಂದ ಪ್ರವಾಹ ಉಂಟಾಗೋದು ಅಂದ್ರೇನು? ಅದು ಬಿಡಿ, ಹಿಮಾಲಯದ ನೀರೆಲ್ಲಾ ಮಾಯವಾಗಿ ನೀರಿಗೆ ಬರ ಬರೋದು ಅಂದ್ರೇನು? ಇದನ್ನೆಲ್ಲಾ ಕೇಳ್ತಾ ಇದ್ರೆನೇ ಅನುಮಾನ ಹೆಚ್ಚಾಗುತ್ತೆ ಅಲ್ವಾ? ಅಸಲಿಗೆ ವಿಜ್ಞಾನಿಗಳು ಅದ್ಯಾವ ಆಧಾರದ ಮೇಲೆ ಹಿಮಾಲಯದ ಬಗ್ಗೆ ಇಂಥದ್ದೊಂದು ಭವಿಷ್ಯ ಹೇಳಿದ್ದಾರೆ?

ಹಿಮಾಲಯ ಈಗ ಬರೀ ಹಿಮಚ್ಛಾದಿತ ಶಿಖರ ಮಾತ್ರವೇ ಅಲ್ಲ.. ಅದೀಗ ಪ್ರಳಯಕಾರಿ ಪರ್ವತ.. ಇಡೀ ಉತ್ತರ  ಭಾರತಕ್ಕೇ ಅಲ್ಲಿಂದ ಬೃಹತ್ ಕಂಟಕ ಕಾದಿದೆ ಅನ್ನೋ ಮಾತಾಡ್ತಿದ್ದಾರೆ ವಿಜ್ಞಾನಿಗಳು..

ಈ ವರದಿಯಲ್ಲಿರೋ ವಿಚಿತ್ರ ರಹಸ್ಯಗಳ ಬಗ್ಗೆ ಕೇಳ್ತಾ ಇದ್ರೆ, ನಿಜಕ್ಕೂ ಭಯವಾಗುತ್ತೆ.. ಹಿಮಾಲಯವನ್ನ ನಾವ್ಯಾರೂ ಈ ತನಕ ಪರ್ವತ ಅಂತ ನೋಡೇ ಇಲ್ಲ.. ಅದು ಭಾರತದ ಐಡೆಂಟಿಟಿ.. ಆದ್ರೆ ಅದರ ಬುಡದಲ್ಲೇ ಜೀವ ಭಯ ಹುಟ್ಟಿಸೋ ಸಂಗತಿ ಅಡಗಿದೆ..

ಹಿಮಾಲಯದಲ್ಲಿ ಒಂದಷ್ಟು ಆತಂಕಕಾರಿ ಬೆಳವಣಿಗೆಗೆಳಾಗ್ತಾ ಇವೆ.. ಪದೇ ಪದೇ ಭೂಕಂಪನಕ್ಕೆ ಒಳಗಾಗ್ತಾ ಇರೋ ಈ ಜಾಗದಲ್ಲೇ, ಜೀವಜಲಕ್ಕೂ ಕಂಟಕ ಅಂತಿದ್ದಾರೆ ತಜ್ಞರು.

ಹಿಮಾಲಯ ನಮ್ಮ ದೇಶದ ಹೆಮ್ಮೆ ಮಾತ್ರವಲ್ಲ, ಜೀವನಾಡಿ. ಅದರ ಆರೋಗ್ಯವನ್ನು ಕಾಪಾಡಿಕೊಳ್ಳೋದು ನಮ್ಮೆಲ್ಲರ ಜವಾಬ್ದಾರಿ. ಈಗ ಎದುರಾಗಿರೋ ಈ ಸವಾಲುಗಳನ್ನ ಸಮರ್ಥವಾಗಿ ಎದುರಿಸದಿದ್ದರೆ, ಭವಿಷ್ಯದಲ್ಲಿ ತೀವ್ರ ನೀರಿನ ಬಿಕ್ಕಟ್ಟು ಉಂಟಾಗುತ್ತೆ.. ಪರಿಸರ ದುರಂತಗಳಿಗೆ ನಾವು ಸಾಕ್ಷಿಯಾಗಬೇಕಾಗುತ್ತೆ.. ಆ ದಾರುಣ ಸ್ಥಿತಿ ಬಾರದ ಹಾಗೆ ಕಾಪಾಡಿಕೊಳ್ಳೋ ಹೊಣೆ ನಮ್ಮದು.. ಇದಾಗಿತ್ತು ಇವತ್ತಿನ ಸುವರ್ಣ ಫೋಕಸ್.. ನಮಸ್ಕಾರ..

20:18ನಿಜವಾಗಿ ಬಿಡುತ್ತಾ ಸಂಶೋಧನೆ ಹೇಳಿದ ವಿನಾಶ ಭವಿಷ್ಯ: ಕರಗುತ್ತಿದೆ ಹಿಮಾಲಯ.. ಕಾಡುತ್ತಿದೆ ಜೀವ ಭಯ!
19:41Suvarna Focus: ಜಗತ್ತನ್ನೇ ನಿಬ್ಬೆರಗಾಗಿಸಿದ ಅಂತರಿಕ್ಷ ಮಹಾಸಾಹಸ! ಭೂಮಂಡಲದ ಭವಿಷ್ಯ ಬದಲಿಸುತ್ತಾ ಆಕ್ಸಿಯೋಮ್-4?
18:40ಮರಳಿ ಧರಣಿಗೆ ಬಂದ ಸುನೀತಾ ವಿಲಿಯಮ್ಸ್: ಹೇಗೆ ನಡೆದಿತ್ತು ಗೊತ್ತಾ ಊಹಿಸಲಾಗದ ಕಾರ್ಯಾಚರಣೆ?
19:51ಸುನೀತಾ ವಿಲಿಯಮ್ಸ್ ಕಾಪಾಡಲು ಮುಂದಾದ ಎಲನ್ ಮಸ್ಕ್! ಗಗನಯಾತ್ರಿಗಳ ಜೀವ ಉಳಿಸುತ್ತಾ ಮಸ್ಕ್ ಪ್ಲಾನ್?
19:30ಇಸ್ರೋ ವಿಜ್ಞಾನಿಗಳಿಂದ ಅವಿರತ ಶ್ರಮ..! ರೋವರ್ ಜಾಗೃತವಾದರೆ ಮುಂದೇನಾಗುತ್ತೆ ಗೊತ್ತಾ..?
52:41Podcast: ಇಸ್ರೋ ಅಧ್ಯಕ್ಷ ಸೋಮನಾಥ್‌ರಿಂದ ಚಂದ್ರಯಾನ -3 ಯಶೋಗಾಥೆ
06:22ಸೂರ್ಯನತ್ತ ಆದಿತ್ಯ L-1 ಉಡಾವಣೆ: ಬೆಂಗಳೂರು ಮೂಲದ IIA ಸಂಸ್ಥೆಯಿಂದ ಪೆಲೋಡ್‌ ತಯಾರಿಕೆ
02:50ಸೂರ್ಯನತ್ತ ‘ಆದಿತ್ಯ ಎಲ್-1’ ಉಡಾವಣೆಗೆ ಕ್ಷಣಗಣನೆ: ಶ್ರೀಹರಿಕೋಟಾದಿಂದ ರಾಕೆಟ್ ಉಡ್ಡಯನ
02:44ಭರದಿಂದ ಸಾಗ್ತಿದೆ ‘ಇಸ್ರೋ’ಸಂಶೋಧನಾ ಕಾರ್ಯ: ಚಂದ್ರನಲ್ಲಿ ಗಂಧಕ, ಆಮ್ಲಜನಕ ಪತ್ತೆ ಹಚ್ಚಿದ ರೋವರ್
Read more