ಕೇರಳದ ಉಲ್ಕೆ ವಿಜ್ಞಾನಿ ಹೆಸರಿನಲ್ಲಿದೆ ಚಿಕ್ಕ ಗ್ರಹ, Asianet Dialogueನಲ್ಲಿ ರಹಸ್ಯ ಬಿಚ್ಚಿಟ್ಟ ಖಗೋಳ ಶಾಸ್ತ್ರಜ್ಞ!

Aug 13, 2023, 9:16 PM IST

ಬೆಂಗಳೂರು(ಆ.13) ಖಗೋಳ ವಿಜ್ಞಾನ ಸಮುದ್ರಕ್ಕಿಂತಲೂ ದೊಡ್ಡದು. ಈ ಕ್ಷೇತ್ರದಲ್ಲಿ ಭಾರತದ ಹಲವು ವಿಜ್ಞಾನಿಗಳು ಸಾಧನೆ ಮಾಡಿದ್ದಾರೆ. ಇದೀಗ ಕೇರಳದ ಯುವ ವಿಜ್ಞಾನಿ ಡಾ.ಅಶ್ವಿನಿ ಶೇಖರ್ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಭೂಮಿಯಿಂದ 600 ಮಿಲಿಯನ್ ಕಿ.ಮೀ ದೂರದಲ್ಲಿರುವ ಈ ಗ್ರಹಕ್ಕೆ 33928 ಅಸ್ವಿನ್‌ಶೇಖರ್ ಎಂದು ಹೆಸರಿಡಲಾಗಿದೆ. ಈ ಸಾಧನೆಗೆ ಪಾತ್ರರಾದ ಕೆಲವೇ ಕೆಲವು ವಿಶ್ವದ ವಿಜ್ಞಾನಿಗಳ ಪೈಕಿ ಡಾ. ಅಶ್ವಿನ್ ಶೇಖರ್ ಒಬ್ಬರು. ಏಷ್ಯಾನೆಟ್ ಡೈಲಾಗ್ಸ್ ವಿಶೇಷ ಸಂದರ್ಶನದಲ್ಲಿ ಡಾ. ಅಶ್ವಿನ್ ಶೇಖರ್ ಭಾರತದಲ್ಲಿ ಖಗೋಳ ಶಾಸ್ತ್ರ, ಚಿಕ್ಕ ಗ್ರಹಕ್ಕೆ ಇಟ್ಟಿರುವ ಹೆಸರು ಸೇರಿದಂತೆ ಹಲವು ಕೂತಹಲಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.