ಹೊಸ ಖಂಡ ಉದ್ಭವಿಸಿದರೆ ಏನಾಗುತ್ತೆ?
ಜಗತ್ಪ್ರಳಯದ ಸುಳಿವು ನೀಡಿತಾ ವೈಚಿತ್ರ್ಯ?
ಹೊಸ ಖಂಡ ಹುಟ್ಟೋಕೆ ಇನ್ನೆಷ್ಟು ಸಮಯ?
ಕೋಟಿ ವರ್ಷಗಳ ಭೂಗರ್ಭ ರಹಸ್ಯವೇನು?
ನಾವು ಇಷ್ಟು ಕಾಲ ಓದಿದ್ದು, ತಿಳ್ಕೊಂಡಿದ್ದು ಎಲ್ಲಾ ತಪ್ಪಾಗೋಕೆ ಕೆಲವೇ ದಿನ ಬಾಕಿ ಅಂತಿದ್ದಾರೆ ವಿಜ್ಞಾನಿಗಳು. ಇನ್ಮುಂದೆ ಸಪ್ತ ಸಾಗರ ಸಪ್ತಖಂಡಗಳಲ್ಲ. ಅಷ್ಟ ಸಾಗರ, ಅಷ್ಟ ಖಂಡಗಳು ಇರ್ತಾವಂತೆ! ಅದಕ್ಕೆ ಕಾರಣ ಏನು ಗೊತ್ತಾ? ಒಡೆದು ಎರಡು ಹೋಳಾಗ್ತಾ ಇರೋ ಆಫ್ರಿಕಾ ಖಂಡ!
ಬರೀ 10 ದಿನಕ್ಕೆ 56 ಕಿ.ಮೀ ಬಿರುಕು ಬಿಟ್ಟಿದೆ ಅಲ್ಲಿನ ಭೂಮಿ. ಅದರಿಂದಲೇ ಹೊಸ ಖಂಡ ಉದ್ಭವವಾಗಲಿದೆ ಅಂತಿದೆ ವಿಜ್ಞಾನಿಗಳ ವರದಿ. ಒಂದು ವೇಳೆ, ಆ ಹೊಸ ಖಂಡ ಉದ್ಭವಿಸಿದರೆ ಏನಾಗುತ್ತೆ..? ಇದು ಭಾರತಕ್ಕೆ ಸಿಕ್ತಾ ಇರೋ ವಿಪತ್ತಿನ ಸೂಚನೆಯಾ..? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, 8ನೇ ಖಂಡೋದ್ಭವ..