Nov 25, 2023, 11:34 AM IST
ಸ್ವಾತಿ ಮುತ್ತಿನ ಮಳೆ ಹನಿಯೇ.. ಈ ಸಿನಿಮಾ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿತ್ತು. ಕಾರಣ ರಾಜ್ ಬಿ ಶೆಟ್ಟಿ ನಿರ್ದೇಶನ ಹಾಗು ಕ್ವೀನ್ ರಮ್ಯಾ ನಾಯಕಿಯಾಗಿ ನಟಿಸ್ತಾರೆ ಅನ್ನೋ ಸುದ್ದಿ. ಆದ್ರೆ ರಮ್ಯಾ ಹೀರೋಯಿನ್ ಆಗ್ಲಿಲ್ಲ. ಬದಲಾಗಿ ಈ ಸಿನಿಮಾವನ್ನ ಆ್ಯಪಲ್ ಬಾಕ್ಸ್ ಸಂಸ್ಥೆಯಡಿ ನಿರ್ಮಾಣ ಮಾಡಿದ್ರು. ಇದೀಗ ರಮ್ಯಾ(Ramya) ನಿರ್ಮಾಣದ ಮೊದಲ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ(Swathi Mutthina Male Haniye movie) ರಾಜ್ಯಾದ್ಯಂತ ರಿಲೀಸ್ ಆಗಿದೆ. ರಾಜ್ ಬಿ ಶೆಟ್ಟಿ(Raj B Shetty) ಮೂರು ತಿಂಗಳ ಹಿಂದೆ ಟೋಬಿಯಾಗಿ ನಿಮ್ಮನ್ನ ರಂಜಿಸಿದ್ರು. ಟೋಬಿ ಬಗ್ಗೆ ಮಾತು ಮಂಥನ ಈಗಷ್ಟೆ ಮುಗಿದಿದೆ. ಈಗ ಶೆಟ್ರು ಶಟರ್ ಹಾಕಿಕೊಂಡು ಪ್ರತ್ಯಕ್ಷ ಆಗಿದ್ದಾರೆ. ರಾಜ್ ಬಿ ಶೆಟ್ಟಿ ಕತೆ ಚಿತ್ರಕತೆ ಬರೆದು ನಿರ್ದೇಶಿಸಿ ನಟಿಸಿರೋ ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದಲ್ಲಿ ಸಿನಿ ಪ್ರೇಕ್ಷಕರು ಮಿಂದೆದ್ದಿದ್ದಾರೆ. ಸ್ವಾತಿ ಮುತ್ತಿನ ಮಳೆಹನಿಯೇ ಮಾನಸಿಕ ಸಮಸ್ಯೆ ಇರೋ ವ್ಯಕ್ತಿಯಬ್ಬನ ಕತೆ. ಇಲ್ಲಿ ರಾಜ್ ಬಿ ಶೆಟ್ಟಿ ಮಾನಸಿಕ ಸಮಸ್ಯೆ ಇರೋ ವ್ಯಕ್ತಿ ಪಾತ್ರದಲ್ಲಿ ನಟಿಸಿದ್ದಾರೆ. ಸಿರಿ ರವಿಕುಮಾರ್ ನಾಯಕಿಯಾಗಿದ್ದು, ಮಾನಸಿಕರ ರೋಗಿಗಳನ್ನ ಕೌನ್ಸಿಲಿಂಗ್ ಮಾಡೋ ರೋಲ್ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಫ್ರೀ ಬಸ್ ಎಫೆಕ್ಟ್..ಪ್ರವಾಸಿ ತಾಣಗಳು ಫುಲ್ ರಶ್: ಸ್ಥಳೀಯರು, ಶಾಲಾ ವಿದ್ಯಾರ್ಥಿಗಳಿಗೆ ಸಾರಿಗೆ ಸಂಕಷ್ಟ