Sandalwood: ಪಂಚವಾರ್ಷಿಕ ಯೋಜನೆಯಲ್ಲಿ ರಾಕಿಂಗ್ ಸ್ಟಾರ್ ಯಶ್..! ತ್ರೈಮಾಸಿಕ ಯೋಜನೆಯಲ್ಲಿ ಧ್ರುವ ಸರ್ಜಾ..!

Feb 3, 2024, 10:01 AM IST

ಯಶ್ ಈಗ ಸ್ಯಾಂಡಲ್‌ವುಡ್‌ನ ಬ್ರ್ಯಾಂಡ್. ಯಶ್ (Yash) ಸಿನಿಮಾ ಬಂದ್ರೆ 1000 ಕೋಟಿ ಕಲೆಕ್ಷನ್ ಮಾಡೋದು ಕನ್ಫರ್ಮ್. ಹೀಗಾಗಿ ಯಶ್ ವರ್ಷಕ್ಕೆ ಎರಡು ಮೂರು ಸಿನಿಮಾ ಬಂದ್ರೆ ಚಿತ್ರರಂಗ ಉತ್ತುಂಗದಲ್ಲಿರುತ್ತೆ ಅನ್ನೋದು ಸಿನಿ ಪಂಡಿತರ ವಾದ. ಆದ್ರೆ ರಾಕಿ ಪಂಚವಾರ್ಷಿಕ, ತ್ರೈಮಾಸಿಕಾ ಯೋಜನೆಯಲ್ಲಿ ಇದ್ದಂತೆ ಕಾಣುತ್ತಿದೆ. ಯಶ್ ಐದೋ, ಮೂರು ವರ್ಷಕ್ಕೋ ಒಂದು ಸಿನಿಮಾ ಮಾಡುತ್ತಿದ್ದಾರೆ. ಯಶ್‌ರ ಕೆಜಿಎಫ್ ಸಿನಿಮಾ ಬಂದಿದ್ದು 2018ರಲ್ಲಿ. ಆ ಸಿನಿಮಾ ಬಂದು ನಾಲ್ಕು ವರ್ಷದ ಆದ ಮೇಲೆ 2022ರಲ್ಲಿ ಕೆಜಿಎಫ್ ಚಾಪ್ಟರ್2 ಬಂದಿದೆ. ಇದೀಗ ಯಶ್ ನಟಿಸುತ್ತಿರೋ ಟಾಕ್ಸಿಕ್ ರಿಲೀಸ್ ಆಗೋದು 2025ಕ್ಕೆ ಹೀಗಾಗಿ ಯಶ್ ಮೂರು ವರ್ಷಕ್ಕೆ ನಾಲ್ಕು ಐದು ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ.ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva sarja). ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಬಿಗ್  ಹಿಟ್ ಸಿನಿಮಾ ಕೊಟ್ಟ ನಟ. ಆ ಮೂರು ಸಿನಿಮಾಗಳು ಮೂರು ವರ್ಷಕ್ಕೆ ಒಂದರಂತೆ ಬಿಡುಗಡೆ ಆಗಿದ್ವು. ಧ್ರುವ ಸರ್ಜಾ ಚಿತ್ರರಂಗಕ್ಕೆ ಬಂದು 10 ವರ್ಷ ಆಗಿದೆ. ಈ 10 ವರ್ಷದಲ್ಲಿ ಧ್ರುವ ನಟಿಸಿದ್ದು ಬರೀ ಐದೇ ಸಿನಿಮಾದಲ್ಲಿ. ಧ್ರುವ ಕೊನೆಯದಾಗಿ ನಟಿಸಿದ್ದು 2021ರಲ್ಲಿ ಬಂದ ಪೊಗರು ಸಿನಿಮಾದಲ್ಲಿ. ಅಲ್ಲಿಂದ ಇಲ್ಲಿವರೆಗೆ ಆಕ್ಷನ್ ಪ್ರಿನ್ಸ್ ಯಾವ್ ಸಿನಿಮಾನೂ ರಿಲೀಸ್ ಆಗಿಲ್ಲ. ಸಧ್ಯ ಮಾರ್ಟಿನ್ ರಿಲೀಸ್ಗೆ ಧ್ರುವ ಎದುರು ನೋಡುತ್ತಿದ್ದಾರೆ. ಹೀಗಾಗಿ ಧ್ರುವ ತ್ರೈಮಾಸಿಕ ಯೋಜನೆ ಹಾಕಿಕೊಂಡಿರೋದಂತು ನಿಜ.

ಕನ್ನಡ ದೊಡ್ಡ ಹೀರೋಗಳ ಪಟ್ಟಿಯಲ್ಲಿರೋ ನಟ ಕಿಚ್ಚ ಸುದೀಪ್(Sudeep) ಹಾಗು ದರ್ಶನ್‌ರದ್ದೂ(Darshan) ಇದೇ ಕಥೆ. ಆದ್ರೆ ಇವರು ತ್ರೈಮಾಸಿಕ ಪಂಚವಾರ್ಷಿಕ ಯೋಜನೆ ಹಾಕ್ಕೊಂಡಿಲ್ಲ ಅನ್ನೋದೇ ಸಮಾಧಾನ. ಈ ಜೋಡೆತ್ತುಗಳನ್ನದ್ದೇನಿದ್ರು ವಾರ್ಷಿಕ ಯೋಜನೆ. ವರ್ಷಕ್ಕೊಂದು ಸಿನಿಮಾ ಮಾಡಿಕೊಂಡಿರೋದು ಇವರಿಗೆ ರೂಢಿಗತ. ಆದ್ರೆ ಇಂತಹ ಯೋಜನೆ ಮತ್ತು ಯೋಚನೆಯಿಂದ ಚಿತ್ರರಂಗಕ್ಕೆ ಲಾಸ್ ಅನ್ನೋದು ಈ ಹೀರೋಗಳ ಗಮನದಲ್ಲೇನು ಇಲ್ಲ ಅಂತ ಅಂದುಕೊಳ್ಳಬೇಡಿ. ಅದು ಕೂಡ ಗೊತ್ತಿದೆ.

ಇದನ್ನೂ ವೀಕ್ಷಿಸಿ: Ayodhya Ram Mandir: ತಿರುಪತಿಯನ್ನೂ ಮೀರಿಸುತ್ತಾ ಅಯೋಧ್ಯೆ..? ದಿನಕ್ಕೆ ತಿರುಪತಿ ದೇಣಿಗೆ ಎಷ್ಟು..? ಅಯೋಧ್ಯೆಗೆ ಎಷ್ಟು..?