ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೇವಲ ಒಬ್ಬ ಉತ್ತಮ ನಟ ಮಾತ್ರವಾಗಿರಲಿಲ್ಲ, ಒಬ್ಬ ಗಾಯಕನಾಗಿ ಕೂಡ ಗುರುತಿಸಿಕೊಂಡಿದ್ದರು. ಹೊಸಬರ ಚಿತ್ರಕ್ಕೆ ಸೇರಿದಂತೆ ಇತರೆ ಹೀರೋಗಳ ಚಿತ್ರಗಳಿಗೂ ಪುನೀತ್ ಹಾಡು ಹಾಡಿಕೊಡುತ್ತಿದ್ದರು. ಸಂಗೀತ ಪ್ರೇಮಿಯಾಗಿದ್ದ ಅಪ್ಪು ತಮ್ಮ ಮೊಬೈಲ್‌ಗೆ ವಿಶಿಷ್ಟ ರಿಂಗ್ ಟೋನ್ ಅನ್ನು ಇಟ್ಟಿದ್ದರಂತೆ.
ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಕೇವಲ ಒಬ್ಬ ಉತ್ತಮ ನಟ ಮಾತ್ರವಾಗಿರಲಿಲ್ಲ, ಒಬ್ಬ ಗಾಯಕನಾಗಿ ಕೂಡ ಗುರುತಿಸಿಕೊಂಡಿದ್ದರು. ಹೊಸಬರ ಚಿತ್ರಕ್ಕೆ ಸೇರಿದಂತೆ ಇತರೆ ಹೀರೋಗಳ ಚಿತ್ರಗಳಿಗೂ ಪುನೀತ್ ಹಾಡು ಹಾಡಿಕೊಡುತ್ತಿದ್ದರು. ಸಂಗೀತ ಪ್ರೇಮಿಯಾಗಿದ್ದ ಅಪ್ಪು ತಮ್ಮ ಮೊಬೈಲ್‌ಗೆ ವಿಶಿಷ್ಟ ರಿಂಗ್ ಟೋನ್ (Mobile Ringtone) ಅನ್ನು ಇಟ್ಟಿದ್ದರಂತೆ. ಅಪ್ಪು ತಮ್ಮ ಮೊಬೈಲ್‌ಗೆ ಇಟ್ಟಿದ್ದ ರಿಂಗ್ ಟೋನ್ ಬಗ್ಗೆ ಯುವ ನಟ ದಾನಿಶ್ ಸೇಠ್ ಹೇಳಿದ್ದಾರೆ.
Gandhada Gudi: ಪುನೀತ್ ಇಲ್ಲದೆ ಅರಣ್ಯಕ್ಕೆ ಕಾಲಿಟ್ಟ ಗಂಧದ ಗುಡಿ ಟೀಮ್!
2015ರ 'ನಾರ್ಕೋಸ್' ವೆಬ್ ಸರಣಿ (Narcos Web Series) ಪುನೀತ್ ಅವರಿಗೆ ಬಹಳ ಇಷ್ಟವಾಗಿತ್ತು. ಹಾಗಾಗಿ 'ನಾರ್ಕೊಸ್' ವೆಬ್ ಸರಣಿಯ ಥೀಮ್ ಸಂಗೀತವನ್ನು ತಮ್ಮ ಮೊಬೈಲ್‌ನ ರಿಂಗ್ ಟೋನ್ ಆಗಿ ಇರಿಸಿಕೊಂಡಿದ್ದರು ಎಂದು ಅವರ ಆಪ್ತರಲ್ಲೊಬ್ಬರಾಗಿದ್ದ ದಾನಿಶ್ ಸೇಠ್ (Danish Sait) ಹೇಳಿದ್ದಾರೆ. ಹಾಗೂ ಅಪ್ಪು ಅವರು ವೆಬ್ ಸರಣಿಗಳ ಬಗ್ಗೆ ತುಂಬಾನೇ ಆಸಕ್ತಿ ಹೊಂದಿದ್ದರು. 'ನಾರ್ಕೊಸ್' ರೀತಿಯ ವೆಬ್ ಸೀರಿಸ್‌ಗಳನ್ನ ನಮ್ಮಲ್ಲೂ ಮಾಡಬೇಕು ಎಂದು ಹೇಳುತ್ತಿದ್ದರು. ಗುಣಮಟ್ಟದ ಕಂಟೆಂಟ್ ನೀಡುವ ಬಗ್ಗೆ ಪುನೀತ್ ಅವರು ಸದಾ ನಿರತರಾಗಿರುತ್ತಿದ್ದರು ಎಂದು ದಾನಿಶ್ ಸೇಠ್ ತಿಳಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment