ದರ್ಶನ್ ಬೇಲ್​ಗೆ ರೆಡಿಯಾಗಿದೆಯಾ ಮಾಸ್ಟರ್​ಪ್ಲಾನ್?: ಕೊಲೆಗೂ ನಟನಿ​ಗೂ ಸಂಬಂಧವಿಲ್ಲ! ಲಾಯರ್ ವಾದ

Oct 7, 2024, 11:17 AM IST

ದರ್ಶನ್ ಬೇಲ್ ಅರ್ಜಿಯ ವಿಚಾರಣೆ 67ನೇ ಸಿಸಿಎಚ್ ಕೋರ್ಟ್​​ನಲ್ಲಿ ಸತತವಾಗಿ ನಡೀತಾ ಇದೆ.  ದರ್ಶನ್ ಪರ ವಾದ ಮಂಡಿಸಿರೋ ವಕೀಲರು ಚಾರ್ಜ್​​ಶೀಟ್​ ನಲ್ಲಿರೋ ಲೋಪ ದೋಷಗಳನ್ನ ಪಟ್ಟಿ ಮಾಡಿ ಕೋರ್ಟ್ ಎದುರಿಗಿಟ್ಟಿದ್ದಾರೆ. ಸದ್ಯ ನಡೀತಿರೊ ವಾದಮಂಡನೆ ನೋಡಿದ್ರೆ ದರ್ಶನ್​ಗೆ ಬೇಲ್ ಕೊಡಿಸೋಕೆ ಪಕ್ಕಾ ಮಾಸ್ಟರ್​​ ಪ್ಲಾನ್ ರೂಪಿಸಿದಂತಿದೆ.  67ನೇ ಸಿಸಿಎಚ್ ಕೋರ್ಟ್​ನಲ್ಲಿ ಇವತ್ತು ಕೂಡ ದರ್ಶನ್ ಬೇಲ್ ವಿಚಾರಣೆ ನಡೆದಿದೆ. ದರ್ಶನ್ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ್ ವಾದಮಂಡನೆ ಮಾಡಿದ್ದಾರೆ. ಪೊಲೀಸರು ಸಲ್ಲಿಸಿರೋ ಚಾರ್ಜ್​​ಶೀಟ್​​ನಲ್ಲಿರೋ ಲೋಪ ದೋಷಗಳನ್ನೆಲ್ಲಾ ಪಟ್ಟಿಮಾಡಿಕೊಂಡಿರೋ ಸಿ ವಿ ನಾಗೇಶ್ ಕೋರ್ಟ್ ಮುಂದೆ ಅವುಗಳನ್ನ ಇಂಚಿಂಚಾಗಿ ಬಿಚ್ಚಿಡ್ತಾ ಇದ್ದಾರೆ. 

ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ದರ್ಶನ್ ಪಾತ್ರ ಇಲ್ಲವೇ ಅಂತ ಪ್ರೂವ್ ಮಾಡೋದಕ್ಕೆ ನಾನಾ ಸಾಕ್ಷಿಗಳನ್ನ ನ್ಯಾಯಾದೀಶರ ಮುಂದೆ ಪ್ರಸ್ತುತ ಪಡಿಸಿದ್ದಾರೆ. ರಸ್ತೆಬದಿಯಲ್ಲಿ ರೇಣುಕಾಸ್ವಾಮಿ ಮೃತದೇಹವನ್ನ ಬಿಸಾಡಲಾಗಿತ್ತು. ಜೂ.9ರ ಬೆಳಿಗ್ಗ 10 ಗಂಟೆಗೆ ದೂರನ್ನ ರಿಜಿಸ್ಟರ್ ಮಾಡಲಾಗಿದೆ. ತಕ್ಷಣವೇ ದೇಹದ ಮಹಜರು, ಪಂಚನಾಮೆ ಮಾಡಬೇಕಿತ್ತು. ಆದರೆ ಜೂ. 11ರ ಮಧ್ಯಾಹ್ನ ದೇಹದ ಮಹಜರು ಮಾಡಲಾಗಿದೆ. ಹೀಗೇಕೆ ಮಾಡಿದ್ರು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಪೋಸ್ಟ್​ಮಾರ್ಟಂ ಕೂಡ ಜೂ. 11ರ ಮಧ್ಯಾಹ್ನ 2.45ಕ್ಕೆ ಮಾಡಲಾಗಿದೆ. ದೇಹದ ಐಡೆಂಟಿಟಿ ಆಗಿರಲಿಲ್ಲ ಎಂಬ ಸಬೂಬು ನೀಡಲಾಗಿದೆ. ಆದರೆ ಮಹಜರು ಮಾಡಲು ದೇಹದ ಐಡೆಂಟಿಟಿ ಏಕೆ ಬೇಕು’ ಅಂತ ಸಿ ವಿ ನಾಗೇಶ್ ಪ್ರಶ್ನೆ ಮಾಡಿದ್ದಾರೆ.