Oct 31, 2023, 10:07 AM IST
ವಿಜಯ್ರ ಬೆಳ್ಳಿತೆರೆ ದುನಿಯಾ ಶುರುವಾಗೋಕೆ ಕಾರಣ ಸೂಪರ್ ಸ್ಟಾರ್ ರಜನಿಕಾಂತ್. ಯಾಕಂದ್ರೆ ರಜಿನಿಯನ್ನೇ(Rajinikanth) ವಿಜಯ್ ಸ್ಫೂರ್ತಿಯಾಗಿಗಿ ತಗೊಂಡು ಸಿನಿಮಾ ರಂಗಕ್ಕೆ ಬಂದಿದ್ದು. ಇದನ್ನ ವಿಜಯ್ ಸಾಕಷ್ಟು ಭಾರಿ ಹೇಳಿದ್ದಾರೆ. ಇದೀಗ ವಿಜಯ್‌ಗೆ ಇದ್ದ ದೊಡ್ಡ ಡ್ರೀಮ್ ಒಂದು ಫುಲ್‌ಫಿಲ್ ಆಗೋ ಟೈಂ ಬಂದಿದೆ. ಯಾಕಂದ್ರೆ ಸ್ಯಾಂಡಲ್‌ವುಡ್(Sandalwood) ಭೀಮನಿಗೆ ತಲೈವನ ಬುಲಾವ್ ಬಂದಿದೆಯಂತೆ. ರಜನಿಕಾಂತ್ ಸಿನಿಮಾದಲ್ಲಿ ನಟಿಸೋಕೆ ದುನಿಯಾ ವಿಜಯ್‌ಗೆ(Duniya Vijaya) ಬಿಗ್ ಆಫರ್ ಕೊಟ್ಟಿದ್ದಾರಂತೆ. ಜೈಲರ್ ಸಿನಿಮಾದ ಸೂಪರ್ ಸಕ್ಸರ್ ಸಂಭ್ರಮದಲ್ಲಿರೋ ಸೂಪರ್ ಸ್ಟಾರ್ ರಜನಿಕಾಂತ್, ಈಗ ತನ್ನ 171ನೇ ಮೂವಿಗೆ ಸಜ್ಜಾಗಿದ್ದಾರೆ. ಈ ಸಿನಿಮಾವನ್ನ ಲೋಕೇಶ್ ಕನಕರಾಜ್ ಡೈರೆಕ್ಟ್ ಮಾಡ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಸಿನಿಮಾದಲ್ಲಿ ವಿಲನ್ ಆಗಿ ನಮ್ಮ ಸ್ಯಾಂಡಲ್ವುಡ್ ಸ್ಟಾರ್ ದುನಿಯಾ ವಿಜಯ್ ನಟಿಸುತ್ತಾರೆ ಅಂತ ಸುದ್ದಿ ಹರಿದಾಡ್ತಿದೆ. ಕರಿ ಚಿರತೆ ವಿಜಯ್ ರಜನಿಕಾಂತರ ಬಿಗ್ ಫ್ಯಾನ್. ವಿಜಯ್ ಸಿನಿಮಾ ರಂಗಕ್ಕೆ ಬರೋ ಮೊದ್ಲು ರಜನಿಕಾಂತ್ರನ್ನ ನೋಡೋಕೆ ಅಂತ ಚನ್ನೈನ ಹೋಟೆಲ್ ಒಂದರಲ್ಲಿ ಸಪ್ಲೈಯರ್ ಆಗಿ ಸೇರಿಕೊಂಡಿದ್ರಂತೆ. ಆದ್ರೆ ವಿಜಯ್ಗೆ ರಜನಿಯನ್ನ ಭೇಟಿ ಮಾಡೋಕೆ ಚಾನ್ಸ್ ಸಿಕ್ಕಿದ್ದು ದುನಿಯಾ ಸಿನಿಮಾ ಬಂದ ಮೇಲೆ. ದುನಿಯಾ ನೋಡಿದ್ದ ರಜನಿ ಫೋನ್ ಕಾಲ್ ಮಾಡಿ ಭೇಟಿ ಮಾಡೋಣ ಅಂದಿದ್ರಂತೆ. ಆದ್ರೆ ವಿಜಯ್ ಡೈರೆಕ್ಟ್ ಆಗಿ ಚನ್ನೈಗೆ ಹೋಗಿ ರಜನಿಯನ್ನ ಭೇಟಿ ಮಾಡಿ ಬಂದಿದ್ರು.
ಇದನ್ನೂ ವೀಕ್ಷಿಸಿ: ಉಗ್ರರಿಗೆ ಯಾಕೆ ಸ್ವಾತಂತ್ರ್ಯ ಹೋರಾಟಗಾರನ ಪಟ್ಟ..? ಇಸ್ರೇಲ್ ವಿರೋಧಿ ಉಗ್ರರ ಪರ ಇಲ್ಲಿ ಅನುಕಂಪ ಯಾಕೆ..?