Oct 10, 2024, 4:02 PM IST
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಡೈನಾಮಿಕ್ ಡೈರೆಕ್ಟರ್ ನರ್ತನ್ ಜೊತೆಗಾಗಿ ಸಿನಿಮಾ ಮಾಡಿದ್ರೆ ಹೇಗಿರುತ್ತೆ,.? ಇಂಥದ್ದೊಂದು ಟಾಕ್ ಎರಡು ವರ್ಷದ ಹಿಂದೆ ಎದ್ದಿತ್ತು. ಈಗ ಅದಕ್ಕೆ ಟೈಮ್ ಸೆಟ್ ಆಗಿದೆಯಂತೆ.? ಕಿಚ್ಚ ನರ್ತನ್ ಕಾಂಬಿನೇಷನ್ನಲ್ಲಿ ಸಿನಿಮಾ ಸೆಟ್ಟೇರುತ್ತಂತೆ. ಇಂಟ್ರೆಸ್ಟಿಂಗ್ ಏನ್ ಗೊತ್ತಾ.? ಯಶ್ಗಾಗಿ ಸಿದ್ಧಪಡಿಸಿದ್ಧ ಕಥೆಯಲ್ಲಿ ಬಾದ್ಷಾ ನಟಿಸುತ್ತಾರಂತೆ..? ಹಾಗಾದ್ರೆ ಏನಿದು ಯಶ್, ಕಿಚ್ಚ, ನರ್ತನ್ ಎಕ್ಸ್ ಕ್ಲ್ಯೂಸೀವ್ ಸ್ಟೋರಿ.. ಇಲ್ಲಿದೆ ನೋಡಿ. ಇಂಡಿಯನ್ ಸಿನಿ ಜಗತ್ತಿನ ಆರಡಿ ಕಟೌಟ್ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಬಳಿಕ ಕೈಗೆತ್ತಿಕೊಳ್ಳುತ್ತಿರೋ ಸಿನಿಮಾಗಳೆಲ್ಲಾ ದೇಶಾದ್ಯಂತ ಸೌಂಡ್ ಮಾಡುತ್ತಿವೆ. ಈಗ ಬಾದ್ ಷಾ ಮ್ಯಾಕ್ಸ್ ರಿಲೀಸ್ಗೆ ಡೇಟ್ ಹುಡುಕುತ್ತಿದ್ದಾರೆ. ಈ ಟೈಮ್ನಲ್ಲೇ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಕತೆ ಬ್ಲ್ಯಾಸ್ಟ್ ಆಗಿದೆ. ಅದು ಎರಡು ವರ್ಷದ ಹಿಂದೆ ಗುಲ್ಲೆದ್ದಿದ್ದ ಸುದ್ದಿಗೆ ಈಗ ಮರುಜೀವ ಬಂದಿದೆ.
ಅದೇ ಮಫ್ತಿ ಡೈರೆಕ್ಟರ್ ನರ್ಥನ್ ಹಾಗು ಸುದೀಪ್ ಕಾಂಬಿನೇಷನ್ನಲ್ಲಿ ಸಿನಿಮಾ ಬರುತ್ತೆ ಅನ್ನೋ ಗರ್ಮಾ ಗರಂ ವಿಚಾರ. ಡಿಸೆಂಬರ್ ಹೊತ್ತಿಗೆ ಕಿಚ್ಚನ ಮ್ಯಾಕ್ಸ್ ತೆರೆಗಪ್ಪಳಿಸುತ್ತೆ. ಅಷ್ಟರಲ್ಲಾಗಲೇ ಮಹಾ ಸಿನಿಮಾ ಒಂದಕ್ಕೆ ಬಾದ್ ಷಾ ಸಜ್ಜಾದಂತೆ ಕಾಣ್ತಿದೆ. ಯಾಕಂದ್ರೆ ಸುದೀಪ್ ಕನ್ನಡದ ಕೆಆರ್ಜಿ ಬ್ಯಾನರ್ನಲ್ಲಿ ಸಿನಿಮಾ ಮಾಡೋ ಕಮಿಟ್ಮೆಂಟ್ ಇದೆ. ಈಗ ಆ ಕಮಿಟ್ಮೆಂಟ್ಗೆ ಹಾಲೆರೆದು ನೀರೆರೆಯೋ ಡೈರೆಕ್ಟರ್ ಯಾರು ಅನ್ನೋದಕ್ಕೆ ಉತ್ತರ ಸಿಕ್ಕಂತಿದೆ. ಕನ್ನಡದ ಸ್ಟಾರ್ ಡೈರೆಕ್ಟರ್ ನರ್ತನ್ ನೇಮ್ ಫಿಕ್ಸ್ ಆಗಿದೆ. ನರ್ತನ್.. ಒಂದೇ ಒಂದು ಮಫ್ತಿ ಸಿನಿಮಾದಿಂದ ಈ ಹೆಸ್ರು ಇಡೀ ಸೌತ್ ಜಗತ್ತಿಗೇ ಗೊತ್ತು. ಈಗ ಭೈರತಿ ರಣಗಲ್ ಮೂಲಕ ನರ್ತನ್ ಮತ್ತೆ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ನರ್ತನ್ ಸಿನಿಮಾ ಸ್ಟೈಲ್ ನೋಡಿ ಯಶ್ ಕೂಡ ಕಾಲ್ ಶೀಟ್ ಕೊಟ್ಟಿದ್ರು.
ಕೆಜಿಎಫ್ ಸಿನಿಮಾ ಬಳಿಕ ಯಶ್ಗೆ ಆಕ್ಷನ್ ಕಟ್ ಹೇಳೋದೇ ಈ ಡೈರೆಕ್ಟರ್ ಅಂತ ಫಿಕ್ಸ್ ಆಗಿತ್ತು. ಅಂದಿನಿಂದ ಈ ಡೈನಾಮಿಕ್ ಡೈರೆಕ್ಟರ್ ಹೆಸ್ರು ಇಂಡಿಯಾ ತುಂಬೆಲ್ಲಾ ಸೌಂಡ್ ಮಾಡಿತ್ತು. ಯಶ್ ಕೂಡ ಎರಡು ವರ್ಷ ನರ್ತನ್ ಬಳಿ ಹಲವು ಕತೆ ಬರೆಸಿದ್ರು. ಆದ್ರೆ ಅದ್ಯಾಕೋ ಇಬ್ಬರ ಕಾಂಬಿನೇಷನ್ ವರ್ಕ್ ಆಗ್ಲಿಲ್ಲ. ಈಗ ನರ್ತನ್ ಗುರಿ ಕಿಚ್ಚನ ಮೇಲಿದೆ. ಯಶ್ ನರ್ತನ್ರನ್ನ ಕೈ ಬಿಟ್ಟ ಮೇಲೆ ಕನ್ನಡದ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್ ರನ್ನ ಮನದಲ್ಲಿಟ್ಟುಕೊಂಡು ನಿರ್ದೇಶಕ ನರ್ತನ್ ಕಥೆ ಹೆಣೆದಿದ್ದಾರೆ. ಆ ಕಥೆ ಕೇಳಿರೋ ಸುದೀಪ್ ಹಾಗು ಕೆಆರ್ಜಿ ಪ್ರೊಡಕ್ಷನ್ ಹೌಸ್ ಈ ಸಿನಿಮಾಗೆ ನೀವೇ ಸಾರಥಿ ಅಂತ ನರ್ತನ್ರನ್ನ ಫಿಕ್ಸ್ ಮಾಡಿದ್ದಾರೆ ಅನ್ನೋ ಬಿಸಿ ಬಿಸಿ ಸುದ್ದಿ ಗಾಂಧಿನಗರ ತುಂಬೆಲ್ಲಾ ಬಿಕರಿ ಆಗುತ್ತಿದೆ.
ಆದ್ರೆ ನರ್ತನ್ ಹಾಗು ಕಿಚ್ಚನ ಕಾಂಬಿನೇಷನ್ ಮಧ್ಯೆ ಮತ್ತೊಂದು ಡೌಟ್ ಕೂಡ ಇದೆ. ಯಶ್ಗಾಗಿ ಸಿದ್ಧಪಡಿಸಿದ್ದ ಕತೆಯನ್ನ ನಿರ್ದೇಶಕ ನರ್ತನ್ ಸುದೀಪ್ಗೆ ಆಕ್ಷನ್ ಕಟ್ ಹೇಳುತ್ತಾರಾ ಅನ್ನೋದು.? ಇದರ ಮೂಲ ಹುಡುಕಿದಾಗ ಸಿಕ್ಕ ಉತ್ತರ, ಇಲ್ಲ ಇಲ್ಲ ಸುದೀಪ್ ಇಮೇಜ್, ಸ್ಟೈಲೇ ಬೇರೆ. ಇದು ಕಿಚ್ಚನಿಗಾಗೆ ಸಿದ್ಧಪಡಿಸಿರೋ ಫ್ರೆಶ್ ಸ್ಟೋರಿ ಅನ್ನೋ ಉತ್ತರ ಸಿಕ್ಕಿದೆ. ಸಧ್ಯ ಸುದೀಪ್ ಮ್ಯಾಕ್ಸ್ ತೆರೆ ಮೇಲೆ ತರೋ ತವಕದಲ್ಲಿದ್ದಾರೆ. ಆ ಬಳಿಕ ಡಿಸೆಂಬರ್ನಿಂದ ಅನೂಪ್ ಭಂಡಾರಿ ಜೊತೆ ಬಿಲ್ಲ ರಂಗ ಬಾಷಾ ಸಿನಿಮಾದಲ್ಲಿ ಲಾಕ್ ಆಗಲಿದ್ದಾರೆ. ಈ ಸಿನಿಮಾ ಬಳಿಕವಷ್ಟೇ ಕಿಚ್ಚ ನರ್ತನ್ ಕಾಲ್ ಶೀಟ್ಗೆ ಕೈ ಹಾಕ್ತಾರೆ.