Dec 8, 2023, 12:45 PM IST
ದುನಿಯಾ ವಿಜಯ್ ಇಷ್ಟು ದಿನ ಸೈಕ್ ಸೈಕ್ ಅಂತ ವೈರಲ್ ಆಗುತ್ತಿದ್ರು. ಆದ್ರೆ ಈಗ ಸೈಕಾದೇ ಸೈಕಾದೆ ಲವ್ನಲ್ಲಿ ಲಾಕ್ ಆದೇ ಅಂತ ಹೊಸ ಗಾನ ಬಜಾನ ಶುರುಮಾಡಿದ್ದಾರೆ. ಅದು ಭೀಮನ(Bheem movie) ಲವ್ ಸಾಂಗ್ನಿಂದ. ಭೀಮನ ಮತ್ತೊಂದು ಸಾಂಗ್ ರಿಲೀಸ್ ಆಗಿದ್ದು, ಈ ಹಾಡು ಲವರ್ಸ್ ಹಾರ್ಟ್ನ ಲಾಕ್ ಮಾಡ್ತಿದೆ. ಭೀಮನ ಈ ಲವ್ ಹಾಡು(love song) ಬೆಳಗಿನ ಸಪ್ರಭಾತದ ಮ್ಯೂಸಿಕ್‌ನಂತೆ ಶುರುವಾಗುತ್ತೆ. ಬಳಿಕ ಲವ್ ಕಿಕ್ ಕೊಡುತ್ತೆ. ಪಕ್ಕಾ ಲೋಕಲ್ ಲಿರಿಕ್ಸ್ ಈ ಹಾಡಿನ ಹೈಲೆಟ್.. ಪ್ರೇಮಿಗಳು, ಅವರವರ ಪ್ರೇಯಸಿ, ಪ್ರಿಯತಮನ ಬಳಿ ಹೇಗೆ ಮಾತಾಡ್ತಾರೋ ಅದೇ ಮಾತುಗಳಿಗೆ ಹಾಡಿನ ರೂಪ ಪಟ್ಟಿದ್ದಾರೆ ನಟ ದುನಿಯಾ ವಿಜಯ್(Duniya Vijay). ಭೀಮ ಮಾಸ್ ಸಿನಿಮಾ ಆದ್ರೆ ಇಲ್ಲೂ ಲೋಕಲ್ ಲವ್ ಸ್ಟೋರಿ ಇದೆ. ಅದಕ್ಕೆ ತಕ್ಕಂತೆ ಲೋಕಲ್ ಟ್ಯೂನ್ ಸೆಟ್ ಮಾಡಿದ್ದಾರೆ ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್.. ಇದರ ಜೊತೆ ಕವಿರಾಜ್ ಬರೆದಿರೋ ಲಿರಿಕ್ಸ್ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ. ವಿಶೇಷ ಅಂದ್ರೆ ಸಂಗೀತ ನಿರ್ದೇಶಕ ಚರಣ್ ರಾಜ್ ಅವರೇ ಈ ಹಾಡು ಹಾಡಿದ್ದು ಫೀಮೇಲ್ ವರ್ಷನ್ನಲ್ಲಿ ವೈಷ್ ಕನ್ನನ್ ಹಾಡಿದ್ದಾರೆ. ಭೀಮನ ಸಿನಿಮಾದಲ್ಲಿ ವಿಜಯ್ ಜೊತೆ ನಟಿ ಅಶ್ವಿನಿ ಲವ್ ಲಾಕ್ ಆಗೋ ಹಾಡಿದು ಅನ್ನೋದು ಗೊತ್ತಾಗ್ತಿದೆ. ದುನಿಯಾ ವಿಜಯ್ ಯಾವ್ ಸಿನಿಮಾ ಮಾಡ್ಲಿ ಆ ಸಿನಿಮಾದಲ್ಲಿ ಎರಡು ಹಾಡುಗಳು ಪಕ್ಕಾ ಹಿಟ್ ಆಗುತ್ತೆ. ಅದು ಒಂದು ಲವ್ ಸಾಂಗ್ ಆದ್ರೆ ಮತ್ತೊಂದು ಮಾಸ್ ಹಾಡಾಗಿರುತ್ತೆ. ಭೀಮ ಸಿನಿಮಾದಲ್ಲಿ ಈ ಹಿಂದೆ ಸೈಕ್ ಸೈಕ್ ಅಂತ ಮಾಸ್ ಸಾಂಗ್ ಬಂದಿತ್ತು. ಈಗ ಲವ್ ಯು ಕಣೆ ಅಂತ ಲವ್ ಸಾಂಗ್ ಬಂದಿದೆ. ಈ ಎರಡೂ ಹಾಡುಗಳು ಹಿಟ್ ಲೀಸ್ಟ್ ಸೇರಿವೆ.
ಇದನ್ನೂ ವೀಕ್ಷಿಸಿ: ಯಶ್19 ಸಿನಿಮಾ ಅನೌನ್ಸ್‌ಗೆ ಕೌಂಟ್‌ಡೌನ್! 11 ದೇಶಗಳಲ್ಲಿ ಸಿನಿಮಾ ಟೈಟಲ್ ರಿವೀಲ್..!