ಧನಂಜಯ್‌ಗೆ ಕಾಂಪಿಟ್ ಮಾಡೋದು ಚಾಲೆಂಜಿಂಗ್; ಮನ್ಸೂನ್ ರಾಗ ಬಗ್ಗೆ ರಚಿತಾ ರಾಮ್ ಮಾತು

Aug 6, 2022, 5:39 PM IST

ಸ್ಯಾಂಡಲ್ ವುಡ್ ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ನಟನೆಯ ಮನ್ಸೂನ್ ರಾಗ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈಗಾಗಲೇ ಟೀಸರ್ ಟ್ರೈಲರ್ ರಿಲೀಸ್ ಆಗಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಎಸ್ ರವೀಂದ್ರನಾಥ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ಎ ಆರ್ ವಿಖ್ಯಾತ್ ಬಂಡವಾಳ ಹೂಡಿದ್ದಾರೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ ನಲ್ಲಿ ಸಿನಿಮಾ ತಯಾರಾಗಿದೆ. ಈ ಬಗ್ಗೆ ಮಾತನಾಡಿದ ನಟಿ ರಚಿತಾ ರಾಮ್ ತಂತ್ರಜ್ಞರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪುಷ್ಪಕ ವಿಮಾನ ಸಿನಿಮಾದಲ್ಲಿ ಈ ತಂಡದ ಜೊತೆ ಕೆಲಸ ಮಾಡಿದ್ದೆ. ಇದೀಗ 2ನೇ ಬಾರಿ ಕೆಲಸ ಮಾಡುತ್ತಿದ್ದೀನಿ. ಈ ತಂಡದ ಜೊತೆ ಕೆಲಸ ಮಾಡಿದ್ದು ಸಂತಸವಾಗಿದೆ. ಮನ್ಸೂನ್ ನಲ್ಲಿ ಶೂಟ್ ಮಾಡಿದ್ದು, ಮಾನ್ಸೂನ್ ನಲ್ಲೇ ರಿಲೀಸ್ ಆಗುತ್ತಿದೆ. ಪಾತ್ರ ಇಷ್ಟ ಆಗಿಲ್ಲ ಅಂದರೆ ರಿ ಶೂಟ್ ಮಾಡ್ತೀವಿ ಅಂತ ಹೇಳಿದ್ರು. ಹೆಂಗೆ ಬೇಕಾದರೂ ಈ ಪಾತ್ರ ತೋರಿಸಬಹುದು. ಅದರೆ ಈ ಪಾತ್ರವನ್ನು ಅದ್ಭುತವಾಗಿ ತೋರಿಸಿದ್ದಾರೆ ಎಂದರೆ ತೆರೆಮೇಲೆ ನೋಡಿ. ಧನಂಜಯ್ ಜೊತೆ ಮೊದಲ ಬಾರಿಗೆ ನಟಿಸಿದ್ದೀನಿ. ನಟರಾಕ್ಷಕ ಧನಂಜಯ್. ಧನಂಜಯ್‌ಗೆ ಕಾಂಪಿಟ್ ಮಾಡುವುದು ತಾಲೆಂಜ್ ಆಗಿತ್ತು. ಅದು ಸಿನಿಮಾ ನೋಡಿದ ಮೇಲೆ ಗೊತ್ತಾಗುತ್ತದೆ ಎಂದು ರಚಿತಾ ಹೇಳಿದರು.