Chikkanna: ಚಿಕ್ಕಣ್ಣನ ಉಪಾಧ್ಯಕ್ಷ ಯಾಕೆ ನೋಡಬೇಕು..? ಸಿನಿಮಾ ನೋಡಲು ಐದು ಕಾರಣಗಳು ಇಲ್ಲಿವೆ ನೋಡಿ..!

Chikkanna: ಚಿಕ್ಕಣ್ಣನ ಉಪಾಧ್ಯಕ್ಷ ಯಾಕೆ ನೋಡಬೇಕು..? ಸಿನಿಮಾ ನೋಡಲು ಐದು ಕಾರಣಗಳು ಇಲ್ಲಿವೆ ನೋಡಿ..!

Published : Jan 25, 2024, 10:49 AM ISTUpdated : Jan 25, 2024, 10:50 AM IST

ನಟ ಚಿಕ್ಕಣ್ಣ ಕಂಡ ಕನಸು ನನಸಾಗೋ ಕ್ಷಣ ಬಂದಿದೆ. ಕಾಮಿಡಿ ನಟ ಆಗಿದ್ದ ಚಿಕ್ಕಣ್ಣ ಈಗ ಹೀರೋ ಆಗಿ ಬೆಳ್ಳಿತೆರೆ ಮೇಲೆ ಲಾಂಚ್ ಆಗುತ್ತಿದ್ದಾರೆ. ಆ ಸಿನಿಮಾವೇ ಉಪಾಧ್ಯಕ್ಷ. ಚಿಕ್ಕಣ್ಣ ನಾಯಕ ನಟನಾಗಿ ನಟಿಸುತ್ತಿರೋ ಉಪಾಧ್ಯಕ್ಷ ಸಿನಿಮಾ ಇದೇ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. 
 

ಚಿಕ್ಕಣ್ಣ ಈ ಹಿಂದೆಯೇ ಹೀರೋ ತರ ತೆರೆ ಮೇಲೆ ಮೆರೆದಾಡಿದ್ದಾರೆ. ಯಾಕಂದ್ರೆ ಕಿಚ್ಚ ಸುದೀಪ್, ಯಶ್, ಪುನೀತ್‌ರಂತಹ ಬಿಗ್ ಸ್ಟಾರ್‌ಗಳ ಜೊತೆ ಸಿನಿಮಾ ಪೂರ್ತಿ ಇರುತ್ತಿದ್ರು ಚಿಕ್ಕಣ್ಣ(Actor Chikkanna). ಒಂದ್ ರೀತಿ ಹೀರೋ ರೇಜ್‌ನಲ್ಲೇ ಇತ್ತು ಚಿಕ್ಕಣ್ಣನ ರೇಂಜ್. ಈಗ ಅದೇ ಕಾಮಿಡಿ ಟೈಮಿಂಗ್ ಬಳಸಿಕೊಂಡು ಉಪಾಧ್ಯಕ್ಷ ಸಿನಿಮಾದಲ್ಲಿ(Upadhyaksha movie) ನಾಯಕನಟನಾಗಿದ್ದಾರೆ. ಈ ಸಿನಿಮಾದ ಸ್ಯಾಂಪಲ್ಸ್‌ಗಳು ಸಿನಿ ಪ್ರೇಕ್ಷಕರಲ್ಲಿ ಹಲ್‌ಚಲ್‌ ಎಬ್ಬಿಸಿವೆ. ಉಪಾಧ್ಯಕ್ಷ ಸಿನಿಮಾ ಫುಲ್ ಮಿಲ್ಸ್ ಕಾಮಿಡಿ ಎಂಟರ್ಟೈನರ್. ಈ ಸಿನಿಮಾ ನೋಡೋಕೆ ಆ ಒಂದು ಕಾರಣ ಸಾಕ್ವಲ್ವಾ. ಇದರ ಜೊತೆ ಕಾಮಿಡಿಗೇ ಉಪಾಧ್ಯಕ್ಷನ ಹಾಗೆ ಇರೋ ಚಿಕ್ಕಣ್ಣ ಹೀರೋ ಆಗಿದ್ದಾರೆ ಅಂದ್ಮೇಲೆ ಈ ಉಪಾಧ್ಯಕ್ಷ ಸಿನಿಮಾದಲ್ಲಿ ಎಂಟರ್ಟೈನ್ಗೇನು ಕೊರತೆ ಇರಲ್ಲ ಅನ್ನೋದು ಮತ್ತೊಂದು ಕಾರಣ. 2014ರಲ್ಲಿ ಅಧ್ಯಕ್ಷ ಸಿನಿಮಾ ಬಂದಿತ್ತು. ಈ ಸಿನಿಮಾದಲ್ಲಿ ನಟ ಶರಣ್(Actor Sharan) ಹಾಗು ಚಿಕ್ಕಣ್ಣ ಸೇರಿ ಚಿಂತೆ ಇಲ್ಲದ ತುಂಡ್ ಹೈಕ್ಳ ಸಂಘ ಕಟ್ಟಿದ್ರು. ಈ ಸಂಘಕ್ಕೆ ಶರಣ್ ಅಧ್ಯಕ್ಷ ಆಗಿದ್ರೆ, ಚಿಕ್ಕಣ್ಣ ಉಪಾಧ್ಯಕ್ಷ ಆಗಿದ್ರು. ಈ ಅಧ್ಯಕ್ಷ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಇದೀಗ ಇದೇ ಅಧ್ಯಕ್ಷ ಸಿನಿಮಾದ ಸೀಕ್ವೆಲ್ ಉಪಾಧ್ಯಕ್ಷ ಸಿನಿಮಾ ಬರುತ್ತಿದೆ. ಹೀಗಾಗಿ ಉಪಾಧ್ಯಕ್ಷ ಸಿನಿಮಾ ನೋಡೋಕೆ ಇದು ಕೂಡ ಒಂದು ಕಾರಣ.

ಇದನ್ನೂ ವೀಕ್ಷಿಸಿ:  ಚಿತ್ರರಂಗದಲ್ಲಿ ಡೈರೆಕ್ಟರ್ ಆರ್. ಚಂದ್ರು ಹೊಸ ಸಾಹಸ..! RC ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಆರಂಭ!

03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
Read more