ಹುಡುಗಿ ಮೇಲೆ ನಂಗೆ ಫೀಲಿಂಗ್ಸ್ ಬರ್ತಿಲ್ಲವೆಂದು ತಾಳಿ ಎಸೆದು ಹೋದ ವರ!

ಹುಡುಗಿ ಮೇಲೆ ನಂಗೆ ಫೀಲಿಂಗ್ಸ್ ಬರ್ತಿಲ್ಲವೆಂದು ತಾಳಿ ಎಸೆದು ಹೋದ ವರ!

Published : May 02, 2025, 06:07 PM ISTUpdated : May 02, 2025, 06:38 PM IST

ದೇವನಹಳ್ಳಿ ಮತ್ತು ಹೊಸಕೋಟೆಯ ಜೋಡಿಯೊಂದು ಮದುವೆಯ ಹಂತದಲ್ಲಿದ್ದಾಗ, ವರನು ಇದ್ದಕ್ಕಿದ್ದಂತೆ ಮದುವೆಯಿಂದ ಹಿಂದೆ ಸರಿದಿದ್ದಾನೆ. ಈ ಅನಿರೀಕ್ಷಿತ ಘಟನೆಯು ಎರಡೂ ಕುಟುಂಬಗಳಿಗೆ ಆಘಾತವನ್ನುಂಟುಮಾಡಿದೆ. ವರನ ನಿರ್ಧಾರದ ಹಿಂದಿನ ನಿಗೂಢ ಕಾರಣವೇನು?

ಅವನು ದೇವನಹಳ್ಳಿಯವನು.. ಅವಳು ಹೊಸಕೋಟೆಯವಳು.. ಇಬ್ಬರಿಗೂ ಕಂಕಣ ಕೂಡಿ ಬಂದಿತ್ತು. ಸಂಬಂದಿಕರ ಸಹಾಯದಿಂದ ಇಬ್ಬರ ಕುಟುಂಬ ಮದುವೆಯನ್ನ ನಿಶ್ಚಯಿಸಿತ್ತು. ಮದುವೆಗೂ ಮುನ್ನ ನಡೆಯೋ ಮಾತುಕತೆಗಳೆಲ್ಲಾ ಮುಗೀತು. ಪ್ರೀ ವೆಡ್ಡಿಂಗ್​ ಫೋಟೋಶೂಟ್​​ ಕೂಡ ಮುಗೀತು. ಮದುವೆ ದಿನ ಎರಡೂ ಕುಟುಂಬ ಸಂರ್ಭರಮದಿಂದ ಕಲ್ಯಾಣ ಮಂಟಪಕ್ಕೆ ಬಂದಿತ್ತು. ರಾತ್ರಿ ರಿಸೆಪ್ಷನ್​ ಮುಗಿದ ಮೇಲೆ ಎಲ್ಲರೂ ಬೆಳಗ್ಗೆ ಬ್ರಾಹ್ಮಿ ಮುಹೂರ್ತಕ್ಕೆ ನಡೆಯಬೇಕಿದ್ದ ತಾಳಿ ಕಟ್ಟೋ ಶಾಸ್ತ್ರಕ್ಕೆ ರೆಡಿಯಾಗುತ್ತಿದ್ದರು.

ಇನ್ನೇನು ವಧು ಕತ್ತಿಗೆ ತಾಳಿ ಬೀಳಬೇಕಿತ್ತು. ಅಷ್ಟರಲ್ಲೇ ವರ ಮಂಗಮಾಯ. ಎಲ್ಲಿ ಅಂತ ಹುಡುಕಾಡಿದ್ರೆ ಹೋಗಿ ರೂಮಿನಲ್ಲಿ ಕೂತಿದ್ದನು. ಯಾಕಪ್ಪ ಅಂದ್ರೆ ಅವನದ್ದು ಒಂದೇ ಉತ್ತರ. ನನಗೆ ಮದುವೆ ಬೇಡ ಸ್ವಾಮಿ ಎಂದಿದ್ದಾನೆ.  ಲಕ್ಷ ಲಕ್ಷ ಖರ್ಚು ಮಾಡಿ ಮದುವೆ ಮಾಡೋದಕ್ಕೆ ಹೊರಟಿತ್ತು ಎರಡೂ ಕುಟುಂಬ. ಆದರೆ ವರನ ಒಂದು ನಿರ್ಧಾರದಿಂದ ಇವತ್ತು ಎರಡೂ ಕುಟುಂಬಗಳ ಮರ್ಯಾದೆ ಬೀದಿಗೆ ಬಿದ್ದಿದೆ. ಅಷ್ಟಕ್ಕೂ ಮದುವೆ ಮಂಟಪಕ್ಕೆ ಬಂದ ಗಂಡಿಗೆ ಏನಾಯ್ತು.? ಆತ ತಾಳಿ ಕಟ್ಟೋ ಸಮಯಕ್ಕೆ ಕೈ ಕೊಟ್ಟಿದ್ದೇಕೆ..? ಅಂಥದ್ದು ಆವತ್ತು ಏನು ನಡೀತು.? ಒಂದು ವಿಚಿತ್ರ ಮ್ಯಾರೇಜ್​ ಬ್ರೇಕ್​​ಅಪ್​ ಸ್ಟೋರಿಯೇ ಇವತ್ತಿನ ಎಫ್​​.ಐ.ಆರ್​​.

ಅವರು ತಮ್ಮ ಪಾಡಿಗೆ ಕ್ರಿಕೆಟ್​​ ಆಡಿಕೊಂಡಿದ್ದರು. ಮರು ದಿನ ಅವರು ಆಡಿದ್ದ ಗ್ರೌಂಡ್​​ ಹತ್ತಿರದಲ್ಲೇ ಒಂದು ಮೃತದೆಹ ಸಿಕ್ಕಿತ್ತು. ಆ ಮೃತದೇಹ ಕೇರಳದ ವಯನಾಡು ಮೂಲದವನದ್ದಾಗಿತ್ತು. ಪೊಲೀಸರು ಕ್ರಿಕೆಟ್​ ಆಡ್ತಿದ್ದವರನ್ನ ಬಂದಿಸಿದ್ದರು. ಇದೇ ಟೈಂಗೆ ನಮ್ಮ ಹೋಮ್​ ಮಿನಿಸ್ಟರ್​​ ಆ ಕೊಲೆ   ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕೆ ಅಂತ ಹೆಳಿಬಿಟ್ಟಿದ್ದರು. ಆದರೆ, ನಂತರ ಅದೇ ಮಿನಿಸ್ಟರ್​​​ ಯೂ ಟರ್ನ್​ ಹೊಡೆದಿದ್ದಾರೆ. ಅಷ್ಟಕ್ಕೂ ಆ ಕೊಲೆ ನಡೆದಿದ್ದಾದ್ರೂ ಯಾಕೆ.? ಗೃಹ ಸಚಿವರು ಯೂ ಟರ್ನ್​ ಹೊಡೆದಿದ್ದೇಕೆ.? ಅಷ್ಟಕ್ಕೂ ಆವತ್ತು ಆ ಗ್ರೌಂಡ್​​​ನಲ್ಲಿ ನಡೆದಿದ್ದೇನು..? ಅನ್ನೋದ್ರ ತನಿಖೆಗಿಳಿದ ಪೊಲೀಸರಿಗೆ ಸಿಕ್ಕಿದ್ದು ಶಾಕಿಂಗ್​ ವಿಚಾರ.

ಒಂದು ಸಾವು ಎಷ್ಟೆಲ್ಲಾ ತಿರುವಗಳನ್ನ ಪಡೆಯುತ್ತೆ ನೋಡಿ. ಸದ್ಯ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಈ ಕೊಲೆ ನಿಜಕ್ಕೂ ನಡೆದಿದ್ದು ಯಾಕೆ ಅನ್ನೋದನ್ನ ಅವರೇ ಹೇಳ್ತಾರೆ.

22:45DK Shivakumar: ಜ್ಯೋತಿಷಿ ಹೇಳಿದ್ದ ಭವಿಷ್ಯ; ಮನಮೆಚ್ಚಿದ ಮಡದಿಯಾಗಿ DKS ಬಾಳಿಗೆ ಬಂದಿದ್ದು ಹೇಗೆ ಉಷಾ?
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
24:12Wife escape: ಜಿಮ್ ಬಾಡಿ ಗಂಡನಿಂದ ಸುಖವಿಲ್ಲವೆಂದು, ಸ್ಲಿಮ್ ಬಾಡಿ ಹುಡುಗನ ಹಿಂದೆ ಹೆಂಡತಿ ಪರಾರಿ!
24:18ಮನಸ್ಸಿಲ್ಲದೆ ಮದುವೆಯಾದ ಗಂಡನ ಬಿಟ್ಟು ಪ್ರೇಮಿಯೊಂದಿಗೆ ಹೋದ ಮಗಳು; ವಾಪಸ್ ಕರೆತಂದು ವಿಷವುಣಿಸಿ ಸುಟ್ಟು ಹಾಕಿದ ಅಪ್ಪ!
25:00ಅವಳಿಗೆ 57.. ಅವನಿಗೆ 27, ಇಬ್ಬರಿಗೂ ಆಗಿತ್ತು ಕುಚ್​​..ಕುಚ್​​..! ಆ ಶಿಕ್ಷಕಿ ಸತ್ತಿದ್ದೇಗೆ? ಕೊಂದಿದ್ದು ಯಾರು..?
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
Read more