Nov 18, 2023, 11:27 PM IST
ಯತೀಂದ್ರ ಸಿದ್ದರಾಮಯ್ಯನರ ಹಲೋ ಅಪ್ಪ ವಿಡಿಯೋ ಭಾರಿ ಕೋಲಾಹಲ ಎಬ್ಬಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ಸಾಕ್ಷ್ಯ ಎಂದು ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಟ್ರಾನ್ಸ್‌ಫರ್ ದಂಧೆ ಆರೋಪದ ಬೆನ್ನಲ್ಲೇ 71 ಪೊಲೀಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ಪ್ರಕಟಗೊಂಡಿದೆ.ಟ್ರಾನ್ಸ್‌ಫರ್ ದಂಧೆ ಕುರಿತು ಹೆಚ್‌ಡಿ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಟ್ವೀಟ್ ಸಮರಕ್ಕೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ಸುಳ್ಳು ಆರೋಪಕ್ಕೆ ಸುಳ್ಳಿನ ಸಾಕ್ಷ್ಯ ನೀಡಿದ್ದಾರೆ ಎಂದಿದ್ದಾರೆ.ಹೆಚ್‌ಡಿ ಕುಮಾರಸ್ವಾಮಿ ತಮ್ಮ ಘಟನೆತೆಗೆ ತಕ್ಕನಾಗಿ ನಡೆದುಕೊಳ್ಳಲಿ ಎಂದು ಡಿಕೆ ಶಿವಕುಮಾರ್ ಸಲಹೆ ನೀಡಿದ್ದಾರೆ. ಸುಖಾಸುಮ್ಮನೆ ಆರೋಪ ಮಾಡುತ್ತಿರುವ ಹೆಚ್‌ಡಿಕೆ ಇಲ್ಲ ಸಲ್ಲದ ವಿಚಾರ ಎಳೆದು ತರುತ್ತಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ. ಹಲೋ ಅಪ್ಪಾಜಿ ವಿಡಿಯೋ ಪ್ರಕರಣ, ಭಾರತ ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಸೇರಿದಂತೆ ಇಂದಿನ ಇಡಿ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.